
ಜೊಹಾನ್ಸ್'ಬರ್ಗ್(ಫೆ.17): ಅದ್ಭುತ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೊಂಡಾಡಿರುವ ಕೋಚ್ ರವಿಶಾಸ್ತ್ರಿ, ವಿರಾಟ್ ಪ್ರಸ್ತುತ ಜಗತ್ತಿನ ಶ್ರೇಷ್ಠ ಬ್ಯಾಟ್ಸ್'ಮನ್ ಎಂದು ಹೇಳಿದ್ದಾರೆ.
ಸಮಕಾಲೀನ ಕ್ರಿಕೆಟ್'ನಲ್ಲಿ ಕೊಹ್ಲಿ ಜತೆಗೆ ಜೋ ರೂಟ್, ಕೇನ್ ವಿಲಿಯಮ್ಸನ್ ಹಾಗೂ ಸ್ಟೀವ್ ಸ್ಮಿತ್ ಅವರನ್ನು ಶ್ರೇಷ್ಠ ಕ್ರಿಕೆಟಿಗರೆಂದು ಗುರುತಿಸಲಾಗುತ್ತಿದೆ. ಆದರೆ ಆಫ್ರಿಕಾ ತಂಡದ ಬೌಲಿಂಗ್ ಪಡೆಯನ್ನು ಯಶಸ್ವಿಯಾಗಿ ಎದುರಿಸಿದ ಕೊಹ್ಲಿ ಇವರೆಲ್ಲರಿಗಿಂತ ಶ್ರೇಷ್ಠ ಬ್ಯಾಟ್ಸ್;ಮನ್ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮುಕ್ತಾಯವಾದ ಏಕದಿನ ಸರಣಿಯಲ್ಲಿ ಕೊಹ್ಲಿ 558 ರನ್ ಸಿಡಿಸಿದ್ದರು. ಇದರಲ್ಲಿ 3 ಶತಕಗಳು ಸೇರಿದ್ದವು.
ಬ್ಯಾಟಿಂಗ್ ಜತೆಗೆ ವಿರಾಟ್ ನಾಯಕತ್ವವನ್ನೂ ಕೊಂಡಾಡಿರುವ ಶಾಸ್ತ್ರಿ, ಟೆಸ್ಟ್ ಸರಣಿಯಲ್ಲಿ 0-2 ಹಿನ್ನಡೆ ಅನುಭವಿಸಿದ್ದರೂ ಆ ಬಳಿಕ ಜೊಹಾನ್ಸ್'ಬರ್ಗ್'ನಲ್ಲಿ ಟೀಂ ಇಂಡಿಯಾ ನೀಡಿದ ಪ್ರದರ್ಶನಕ್ಕೆ ಕೊಹ್ಲಿ ನಾಯಕತ್ವ ಕಾರಣ. ಕೊಹ್ಲಿಯಂತಹ ನಾಯಕ ತಂಡವನ್ನು ಮುನ್ನಡೆಸಿದರೆ, ಉಳಿದವರು ಅವರನ್ನು ಹಿಂಬಾಲಿಸುತ್ತಾರೆ ಎಂದು ಶಾಸ್ತ್ರಿ ಗುಣಗಾನ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.