ತನ್ನ ಜೀವನದಲ್ಲಿ ಅನುಷ್ಕಾ ಎಷ್ಟು ಸ್ಪೆಷಲ್ ಎಂದು ಮೊದಲ ಬಾರಿ ಸಾರ್ವಜನಿಕವಾಗಿ ಹೇಳಿಕೊಂಡ ವಿರಾಟ್!

Published : Jun 13, 2017, 03:02 PM ISTUpdated : Apr 11, 2018, 12:54 PM IST
ತನ್ನ ಜೀವನದಲ್ಲಿ ಅನುಷ್ಕಾ ಎಷ್ಟು ಸ್ಪೆಷಲ್ ಎಂದು ಮೊದಲ ಬಾರಿ ಸಾರ್ವಜನಿಕವಾಗಿ ಹೇಳಿಕೊಂಡ ವಿರಾಟ್!

ಸಾರಾಂಶ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ನಡುವಿನ ಸಂಬಂಧದ ಕುರಿತಾದ ಸುದ್ದಿಗಳು ತುಂಬ ಸಮಯದಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಆದರೆ ಇಬ್ಬರೂ ಈ ಕುರಿತಾಗಿ ಯಾವತ್ತೂ ಸಾರ್ವಜನಿಕವಾಗಿ ಹೇಳಿಕೆ ನೀಡಿರಲಿಲ್ಲ. ಇನ್ನು ವಿರಾಟ್ ಹಲವಾರು ಬಾರಿ ಸಾಮಾಜಿಕ ಜಾಲಾತಾಣಗಳಲ್ಲಿ ಅನುಷ್ಕಾಳ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೂ ಬಳಕೆದಾರರು ಅವರಿಬ್ಬರ ನಡುವಿನ ಸಂಬಂಧದ ಕುರಿತಾಗಿ ಪ್ರಶ್ನಿಸಿದಾ ಉತ್ತರ ನೀಡದೇ ಸುಮ್ಮನಾಗಿದ್ದರು. ಆದರೀಗ ವಿರಾಟ್ ಕೊಹ್ಲಿ ಸ್ಟಾರ್ ಸ್ಪೋರ್ಟ್ಸ್'ಗೆ ನೀಡಿದ ಸಂದರ್ಶನವೊಂದರಲ್ಲಿ ಅನುಷ್ಕಾ ಕುರಿತಾಗಿ ಮೊದಲ ಬಾರಿ ಮಾತನಾಡಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.  ಇದೀಗ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು, ತನ್ನ ಜೀವನದಲ್ಲಿ ಅನುಷ್ಕಾಳ ಮಹತ್ವವೇನು ಎಂಬುವುದನ್ನು ವಿರಾಟ್ ತಿಳಿಸಿದ್ದಾರೆ.

ನವದೆಹಲಿ(ಜೂ.13): ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ನಡುವಿನ ಸಂಬಂಧದ ಕುರಿತಾದ ಸುದ್ದಿಗಳು ತುಂಬ ಸಮಯದಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಆದರೆ ಇಬ್ಬರೂ ಈ ಕುರಿತಾಗಿ ಯಾವತ್ತೂ ಸಾರ್ವಜನಿಕವಾಗಿ ಹೇಳಿಕೆ ನೀಡಿರಲಿಲ್ಲ. ಇನ್ನು ವಿರಾಟ್ ಹಲವಾರು ಬಾರಿ ಸಾಮಾಜಿಕ ಜಾಲಾತಾಣಗಳಲ್ಲಿ ಅನುಷ್ಕಾಳ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆದರೂ ಬಳಕೆದಾರರು ಅವರಿಬ್ಬರ ನಡುವಿನ ಸಂಬಂಧದ ಕುರಿತಾಗಿ ಪ್ರಶ್ನಿಸಿದಾಗ ಉತ್ತರ ನೀಡದೇ ಸುಮ್ಮನಾಗಿದ್ದರು. ಆದರೀಗ ವಿರಾಟ್ ಕೊಹ್ಲಿ ಸ್ಟಾರ್ ಸ್ಪೋರ್ಟ್ಸ್'ಗೆ ನೀಡಿದ ಸಂದರ್ಶನವೊಂದರಲ್ಲಿ ಅನುಷ್ಕಾ ಕುರಿತಾಗಿ ಮೊದಲ ಬಾರಿ ಮಾತನಾಡಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು, ತನ್ನ ಜೀವನದಲ್ಲಿ ಅನುಷ್ಕಾಳ ಮಹತ್ವವೇನು ಎಂಬುವುದನ್ನು ವಿರಾಟ್ ತಿಳಿಸಿದ್ದಾರೆ.

