ಗ್ರೇಟ್ ಖಲಿ ಜೊತೆಗಿರುವ ವಿರಾಟ್ ಕೊಹ್ಲಿ ಫೋಟೋವೀಗ ವೈರಲ್..!

Published : Aug 07, 2017, 11:45 PM ISTUpdated : Apr 11, 2018, 12:54 PM IST
ಗ್ರೇಟ್ ಖಲಿ ಜೊತೆಗಿರುವ ವಿರಾಟ್ ಕೊಹ್ಲಿ ಫೋಟೋವೀಗ ವೈರಲ್..!

ಸಾರಾಂಶ

ಖಲಿಯನ್ನು ಭೇಟಿಯಾಗಿರುವ ಫೋಟೋವನ್ನು ವಿರಾಟ್ ಕೊಹ್ಲಿ ತಮ್ಮ ಟ್ವಿಟರ್‌ ಅಕೌಂಟ್'ನಲ್ಲಿ ಹಂಚಿಕೊಂಡಿದ್ದು, ‘ಗ್ರೇಟ್ ಖಲಿಯನ್ನು ಭೇಟಿಯಾಗಿದ್ದು ಅದ್ಭುತ ಅನುಭವ. ಎಂಥಾ ಅಸಾಧಾರಣ ಮನುಷ್ಯ ಈತ’ ಎಂದು ಬರೆದಿದ್ದಾರೆ.

ಕೊಲಂಬೊ(ಆ.08): ಡಬ್ಲ್ಯೂಡಬ್ಲ್ಯೂಇನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಗ್ರೇಟ್ ಖಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವಿದೇಶಿ ಕುಸ್ತಿಪಟುಗಳ ಎದೆಯಲ್ಲಿ ನಡುಕು ಹುಟ್ಟಿಸಿದ್ದ ಆಜಾನುಬಾಹು, ಮಾಜಿ ಚಾಂಪಿಯನ್ ಖಲಿ ಕೊಲಂಬೊದ ಹೋಟೆಲ್'ನಲ್ಲಿ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದಾರೆ.

ಖಲಿಯನ್ನು ಭೇಟಿಯಾಗಿರುವ ಫೋಟೋವನ್ನು ವಿರಾಟ್ ಕೊಹ್ಲಿ ತಮ್ಮ ಟ್ವಿಟರ್‌ ಅಕೌಂಟ್'ನಲ್ಲಿ ಹಂಚಿಕೊಂಡಿದ್ದು, ‘ಗ್ರೇಟ್ ಖಲಿಯನ್ನು ಭೇಟಿಯಾಗಿದ್ದು ಅದ್ಭುತ ಅನುಭವ. ಎಂಥಾ ಅಸಾಧಾರಣ ಮನುಷ್ಯ ಈತ’ ಎಂದು ಬರೆದಿದ್ದಾರೆ. ಖಲಿ ಮುಂದೆ ಕೊಹ್ಲಿ ಬಹಳ ಸಣ್ಣದಾಗಿ ಕಾಣಿಸುತ್ತಿದ್ದು, ಕೊಹ್ಲಿಯ ಮುಖಭಾವದಲ್ಲಿ ಅದು ತಿಳಿಯುತ್ತಿದೆ.

ವೇಗಿ ಉಮೇಶ್ ಯಾದವ್ ಸಹ ಖಲಿಯೊಂದಿಗೆ ಫೋಟೋ ತೆಗಿಸಿಕೊಂಡು ಟ್ವಿಟರ್‌'ನಲ್ಲಿ ಹಾಕಿದ್ದಾರೆ. ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಸಹ ಅವರೊಂದಿಗೆ ಫೋಟೋ ತೆಗಿಸಿಕೊಂಡಿದ್ದಾರೆ. ಆ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!