ವಿನೇಶ್‌ ಫೋಗಟ್‌, ಭಜರಂಗ್‌ ಪೂನಿಯಾ ಏಷ್ಯಾಡ್‌ ಸ್ಪರ್ಧೆ ಮಾಡಲು ಹೊಸ ಷರತ್ತು?

By Kannadaprabha News  |  First Published Jul 26, 2023, 11:41 AM IST

ವಿನೇಶ್, ಭಜರಂಗ್‌ಗೆ ಏಷ್ಯಾಡ್‌ ಸ್ಪರ್ಧೆಗೂ ಮುನ್ನ ಹೊಸ ಷರತ್ತು
ಈ ಇಬ್ಬರೂ ವಿಶ್ವ ಚಾಂಪಿಯನ್‌ಶಿಪ್‌ ಟ್ರಯಲ್ಸ್‌ನಲ್ಲಿ ಗೆದ್ದರಷ್ಟೇ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ?
ಸೆಪ್ಟೆಂಬರ್ 16ರಿಂದ 25ರ ವರೆಗೂ ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌


ನವದೆಹಲಿ(ಜು.26): ಏಷ್ಯನ್‌ ಗೇಮ್ಸ್‌ಗೆ ಸಿಕ್ಕಿರುವ ನೇರ ಪ್ರವೇಶವನ್ನು ಭಜರಂಗ್‌ ಪೂನಿಯಾ ಹಾಗೂ ವಿನೇಶ್‌ ಫೋಗಟ್‌ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಇಬ್ಬರೂ ವಿಶ್ವ ಚಾಂಪಿಯನ್‌ಶಿಪ್‌ ಟ್ರಯಲ್ಸ್‌ನಲ್ಲಿ ಗೆದ್ದರಷ್ಟೇ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಭಾರತೀಯ ಕುಸ್ತಿ ಫೆಡರೇಶನ್‌ನ ತಾತ್ಕಾಲಿಕ ಸಮಿತಿಯು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ)ಗೆ ಶಿಫರಾಸು ಮಾಡಿದೆ.

ಸೆಪ್ಟೆಂಬರ್ 16ರಿಂದ 25ರ ವರೆಗೂ ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ನಡೆಯಲಿದ್ದು, ಅದಕ್ಕಾಗಿ ಸದ್ಯದಲ್ಲೇ ಡಬ್ಲ್ಯುಎಫ್‌ಐ ಆಯ್ಕೆ ಟ್ರಯಲ್ಸ್‌ ನಡೆಸಲಿದೆ. ಸೆಪ್ಟೆಂಬರ್ 23ರಿಂದ ಏಷ್ಯನ್‌ ಗೇಮ್ಸ್‌ ಆರಂಭಗೊಳ್ಳಲಿದೆ.

Latest Videos

undefined

ಟ್ರಯಲ್ಸ್‌ನಿಂದ ಪಲಾಯನ ಮಾಡಿಲ್ಲ: ವಿನೇಶ್‌ ಸ್ಪಷ್ಟನೆ..!

ನವದೆಹಲಿ: ಏಷ್ಯನ್‌ ಗೇಮ್ಸ್‌ಗೆ ನೇರ ಪ್ರವೇಶ ಪಡೆದಿರುವ ಕುಸ್ತಿಪಟುಗಳಾದ ವಿನೇಶ್ ಫೋಗಟ್‌ ಹಾಗೂ ಭಜರಂಗ್ ಪೂನಿಯಾ ಮೌನ ಮುರಿದಿದ್ದು, ತಾವು ಆಯ್ಕೆ ಟ್ರಯಲ್ಸ್‌ನಿಂದ ಪಲಾಯನ ಮಾಡಿಲ್ಲ, ಬದಲಿಗೆ ಹೆಚ್ಚಿನ ಸಮಯಾವಕಾಶ ಕೇಳಿದ್ದೇವಷ್ಟೇ ಎಂದಿದ್ದಾರೆ. 

ಸೋಮವಾರ ತಮ್ಮ ಆಯ್ಕೆಯ ಬಗ್ಗೆ ಎದ್ದಿರುವ ವಿವಾದಕ್ಕೆ ಕುರಿತಂತೆ ಪ್ರತಿಕ್ರಿಯಿಸಿರುವ ತಾರಾ ಕುಸ್ತಿಪಟುಗಳು, "ನಾವು ಆಯ್ಕೆ ಟ್ರಯಲ್ಸ್ ವಿರೋದಿಸಿಲ್ಲ. ನಮ್ಮ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ್ದು, ನಮ್ಮ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ್ದು ಬೇಸರ ಮೂಡಿಸಿತಾದರೂ, ಯುವ ಕುಸ್ತಿಪಟುಗಳು ತಮ್ಮ ಹಕ್ಕುಗಳಿಗೆ ಹೋರಾಟ ನಡೆಸುತ್ತಿರುವುದನ್ನು ನೋಡಿ ಖುಷಿಯಾಗಿದೆ. ಅಂತಿಮ್ ಇನ್ನೂ ಸಣ್ಣವಳು, ಆಕೆಗೆ ಕುಸ್ತಿ ಫೆಡರೇಷನ್‌ನ ರಾಜಕೀಯದ ಬಗ್ಗೆ ಅರ್ಥವಾಗುವುದಿಲ್ಲ" ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.

