ಕ್ರೀಡಾ ಬೆಟ್ಟಿಂಗ್ ಕಾನೂನು ಬದ್ಧಗೊಳಿಸಲು ಕಾನೂನು ಆಯೋಗ ಶಿಫಾರಸ್ಸು!

Published : Jul 06, 2018, 12:47 PM IST
ಕ್ರೀಡಾ ಬೆಟ್ಟಿಂಗ್ ಕಾನೂನು ಬದ್ಧಗೊಳಿಸಲು ಕಾನೂನು ಆಯೋಗ ಶಿಫಾರಸ್ಸು!

ಸಾರಾಂಶ

ಕ್ರಿಕೆಟ್ ಹಾಗೂ ಕ್ರೀಡಾ ಬೆಟ್ಟಿಂಗ್ ಭೂತ ಭಾರತದಲ್ಲಿ ಬಹುವಾಗಿ ಕಾಡುತ್ತಿದೆ. ಬೆಟ್ಟಿಂಗ್‌ನಿಂದಲೇ ಐಪಿಎಲ್‌ನ ಎರಡು ತಂಡಗಳು ಅಮಾನತ್ತು ಶಿಕ್ಷೆ ಅನುಭವಿಸಿದ ಊದಾಹರಣೆಗಳಿವೆ. ಇದೀಗ ಇದೇ ಬೆಟ್ಟಿಂಗ್ ಕಾನೂನು ಬದ್ಧಗೊಳಿಸಲು ಕಾನೂನು ಆಯೋಗ ಮುಂದಾಗಿದೆ. ಹಾಗಾದರೆ ಇನ್ಮುಂದೆ ಬೆಟ್ಟಿಂಗ್ ಕಾನೂನು ಬದ್ಧವಾಗುತ್ತಾ? ಇಲ್ಲಿದೆ ವಿವರ.

ನವದೆಹಲಿ(ಜು.06): ಕದ್ದು ಮುಚ್ಚಿ ಬೆಟ್ಟಿಂಗ್ ಆಡುತ್ತಿದ್ದವರು ಇನ್ಮುಂದೆ ರಾಜಾರೋಷವಾಗಿ ಬೆಟ್ಟಿಂಗ್ ಆಡಬಹುದು. ಇದೀಗ ಕಾನೂನು ಆಯೋಗ ಭಾರತದಲ್ಲಿ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳ ಬೆಟ್ಟಿಂಗ್ ಕಾನೂನು ಬದ್ಧಗೊಳಿಸಲು ಚಿಂತನೆ ನಡೆಸಿದೆ. 

ಭಾರತದಲ್ಲಿ ಕುದುರೆ ರೇಸ್ ಹೊರತು ಪಡಿಸಿ ಉಳಿದೆಲ್ಲಾ ಕ್ರೀಡೆಗಳಲ್ಲಿನ ಬೆಟ್ಟಿಂಗ್ ಕಾನೂನು ಬಾಹಿರ. ಇದೀಗ ಇತರ ದೇಶಗಳಲ್ಲಿರುವಂತೆ ಭಾರತದಲ್ಲೂ ಎಲ್ಲಾ ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಾನೂನು ಬದ್ಧಗೊಳಿಸಲು ಕಾನೂನು ಆಯೋಗ ಶಿಫಾರಸ್ಸು ಮಾಡಿದೆ. 

ಭಾರತದಲ್ಲಿ ಬೆಟ್ಟಿಂಗ್ ಕಾನೂನು ಬದ್ಧಗೊಳಿಸೋ ಚಿಂತೆ ಇಂದು ನಿನ್ನೆಯದ್ದಲ್ಲ. ಹಲವು ಬಾರಿ ಕಾನೂನು ಆಯೋಗ ಈ ಕುರಿತು ಚಿಂತನೆ ನಡೆಸಿದೆ.  ಕಾನೂನು ಬದ್ಧ ಬೆಟ್ಟಿಂಗ್‌ನಲ್ಲಿ ಪರಿಸ್ಥಿತಿಗೆ ತಕ್ಕಂತೆ ಹಲವು ಮಾರ್ಪಾಟು ತರಲು ಆಯೋಗ ನಿರ್ಧರಿಸಿದೆ.

ಆಯೋಗದ ಶಿಫಾರಸ್ಸು ಅಂಗೀಕಾರವಾಗೋದು ಕಷ್ಟ. ಕಾರಣ ಬೆಟ್ಟಿಂಗ್ ಕಾನೂನು ಬದ್ಧಗೊಳಿಸೋದಕ್ಕೆ ಭಾರೀ ವಿರೋಧವಿದೆ.  ಕ್ರೀಡೆಯಲ್ಲಿ ಬೆಟ್ಟಿಂಗ್ ಆವರಿಸಿದರೆ ಕ್ರೀಡಾ ಸ್ಪೂರ್ತಿ ಇಲ್ಲವಾಗುತ್ತೆ ಅನ್ನೋ ಬಲವಾದ ವಾದವೂ ಸೇರಿಕೊಂಡಿದೆ. ಹೀಗಾಗಿ ಆಯೋಗದ ನಿರ್ಧಾರಕ್ಕೆ ಅನುಮೋದನೆ ಸಿಗುತ್ತಾ ಅನ್ನೋ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಮನೆಮಾಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್‌ ಭಾರತ-ಶ್ರೀಲಂಕಾ ಸೆಮಿಫೈನಲ್ ರದ್ದಾದ್ರೆ ಫೈನಲ್‌ಗೇರೋದು ಯಾರು?
ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಜಾರ್ಖಂಡ್‌ಗೆ ಚೊಚ್ಚಲ ಕಿರೀಟ, ಶತಕ ಚಚ್ಚಿ ಅಪರೂಪದ ದಾಖಲೆ ಬರೆದ ಇಶಾನ್ ಕಿಶನ್!