ಅನುಷ್ಕಾಳ ಬಗ್ಗೆ ವಿರಾಟ್ ಹೇಳಿದ್ದೇನು?

'ನಾನು ಮೊಹಾಲಿಯಲ್ಲಿ ಟೆಸ್ಟ್ ಸೀರಿಸ್ ಆಡುತ್ತಿದ್ದೆ. ಈ ನಡುವೆ ಅನುಷ್ಕಾ ನನ್ನನ್ನು ಭೇಟಿಯಾಗಲು ಬಂದಿದ್ದಳು' ಎಂದಿರುವ ವಿರಾಟ್ ಮುಂದೆ ಮಾತನಾಡುತ್ತಾ 'ನಮ್ಮ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿತ್ತು. ಆ ದಿನಗಳಲ್ಲಿ ಮೆಲ್ಬರ್ನ್'ನಲ್ಲಿ ನಾನು ಅನುಷ್ಕಾಳೊಂದಿಗೇ ಇದ್ದೆ. ಅದೇ ಸಮಯದಲ್ಲಿ ನನ್ನನ್ನು ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕನನ್ನಾಗಿ ಘೋಷಿಸಲಾಯ್ತು ಇದು ನನ್ನ ಜೀವನದ ಬಹಳ ಅದ್ಭುತ ಕ್ಷಣವಾಗಿತ್ತು. ನಾವಿಬ್ಬರೂ ನನ್ನ ಜೀವನದ ಈ ಪ್ರಮುಖ ಕ್ಷಣವನ್ನು ಒಟ್ಟಿಗೆ ಕಳೆದಿದ್ದೆವೆ' ಎಂದಿದ್ದಾರೆ.

ಬಳಿಕ ಮಾತನಾಡಿದ ವಿರಾಟ್ 'ಮೊಹಾಲಿಯಲ್ಲೂ ಅವರು(BCCI) ನನ್ನೊಂದಿಗೆ ಮೊದಲೇ ಮಾತುಕತೆ ನಡೆಸಿದ್ದರು. ಕೂಡಲೇ ನಾನು ಅನುಷ್ಕಾಗೆ ಕರೆ ಮಾಡಿ ಈ ಕುರಿತಾಗಿ ವಿವರಿಸಿದೆ. ಮಾತನಾಡುತ್ತಿರುವಾಗಲೇ ನಾನು ಕ್ರಿಕೆಟ್ ವೃತ್ತಿ ಬದುಕಿನ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ನಾನು ಅಕಾಡೆಮಿ ಸೇರಿದ ಬಳಿಕದ ಪ್ರತಿಯೊಂದು ಕ್ಷಣಗಳನ್ನು ನೆನೆಸಿಕೊಂಡು ನಾನು ಭಾವುಕನಾಗಿ ಅಳಲಾರಂಭಿಸಿದೆ. ಯಾಕೆಂದರೆ ನಾನು ಈ ಸ್ಥಾನ ಪಡೆಕೊಳ್ಳುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ. ನನ್ನ ಜೀವನದ ಪ್ರತಿಯೊಂದು ಅದ್ಭುತ ಕ್ಷಣಗಳನ್ನು ನಾನು ಅನುಷ್ಕಾಳೊಂದಿಗೆ ಹಂಚಿಕೊಂಡಿದ್ದೇನೆ' ಎಂದಿದ್ದಾರೆ. ಇವರ ಮಾತುಗಳಿಂದ ಅನುಷ್ಕಾ ಅವರ ಜೀವನದಲ್ಲಿ ಅದೆಷ್ಟು ಮಹತ್ವದ ಪಾತ್ರ ವಹಿಸುತ್ತಾರೆ ಎಂಬುವುದು ಸ್ಪಷ್ಟವಾಗುತ್ತದೆ.

ಇನ್ನು ಇವರಿಬ್ಬರು ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ದಿಗ್ಗಜರ ಮದುವೆ ಕಾರ್ಯಕ್ರಮಗಳಲ್ಲದೆ ಅನುಷ್ಕಾಳ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಇವರು ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್-19 ಏಷ್ಯಾಕಪ್: ಭಾರತದ ಆಟಗಾರರ ಮೇಲೆ ಮೊಹ್ಸಿನ್ ನಖ್ವಿ ಗರಂ, ಐಸಿಸಿಗೆ ದೂರು ನೀಡಲು ರೆಡಿಯಾದ ಪಾಕ್ ಸಚಿವ!
ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಬಿಗ್ ಶಾಕ್; ಚಿನ್ನಸ್ವಾಮಿ ಸ್ಟೇಡಿಯಂನಿಂದ ಇಲ್ಲಿಗೆ ಮ್ಯಾಚ್ ಶಿಫ್ಟ್!