ಟೀಂ ಇಂಡಿಯಾ ನಾಯಕನಿಗೆ ಪಾಕ್ ವೇಗಿ ಫ್ರೆಂಡ್: ಇಬ್ಬರು ಗೆಳೆಯರಾಗಿದ್ದು ಹೇಗೆ ಗೊತ್ತಾ?

By Suvarna Web DeskFirst Published Oct 21, 2017, 3:21 PM IST
Highlights

ಭಾರತ - ಪಾಕಿಸ್ತಾನ ನಡುವಿನ ಸಂಬಂಧ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಟೀಂ ಇಂಡಿಯಾದ ಆಟಗಾರನಿಗೂ ಪಾಕ್​​ ಆಟಗಾರನಿಗು ಸ್ನೇಹ ಮೊಳಕೆಯೊಡೆದಿದೆ. ಒಬ್ಬರನ್ನೊಬ್ಬರು ಪರಸ್ಪರ ಗೌರವಿಸುತ್ತಿದ್ದಾರೆ. ಅಷ್ಟೇ ಅಲ್ಲ ಆಗ್ಗಾಗೆ ಗಿಫ್ಟ್​​ಗಳೂ ಎಕ್ಸ್​​​ಚೇಂಜ್​ ಆಗ್ತಿವೆ. ಯಾವ ಆಟಗಾರರಪ್ಪ ಅಷ್ಟು ಕ್ಲೋಸ್​​​ ಆಗಿರೋದು ಅಂತೀರಾ..? ಇಲ್ಲಿದೆ ನೋಡಿ ವಿವರ

ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಒಬ್ಬರನ್ನ ಕಂಡ್ರೆ ಮತ್ತೊಬ್ಬರಿಗೆ ಆಗೋದೆ ಇಲ್ಲ. ಜಾಗತಿಕವಾಗಿ ಮುಗಿಸಲು ಎರಡೂ ದೇಶಗಳು ಇನ್ನಿಲದ ಕಸರತ್ತುಗಳು ನಡೆಯುತ್ತಲೇ ಇದೆ. ಎರಡೂ ದೇಶದ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪದಗಳಲ್ಲಿ ಪರಸ್ಪರ ನಿಂದಿಸುತ್ತಿದ್ದಾರೆ. ಇದು ಕ್ರಿಕೆಟ್​​ ಅನ್ನೂ ಹೊರತುಪಡಿಸಿಲ್ಲ. ಇವೆರಡು ತಂಡಗಳು ಬೈಲಾಟರಲ್​​ ಸೀರಿಸ್​​​ ಆಡಿ ಎಷ್ಟೋ ವರ್ಷಗಳೇ ಕಳೆದಿವೆ. ICC ಟೂರ್ನಿಗಳಲ್ಲಿ ಅಲ್ಲೋ ಇಲ್ಲೋ ಒಂದೆರಡು ಪಂದ್ಯಗಳನ್ನ ಬಿಟ್ರೆ ಇವೆರಡೂ ತಂಡಗಳು ಪರಸ್ಪರ ಮೀಟಾಗೋದೇ ಇಲ್ಲ.

ದ್ವೇಷದ ನಡುವೆ ಒಡೆದಿದೆ ಸ್ನೇಹದ ಮೊಳಕೆ

ಇವೆರಡೂ ದೇಶಗಳು ಪರಸ್ಪರ ದ್ವೇಷ ಸಾಧಿಸುತ್ತಿವೆ. ಎರಡೂ ದೇಶದ ನಡುವಿನ ಎಲ್ಲ ಸಂಬಂಧಗಳು ಕಡಿತಗೊಂಡಿವೆ. ಹೀಗಿದ್ರೂ ಎರಡೂ ದೇಶದ ಕ್ರಿಕೆಟ್​​​ ಆಟಗಾರರಿಬ್ಬರ ನಡುವೆ ಸ್ನೇಹ ಮೊಳಕೆ ಒಡೆದಿದೆ. ಇಬ್ಬರ ದೇಶ ಬೇರೆಯಾದ್ರೂ ಮನಸ್ಸು ಒಂದೇ ಆಗಿದೆ. ಒಬ್ಬರಿಗೊಬ್ಬರೂ ತುಂಬಾನೆ ಗೌರವಿಸುತ್ತಿದ್ದಾರೆ.

ಟೀಂ ಇಂಡಿಯಾ ನಾಯಕನಿಗೆ ಪಾಕ್​​ ವೇಗಿ ಫ್ರೆಂಡ್​​​

ಈ ಬೆಸ್ಟ್​​​ ಫ್ರೆಂಡ್ಸ್​​​​ ಟೀಂ ಇಂಡಿಯಾದ ನಾಯಕ ವಿರಾಟ್​​​ ಕೊಹ್ಲಿ ಮತ್ತು ಪಾಕ್​ ವೇಗಿ ಮೊಹಮ್ಮದ್​​​ ಆಮೀರ್​​​​. ಇದು ನಿಮಗೆ ಆಶ್ಚರ್ಯವೆನಿಸಿದ್ರೂ ನಿಜ. ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಇವರಿಬ್ಬರು ಮೀಟಾದ್ರೂ ಅವರ ಸ್ನೇಹ ಗಾಢವಾಗಿ ಬೆಳದುಬಿಟ್ಟಿದೆ. ಒಬ್ಬರನೊಬ್ಬರು ಗೌರವಿಸುತ್ತಾರೆ, ಪ್ರೀತಿಸುತ್ತಾರೆ.

