ಕೊನೆಯ ಒನ್'ಡೇ ಬಳಿಕ ಕೊಹ್ಲಿ ನಿರ್ಮಿಸಿದ ಅಪರೂಪದ ದಾಖಲೆಗಳಿವು

By Suvarna Web DeskFirst Published Feb 17, 2018, 4:20 PM IST
Highlights

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್'ನಲ್ಲಿದ್ದು, ರನ್ ಬೇಟೆ ಮುಂದುವರೆಸಿದ್ದಾರೆ. ಮುಂದಿನ ಏಳೆಂಟು ವರ್ಷ ಕೊಹ್ಲಿ ಇದೇ ಫಾರ್ಮ್'ನಲ್ಲಿ ಮುಂದುವರಿದರೆ ಕ್ರಿಕೆಟ್'ನ ಬಹುತೇಕ ದಾಖಲೆಗಳು ಕೊಹ್ಲಿ ಪಾಲಾಗುವುದಂತೂ ಗ್ಯಾರಂಟಿ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್'ನಲ್ಲಿದ್ದು, ರನ್ ಬೇಟೆ ಮುಂದುವರೆಸಿದ್ದಾರೆ. ಮುಂದಿನ ಏಳೆಂಟು ವರ್ಷ ಕೊಹ್ಲಿ ಇದೇ ಫಾರ್ಮ್'ನಲ್ಲಿ ಮುಂದುವರಿದರೆ ಕ್ರಿಕೆಟ್'ನ ಬಹುತೇಕ ದಾಖಲೆಗಳು ಕೊಹ್ಲಿ ಪಾಲಾಗುವುದಂತೂ ಗ್ಯಾರಂಟಿ. 6 ಪಂದ್ಯಗಳಲ್ಲಿ 3 ಶತಕ , ಅದ್ಭುತ ಕ್ರಿಕೆಟಿಗ. ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿ ಮತ್ತೊಂದು ಹಂತಕ್ಕೇರಿದ್ದಾರೆ ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ.
ನಿರಾಯಾಸವಾಗಿ ಶತಕ ಬಾರಿಸುತ್ತಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬಳಿಕ ಗುಡ್ಡೆ ಹಾಕಿದ ಅಪರೂಪದ ದಾಖಲೆಗಳಿವು.

* ಈ ಸರಣಿಯಲ್ಲಿ 558 ರನ್ ಕಲೆಹಾಕಿದ ಕೊಹ್ಲಿ: ದ್ವಿಪಕ್ಷೀಯ ಸರಣಿಯಲ್ಲಿ 500+ ರನ್ ದಾಖಲಿಸಿದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ ಕೊಹ್ಲಿ.

* ಏಕದಿನ ಸರಣಿಯೊಂದರಲ್ಲಿ ಸಚಿನ್ ಬಳಿಕ 500+ ರನ್ ಬಾರಿಸಿದ ಎರಡನೇ ಕ್ರಿಕೆಟಿಗ ಕೊಹ್ಲಿ.

* 35ನೇ ಶತಕ ಪೂರೈಸಿದ ಕೊಹ್ಲಿ, ನಾಯಕನಾದ ಬಳಿಕ ವಿರಾಟ್ ಬಾರಿಸಿದ 13ನೇ ಶತಕವಿದು. ನಾಯಕನಾಗಿ ಅತಿಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಎರಡನೇ ಸ್ಥಾನಕ್ಕೇರಿದ್ದಾರೆ.

* ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಅತಿಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ.

* ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಬಳಿಕ ಅತಿಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಭಾರತೀಯ ಕ್ರಿಕೆಟಿಗ ಎಂಬ ಶ್ರೇಯವೂ ಕೊಹ್ಲಿ(28) ಪಾಲಾಗಿದೆ.

* ಏಕದಿನ ಕ್ರಿಕೆಟ್'ನಲ್ಲಿ ಕೊಹ್ಲಿ 100 ಕ್ಯಾಚ್ ಹಿಡಿಯುವ ಮೂಲಕ ಈ ಸಾಧನೆ ಮಾಡಿದ 6ನೇ ಭಾರತೀಯ ಕ್ರಿಕೆಟಿಗನೆನಿಸಿದ್ದಾರೆ.

* ಏಕದಿನ ಕ್ರಿಕಟ್'ನಲ್ಲಿ ಅತಿವೇಗವಾಗಿ(200 ಇನಿಂಗ್ಸ್) 9500 ರನ್ ಪೂರೈಸಿದ ದಾಖಲೆ ನಿರ್ಮಾಣ ಮಾಡಿದ ಕೊಹ್ಲಿ.

* ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಅತಿವೇಗವಾಗಿ 17 ಸಾವಿರ ರನ್ ಪೂರೈಸಿದ ಕ್ರಿಕೆಟಿಗನಾಗಿ ಕೊಹ್ಲಿ(363 ಇನಿಂಗ್ಸ್)

* ವಿಶೇಷವೆಂದರೆ ಕೊಹ್ಲಿ ಬಾರಿಸಿದ 35 ಶತಕಗಳ ಪೈಕಿ 30 ಶತಕಗಳು ರನ್ ಚೇಸ್ ಮಾಡುವಾಗ ಬಾರಿಸಿದ್ದು..!    

click me!