ಪತ್ನಿಯರಿಗಾಗಿ ಹೋರಾಟ-ಬಿಸಿಸಿಐಗೆ ಮನವಿ ಸಲ್ಲಿಸಿದ ವಿರಾಟ್!

By Web DeskFirst Published Oct 7, 2018, 1:33 PM IST
Highlights

ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ಸರಣಿ ನಡುವೆ ನಾಯಕ ವಿರಾಟ್ ಕೊಹ್ಲಿ, ಇದೀಗ ಬಿಸಿಸಿಐಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸವನ್ನ ದೃಷ್ಟಿಯಲ್ಲಿಟ್ಟುಕೊಂಡು ಕೊಹ್ಲಿ ಸಲ್ಲಿಸಿದ ಮನವಿಯಲ್ಲೇನಿದೆ?  ಇಲ್ಲಿದೆ

ರಾಜ್‌ಕೋಟ್(ಅ.07): ಟೀಂ ಇಂಡಿಯಾದಲ್ಲೀಗ ಪತ್ನಿಯರಿಗಾಗಿ ಹೋರಾಟ ಆರಂಭಗೊಂಡಿದೆ. ಬಿಸಿಸಿಐ ನೂತನ ನಿಯಮಗಳ ಪ್ರಕಾರ ಕ್ರಿಕೆಟಿಗರ ಪತ್ನಿಯರು ಕೇವಲ 2 ವಾರ ಮಾತ್ರ ಕ್ರಿಕೆಟಿಗರ ಜೊತೆ ಇರಲು ಅವಕಾಶವಿದೆ. ಈ ನಿಯಮವನ್ನ ಸಡಿಲಗೊಳಿಸಬೇಕು ಎಂದು ಟೀಂ ಇಂಡಿಯಾ ಕ್ರಿಕೆಟಿಗರು ಇದೀಗ ಬಿಸಿಸಿಐಗೆ ಕದ ತಟ್ಟಿದ್ದಾರೆ.

ವೆಸ್ಟ್ಇಂಡೀಸ್ ಸರಣಿ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಸುದೀರ್ಘ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಅವರ ಪತ್ನಿಯರಿಗೂ ಇರಲು ಅವಕಾಶ ಕಲ್ಪಿಸಬೇಕು ಎಂದು ನಾಯಕ ವಿರಾಟ್ ಕೊಹ್ಲಿ ಮನವಿ ಸಲ್ಲಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಟೀಕೆಗಳು ವ್ಯಕ್ತವಾಗಿತ್ತು. ಇಷ್ಟೇ ಅಲ್ಲ, ಲಂಡನ್‌ನಲ್ಲಿರುವ ಭಾರತೀಯ ಹೈ  ಕಮಿಶನ್ ಕಚೇರಿ ಬೇಟಿ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಅನುಷ್ಕಾ ಶರ್ಮಾ ಕೂಡ ಹಾಜರಿದ್ದರು. ಇದು ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಹೀಗಾಗಿ ಬಿಸಿಸಿಐ ಹೊಸ ನೀತಿ ಜಾರಿಗೆ ತಂದಿತ್ತು.

ಹಳೇ ನಿಯಮದ ಬದಲು ಹೊಸ ನಿಯಮ ತರಲು ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ಸುದೀರ್ಘ ವಿದೇಶಿ ಪ್ರವಾಸದ ವೇಳೆ ಕ್ರಿಕೆಟಿಗರಿಗೆ ಪತ್ನಿಯರು ಜೊತೆಗಿರಬೇಕು ಎಂದು ಕೊಹ್ಲಿ ತಮ್ಮ ಮನವಿಯಲ್ಲಿ ಹೇಳಿದ್ದಾರೆ. ಶೀಘ್ರದಲ್ಲೇ ಬಿಸಿಸಿಐ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದೆ.

click me!