ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಬ್ಬರಕ್ಕೆ ದಿಗ್ಗಜರ ದಾಖಲೆ ಪುಡಿ ಪುಡಿಯಾಗಿದೆ. ಒಂದು ದಶಕದಲ್ಲಿ ಕೊಹ್ಲಿ 20 ಸಾವಿರ ಅಂತಾರಾಷ್ಟ್ರೀಯ ರನ್ ಸಿಡಿಸೋ ಮೂಲಕ ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್ ಸೇರಿದಂತೆ ಎಲ್ಲಾ ಲೆಜೆಂಡ್ ಬ್ಯಾಟ್ಸ್‌ಮನ್ ದಾಖಲೆ ಬ್ರೇಕ್ ಮಾಡಿದ್ದಾರೆ.
ಟ್ರಿನಿಡಾಡ್(ಆ.15): ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಐತಿಹಾಸಿಕ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೂ ಸ್ಮರಣೀಯವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕೊಹ್ಲಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಶತಕದ ಮೂಲಕ ಕೊಹ್ಲಿ ಹಲವು ದಾಖಲೆ ಪುಡಿ ಮಾಡೋ ಮೂಲಕ ಸ್ವಾತಂತ್ರ್ಯ ದಿನಾಚರಣೆ ಸಂಭ್ರವನ್ನು ಇಮ್ಮಡಿಗೊಳಿಸಿದ್ದಾರೆ.
ಇದನ್ನೂ ಓದಿ: ಟಿ20 ಸರಣಿ ಬಳಿಕ, ಏಕದಿನ ಸರಣಿಯಲ್ಲೂ ಭಾರತ ಚಾಂಪಿಯನ್!
ವಿಂಡೀಸ್ ವಿರುದ್ದ ಅಜೇಯ 114 ರನ್ ಸಿಡಿಸೋ ಮೂಲಕ ಕೊಹ್ಲಿ ಒಂದು ದಶಕದಲ್ಲಿ 20,000 ಅಂತಾರಾಷ್ಟ್ರೀಯ ರನ್ ಪೂರೈಸಿದ ಏಕೈಕ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಒಂದು ದಶಕದಲ್ಲಿ 18962 ರನ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ಕೊಹ್ಲಿ 20,000 ರನ್ ಸಿಡಿಸೋ ಮೂಲಕ ಹಿಂದಿನಾ ಎಲ್ಲಾ ದಾಖಲೆ ಮುರಿದಿದ್ದಾರೆ.
ಇದನ್ನೂ ಓದಿ: ಅಂತಿಮ ಪಂದ್ಯದಲ್ಲಿ ಗೇಲ್ ಅಬ್ಬರ; ಶುಭಕೋರಿದ ಕೊಹ್ಲಿ ಬಾಯ್ಸ್!
2010ರಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆದರೆ 2008ರಲ್ಲೇ ಕೊಹ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದರು. 2010 ರಿಂದ ಒಂದು ದಶತಕದಲ್ಲಿ ಕೊಹ್ಲಿ 20502 ರನ್ ಸಿಡಿಸಿದ್ದಾರೆ. ರಿಕಿ ಪಾಂಟಿಂಗ್ 2000 ಇಸವಿಯಲ್ಲಿ 18962 ರನ್ ಪೂರೈಸೋ ಮೂಲಕ ಇತಿಹಾಸ ರಚಿಸಿದ್ದರು. ಸೌತ್ ಆಫ್ರಿಕಾ ದಿಗ್ಗಜ ಜಾಕ್ ಕಾಲಿಸ್ 16777 ರನ್ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾದ ಮಹೇಲಾ ಜಯವರ್ದನೆ ಹಾಗೂ ಕುಮಾರ ಸಂಗಕ್ಕಾರ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಒಂದು ದಶಕದಲ್ಲಿ ಮಹೇಲಾ 16304 ಹಾಗೂ ಸಂಗಕ್ಕಾರ 15999 ರನ್ ಸಿಡಿಸಿದ್ದಾರೆ. ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 15962 ರನ್ ಸಿಡಿಸೋ ಮೂಲಕ 6ನೇ ಸ್ಥಾನದಲ್ಲಿದ್ದಾರೆ. 7ನೇ ಸ್ಥಾನದಲ್ಲಿರುವ ರಾಹುಲ್ ದ್ರಾವಿಡ್ ಒಂದು ದಶಕದಲ್ಲಿ 15853 ರನ್ ಸಿಡಿಸಿದ್ದಾರೆ.