ಒಬ್ಬರ ಯಶಸ್ಸನ್ನ ಕೊಂಡಾಡೋ ಮತ್ತೊಬ್ಬರು

ಅಷ್ಟಕ್ಕೂ ಇವರ ಫ್ರೆಂಡ್​​​ಶಿಪ್​ ಶುರುವಾಗಿದ್ದು ಯಾವಾಗ ಗೊತ್ತಾ..? ಬಾಂಗ್ಲಾದಲ್ಲಿ ನಡೆದ 2016ರ ಏಷ್ಯಾಕಪ್​ನಲ್ಲಿ. ಅಮೀರ್​​ 5 ವರ್ಷಗಳ ನಿಷೇಧವನ್ನ ಮುಗಿಸಿಕೊಂಡು ಪಾಕ್​ ತಂಡಕ್ಕೆ ಎಂಟ್ರಿ ಕೊಟ್ಟಾಗ ಅವರ ತಂಡದಲ್ಲೇ ಅಪಸ್ವರಗಳೆದ್ದಿದ್ವು. ಅವರನ್ನ ಕಂಡ್ರೆ ಯಾರಿಗೂ ಆಗ್ತಿರಲಿಲ್ಲ. ಈ ವೇಳೆಯಲ್ಲಿ ಆಮೀರ್​​​​ ಸ್ಥಿತಿಗೆ ಮರುಗಿದವರು ಕೊಹ್ಲಿ. ಏಷ್ಯಾಕಪ್​​ನಲ್ಲಿ ಅಂದು ಆಮೀರ್​​ ಕೊಹ್ಲಿಯನ್ನ ಇನ್ನಿಲ್ಲದಂತೆ ಕಾಡಿದ್ರೂ ಅವರ ಮನಗೆದ್ದುಬಿಟ್ಟಿದ್ರು. ಏಷ್ಯಾಕಪ್​ ನಂತರ ಟಿ20 ವಿಶ್ವಕಪ್​​​ಗಾಗಿ ಭಾರತಕ್ಕೆ ಆಮೀರ್​​​​ ಬಂದಾಗ ಕೊಹ್ಲಿ ತಮ್ಮ ಫೇವರೇಟ್​​​ ಬ್ಯಾಟನ್ನ ಗಿಫ್ಟ್​​ ಆಗಿ ನೀಡಿದ್ರು.

ನಂತರ ಬಾರ್ತಬರ್ತ ಇವರ ಸ್ನೇಹ ಗಾಢವಾಗಿ ಬೆಳೆಯಲಾರಂಭಿಸಿತು. ಒಬ್ಬರ ಯಶಸ್ಸನ್ನ ಮತ್ತೊಬ್ಬರು ಕೊಂಡಾಡಲು ಶುರುಮಾಡಿದ್ರು. ಪರಸ್ಪರ ಮೀಟಾಗದೇ ಇದ್ರೂ ಒಬ್ಬರ ಇನ್ಫಾರ್ಮೆಷನ್​​ ಅನ್ನ ಮೊತ್ತೊಬ್ಬರು ಕಲೆಹಾಕ್ತಿದ್ರು. ಆದರೆ ಇವರ ಸ್ನೇಹದ ಬಗ್ಗೆ ಮೊದಲು ಜಾಗತಿಕವಾಗಿ ಬಹಿರಂಗವಾಗಿದು. ಮೊನ್ನೆ ಆಮೀರ್​​ ಖಾನ್​ ಜೊತೆಗಿನ ಸಂದರ್ಶನವೊಂದರಲ್ಲಿ ಕೊಹ್ಲಿ ಆಮೀರ್​​​ ಕುರಿತು ಮಾತನ್ನಾಡಿದಾಗ

ಕೊಹ್ಲಿಯ ಈ ಮಾತು ದೂರದ ಪಾಕಿಸ್ತಾನದಲ್ಲಿರುವ ಆಮೀರ್'​​ಗೆ ಕೇಳಿಸಿತ್ತು. ವಿಶ್ವದ ಬೆಸ್ಟ್​​​ ಬ್ಯಾಟ್ಸ್​​​'ಮನ್​​ ಕೊಹ್ಲಿ ಹೀಗೆ ನನ್ನ ಬಗ್ಗೆ ಹೇಳಿರೋದು ನನಗೆ ಅತೀವ ಸಂತಸ ತಂದಿದೆ. ನನ್ನನ್ನ ಹೊಗಳಿರೋದು ಅವರ ದೊಡ್ಡ ಗುಣ ಎಂದೆಲ್ಲಾ ಅಮೀರ್​ ಪ್ರತಿಕರಿಯಿಸಿದ್ದಾರೆ.

ಒಟ್ಟಿನಲ್ಲಿ ಇವರ ಸ್ನೇಹ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರೋದು ಮಾತ್ರ ಸುಳ್ಳಲ್ಲ. ಆದ್ರೆ ಇಂತಹ ಸ್ನೇಹಗಳು ಪಾಕ್​ ಮತ್ತು ಭಾರತೀಯರ ನಡುವೆ ಹೆಚ್ಚಾಗಬೇಕು. ಎರಡೂ ದೇಶದ ನಡುವೆ ಸಂಬಂಧಗಳು ವೃದ್ದಿಸಬೇಕು ಎಂಬುದಷ್ಟೇ ನಮ್ಮ ಆಶಯ.

 

click me!