ಕೊರಿಯಾ ಓಪನ್ ಸೂಪರ್‌ 500 ಟೂರ್ನಿ ಗೆದ್ದ ಸಾತ್ವಿಕ್‌-ಚಿರಾಗ್‌ ವಿಶ್ವ ನಂ.2!

ಟ್ರಯಲ್ಸ್‌ ಮುಗಿದ ಮೇಲೆ ಮಾತನಾಡೋಣ ಎಂದು ಸುಮ್ಮನಿದ್ದೆವು. 20 ವರ್ಷಗಳಿಂದ ಭಾರತೀಯ ಕುಸ್ತಿಗಾಗಿ ದುಡಿದಿದ್ದೇವೆ" ಎಂದು ಭಜರಂಗ್ ಹೇಳಿದ್ದಾರೆ.

ಕುಸ್ತಿ ಸಂಸ್ಥೆ ಚುನಾವಣೆ: ಬ್ರಿಜ್‌ ಅಳಿಯ ಬಿಹಾರ ಪ್ರತಿನಿಧಿ!

ನವದೆಹಲಿ: ಆ.12ರಂದು ನಡೆಯಬೇಕಿರುವ ಬಹುನಿರೀಕ್ಷಿತ ಭಾರತೀಯ ಕುಸ್ತಿ ಫಡರೇಶನ್‌(ಡಬ್ಲ್ಯುಎಫ್‌ಐ) ಚುನಾವಣೆಯಿಂದ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ ಹಾಗೂ ಅವರ ಪುತ್ರ ಕರಣ್‌ ದೂರ ಉಳಿದಿದ್ದರು, ಬಿಹಾರ ಕುಸ್ತಿ ಸಂಸ್ಥೆಯ ಪ್ರತಿನಿಧಿಯಾಗಿ ಬ್ರಿಜ್‌ರ ಅಳಿಯ ಮತ ಚಲಾವಣೆಗೆ ಆಗಮಿಸಲಿರುವುದು ಅಚ್ಚರಿಗೆ ಕಾರಣವಾಗಿದೆ. ಬ್ರಿಜ್‌ ಕುಟುಂಬಸ್ಥರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಕುಸ್ತಿಪಟುಗಳು ಹಾಕಿದ್ದ ಷರತ್ತಿಗೆ ಕೇಂದ್ರ ಸರ್ಕಾರ ಒಪ್ಪಿತ್ತು. ಆದರೀಗ ಬ್ರಿಜ್‌ರ ಅಳಿಯ ವಿಶಾಲ್‌ ಸಿಂಗ್‌ ಬಿಹಾರ ಸಂಸ್ಥೆ ಪರವಾಗಿ ಮತಚಲಾವಣೆಗೆ ಆಗಮಿಸಲಿದ್ದು, ಅವರು ಇತರ ಸದಸ್ಯರ ಮೇಲೆ ಪ್ರಭಾವ ಬೀರಿ ಬ್ರಿಜ್‌ರ ಆಪ್ತರು ಗೆಲ್ಲುವಂತೆ ಮಾಡಬಹುದು ಎಂಬ ಚರ್ಚೆ ಕುಸ್ತಿ ವಲಯದಲ್ಲಿ ಶುರುವಾಗಿದೆ.

ವಿಶ್ವ ಈಜು: ಸೆಮಿಫೈನಲ್‌ಪ್ರವೇಶಿಸಲು ಶ್ರೀಹರಿ ವಿಫಲ

ಫುಕುಒಕಾ(ಜಪಾನ್‌): ಭಾರತದ ಅಗ್ರ ಈಜುಪಟು, ಕರ್ನಾಟಕದ ಶ್ರೀಹರಿ ನಟರಾಜ್‌ ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಶಿಪ್‌ನ 100 ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯ ಹೀಟ್ಸ್‌ನಲ್ಲೇ ಹೊರಬಿದ್ದಿದ್ದಾರೆ. ತಾವು ಸ್ಪರ್ಧಿಸಿದ ಹೀಟ್ಸ್‌ನಲ್ಲಿ ಕೊನೆಯ ಸ್ಥಾನ ಪಡೆದ ಶ್ರೀಹರಿ, ಒಟ್ಟಾರೆ 31ನೇ ಸ್ಥಾನಕ್ಕೆ ತೃಪ್ತಿಪಟ್ಟು ಸೆಮಿಫೈನಲ್‌ ಪ್ರವೇಶಿಸಲು ವಿಫಲರಾದರು. ಒಟ್ಟು 7 ಹೀಟ್ಸ್‌ ಸೇರಿ ಮೊದಲ 18 ಸ್ಥಾನ ಪಡೆದ ಈಜುಪಟುಗಳು ಸೆಮೀಸ್‌ಗೇರಿದರು. 22 ವರ್ಷದ ಶ್ರೀಹರಿ, 55.60 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಇದು ಈ ಋತುವಿನಲ್ಲಿ ಅವರ ಶ್ರೇಷ್ಠ ಪ್ರದರ್ಶನ ಎನಿಸಿತು. ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ರಾಜ್ಯದ ಈಜುತಾರೆ ಭಾರತವನ್ನು ಪ್ರತಿನಿಧಿಸಲಿದ್ದಾರೆ.

click me!