40ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ..!

By Web Desk  |  First Published Mar 5, 2019, 4:46 PM IST

ವಿರಾಟ್ ಕೊಹ್ಲಿ 107 ಎಸೆತಗಳನ್ನು ಎದುರಿಸಿ 9 ಬೌಂಡರಿ ನೆರವಿನೊಂದಿಗೆ ನೂರು ರನ್ ಪೂರೈಸಿದರು. ಈ ಶತಕದೊಂದಿಗೆ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬಳಿಕ 40 ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. 


ನಾಗ್ಪುರ[ಮಾ.05]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ಕೊಹ್ಲಿ ಏಕದಿನ ಕ್ರಿಕೆಟ್ ವೃತ್ತಿಜೀವನದ 40ನೇ ಶತಕವಾಗಿದೆ.

ಆಸಿಸ್ ವಿರುದ್ಧ ದಿಗ್ಗಜ ನಾಯಕರ ದಾಖಲೆ ಪುಡಿಮಾಡಿದ ಕೊಹ್ಲಿ

Tap to resize

Latest Videos

undefined

ವಿರಾಟ್ ಕೊಹ್ಲಿ 107 ಎಸೆತಗಳನ್ನು ಎದುರಿಸಿ 9 ಬೌಂಡರಿ ನೆರವಿನೊಂದಿಗೆ ನೂರು ರನ್ ಪೂರೈಸಿದರು. ಈ ಶತಕದೊಂದಿಗೆ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬಳಿಕ 40 ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ ಸಚಿನ್ ತೆಂಡುಲ್ಕರ್ 452 ಇನ್ನಿಂಗ್ಸ್’ಗಳಲ್ಲಿ 49 ಶತಕ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೇವಲ 216 ಇನ್ನಿಂಗ್ಸ್’ಗಳಲ್ಲಿ 40ನೇ ಶತಕ ಪೂರೈಸಿದ್ದಾರೆ. 

ಈ ಶತಕದೊಂದಿಗೆ ಏಷ್ಯಾದಲ್ಲಿ ಅತಿಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಏಷ್ಯಾದಲ್ಲಿ ಏಕದಿನ ಹಾಗೂ ಟೆಸ್ಟ್’ನಲ್ಲಿ ಒಟ್ಟು 40 ಶತಕ ಸಿಡಿಸಿದ್ದಾರೆ. ಏಷ್ಯಾದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್[71] ಅಗ್ರಸ್ಥಾನದಲ್ಲಿದ್ದು, ಶ್ರೀಲಂಕಾದ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಕುಮಾರ್ ಸಂಗಕ್ಕರ[45] ಎರಡನೇ ಸ್ಥಾನದಲ್ಲಿದ್ದಾರೆ.  

click me!