Latest Videos

ನಾನು ಕೇರ್ ಮಾಡಲ್ಲ

By Suvarna Web DeskFirst Published Nov 22, 2016, 3:59 PM IST
Highlights

ಇಲ್ಲಿನ ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆಯಲಿರುವ ಸೂಪರ್ ಮಿಡಲ್‌'ವೇಟ್ ಚಾಂಪಿಯನ್ ಫ್ರಾನ್ಸಿಸ್ ಚೆಕಾ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ

ನವದೆಹಲಿ(ನ.22): ಮುಂದಿನ ತಿಂಗಳು (ಡಿ.17) ನಡೆಯಲಿರುವ ಮತ್ತೊಂದು ಸುತ್ತಿನ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಎದುರಾಳಿಯಾಗಿರುವ ಫ್ರಾನ್ಸಿಸ್ ಚೆಕಾ ಅದೆಷ್ಟೇ ಬಲಶಾಲಿ ಹಾಗೂ ಬಾಕ್ಸಿಂಗ್‌'ನಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರೂ, ತಾನೇನೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಭಾರತದ ನಂ.1 ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.

‘‘ಇಲ್ಲಿನ ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆಯಲಿರುವ ಸೂಪರ್ ಮಿಡಲ್‌'ವೇಟ್ ಚಾಂಪಿಯನ್ ಫ್ರಾನ್ಸಿಸ್ ಚೆಕಾ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ. ಆದರೆ, ತವರಿನಲ್ಲಿ ಮತ್ತೊಮ್ಮೆ ವಿಜೃಂಭಿಸಲು ನಾನು ಸಜ್ಜುಗೊಳ್ಳುತ್ತಿದ್ದೇನೆ’’ ಎಂದು ಸದ್ಯ ಮ್ಯಾಂಚೆಸ್ಟರ್‌ನಲ್ಲಿ ಸತತ ಅಭ್ಯಾಸದಲ್ಲಿರುವ, 2008ರ ಬೀಜಿಂಗ್ ಒಲಿಂಪಿಕ್ ಕಂಚು ಪದಕ ವಿಜೇತ ವಿಜೇಂದರ್ ಸವಾಲೆಸೆದಿದ್ದಾರೆ.

click me!