100 ಬಾಲ್ ಕ್ರಿಕೆಟ್‌ಗೆ ಕೊಹ್ಲಿ ನಿರಾಸಕ್ತಿ-ಇಕ್ಕಟ್ಟಿಗೆ ಸಿಲುಕಿದ ಇಸಿಬಿ

By Web DeskFirst Published Aug 30, 2018, 9:54 AM IST
Highlights

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಹೊಸ ಕ್ರಿಕೆಟ್ ಆಯೋಜನೆಗೆ ಮುಂದಾಗಿದೆ. ಆದರೆ ಆರಂಭದಲ್ಲೇ ಇದಕ್ಕೆ ವಿಘ್ನ ಎದುರಾಗಿದೆ. ಇಂಗ್ಲೆಂಡ್ ನೂತನ ಕ್ರಿಕೆಟ್‌ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರಾಸಕ್ತಿ ತೋರಿದ್ದಾರೆ.

ಲಂಡನ್(ಆ.30): ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರಸ್ತಾಪಿಸಿರುವ100 ಎಸೆತದ ಕ್ರಿಕೆಟ್ ಬಗ್ಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಿರಾಸಕ್ತಿ ತೋರಿಸಿದ್ದಾರೆ. ಈ ಮೂಲಕ ಇಸಿಬಿಯ ನೂತನ ಕ್ರಿಕೆಟ್ ಯೋಜನೆಗೆ ಆರಂಭದಲ್ಲೇ ಭಾರಿ ಹಿನ್ನಡೆಯಾಗಿದೆ.

‘ವಾಣಿಜ್ಯ ದೃಷ್ಟಿಯಿಂದ ಆಯೋಜಿಸುವ ಇಂತಹ ಪಂದ್ಯಗಳಿಂದ ಕ್ರಿಕೆಟ್‌ನ ಗುಣಮಟ್ಟ ಕುಸಿಯುತ್ತದೆ’ ಎಂದು ವಿರಾಟ್ ಬೇಸರ ವ್ಯಕ್ತಪಡಿಸಿದ್ದಾರೆ. 3 ಮಾದರಿಯಲ್ಲೂ ಟೀಂ ಇಂಡಿಯಾವನ್ನು ವಿರಾಟ್ ಮುನ್ನಡೆಸುತ್ತಿದ್ದು, ಐಪಿಎಲ್‌ನಲ್ಲೂ ಆರ್‌ಸಿಬಿ ನೇತೃತ್ವ ವಹಿಸಿದ್ದಾರೆ.

‘ಈಗಾಗಲೇ ಬೇಕಾದಷ್ಟು ಕ್ರಿಕೆಟ್ ಆಡುತ್ತಿದ್ದೇವೆ. ಕ್ರಿಕೆಟ್‌ನ ನೈಜತೆಯನ್ನು ವಾಣಿಜ್ಯದ ಅಂಶಗಳು ಕಸಿದು ಕೊಳ್ಳುತ್ತವೆ. ಇದು ಬೇಸರದ ಸಂಗತಿ’ ಎಂದಿದ್ದಾರೆ. ಹೀಗಾಗಿ 100 ಎಸೆತದ ಕ್ರಿಕೆಟ್‌ ಲಾಭಕ್ಕಿಂತ ಆಪತ್ತು ಹೆಚ್ಚು ಎಂದು ಕೊಹ್ಲಿ ಹೇಳಿದ್ದಾರೆ.

click me!