ನಾಗ್ಪುರ ಪಂದ್ಯ: ಜಂಪಾ ಮೋಡಿಗೆ ತತ್ತರಿಸಿದ ಭಾರತ

By Web DeskFirst Published Mar 5, 2019, 4:03 PM IST
Highlights

ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡುತ್ತಿದ್ದ ಟೀಂ ಇಂಡಿಯಾ ದಿಢೀರ್ ವಿಕೆಟ್ ಪತನಕ್ಕೆ ಗುರಿಯಾಗಿದೆ. ನಾಗ್ಪುರ ಪಂದ್ಯದಲ್ಲಿ ಯು ಟರ್ನ್ ತೆಗೆದುಕೊಂಡಿರುವ ಭಾರತ ರನ್‌ಗಾಗಿ ಹೋರಾಟ ನಡೆಸುತ್ತಿದೆ. 

ನಾಗ್ಪುರ(ಮಾ.05): ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ದಿಢೀರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.  ವಿರಾಟ್ ಕೊಹ್ಲಿ ಹಾಗೂ ವಿಜಯ್ ಶಂಕರ್ ಜೊತೆಯಾಟದಿಂದ ಚೇತರಿಸಿಕೊಂಡಿದ್ದ ಭಾರತ ಇದೀಗ ಮತ್ತೆ ವಿಕೆಟ್ ಪತನಕ್ಕೆ ತುತ್ತಾಗಿದೆ.

ಇದನ್ನೂ ಓದಿ: ಆಸಿಸ್ ವಿರುದ್ಧ ದಿಗ್ಗಜ ನಾಯಕರ ದಾಖಲೆ ಪುಡಿಮಾಡಿದ ಕೊಹ್ಲಿ

ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ 21 ರನ್ ಸಿಡಿಸಿ ನಿರ್ಗಮಿಸಿದರು.  ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಜಯ್ ಶಂಕರ್ ಜೊತೆಯಾಟದಿಂದ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಆದರೆ ವಿಜಯ್ ಶಂಕರ್ 46 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು.

ಇದನ್ನೂ ಓದಿ: ಐತಿಹಾಸಿಕ ದಾಖಲೆಯ ಹೊಸ್ತಿಲಲ್ಲಿ ಟೀಂ ಇಂಡಿಯಾ..!

ಆ್ಯಡಂ ಜಂಪಾ ಮೋಡಿ ತತ್ತರಿಸಿದ ಭಾರತ, ಕೇದಾರ್ ಜಾಧವ್ ಹಾಗೂ ಎಂ.ಎಸ್.ಧೋನಿ ವಿಕೆಟ್ ಕಳೆದುಕೊಂಡಿತು. ಈ ಮೂಲಕ 171 ರನ್‌ಗೆ 6 ವಿಕೆಟ್ ಕಳೆದುಕೊಂಡಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಶಂಕರ್ ಹೊರತು  ಪಡಿಸಿದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.

click me!