
ಮುಂಬೈ(ಜೂ.22): ರಸ್ತೆಯಲ್ಲಿ ಕಸ ಎಸೆದು ನಟಿ ಅನುಷ್ಕಾ ಶರ್ಮಾ ಕೆಂಗಣ್ಣಿಗೆ ಗುರಿಯಾಗಿದ್ದ ಅರ್ಹಾನ್ ಸಿಂಗ್ ಇದೀಗ ವಿರುಷ್ಕಾ ಜೋಡಿ ವಿರುದ್ಧ ಸಮರ ಸಾರಿದ್ದಾರೆ. ಈ ಮೂಲಕ ಕಸ ಎಸೆದ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳೋ ಸಾಧ್ಯತೆ ಇದೆ.
ದಾರಿಯಲ್ಲಿ ಕಸ ಎಸೆದ ಕಾರಣಕ್ಕೆ ನಟಿ ಅನುಷ್ಕಾ ಶರ್ಮಾಳಿಂದ ಸ್ವಚ್ಚತೆಯ ಪಾಠ ಹೇಳಿಸಿಕೊಂಡಿದ್ದ ಅರ್ಹಾನ್ ಸಿಂಗ್ ಇದೀಗ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಪ್ರಕರಣ ಕುರಿತು ಅರ್ಹಾನ್ ಸಿಂಗ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿಗೆ ಲೀಗಲ್ ನೊಟಿಸ್ ಕಳುಹಿಸಿದ್ದಾರೆ.
ಇದನ್ನು ಓದಿ:‘ನಿಮ್ಮ ಬಾಯಿಂದ ಬಂದ ಮಾತು ಕಸಕ್ಕಿಂತ ಕೀಳು'..!
ವಿರಾಟ್ ಕೊಹ್ಲಿ ಕ್ರಿಕೆಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರೆ, ಪತ್ನಿ ಅನುಷ್ಕಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಾಗಿ ಅರ್ಹಾನ್ ನೊಟಿಸ್‌ಗೆ ಉತ್ತರ ಸಿಕ್ಕಿಲ್ಲ. ಕಾನೂನು ಹೋರಾಟಕ್ಕಿಳಿದಿರುವ ಅರ್ಹಾನ್ ಪ್ರಕರಣವನ್ನ ಸದ್ಯಕ್ಕೆ ಮುಗಿಸೋ ಲಕ್ಷಣ ಕಾಣುತ್ತಿಲ್ಲ.
ಇದನ್ನು ಓದಿ: ವಿರಾಟ್ ಶೇರ್ ಮಾಡಿದ ಅನುಷ್ಕಾರ ವಿಡಿಯೋ ವೈರಲ್..!
ತನ್ನ ತಪ್ಪಿಗೆ ಕ್ಷಮೆ ಕೇಳಿದ್ದರೂ ಕೂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಪ್ರಚಾರದ ಗಿಮಿಕ್ ಮಾಡುತ್ತಿದ್ದಾರೆ ಎಂದು ಅರ್ಹಾನ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದರು. ಇದೀಗ ಲೀಗಲ್ ನೊಟಿಸ್ ಕಳುಹಿಸೋ ಮೂಲಕ ಹೋರಾಟದ ತೀವ್ರತೆಯನ್ನ ಹೆಚ್ಚಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.