ಕೋಲ್ಕತಾ ನೈಟ್‌ರೈಡರ್ಸ್ ತಂಡದ ಆಲ್ರೌಂಡರ್ ರಿಂಕು ಸಿಂಗ್ ಮೇಲೆ ಬಿಸಿಸಿಐ ನಿಷೇಧ ಹೇರಿದೆ. ಅಷ್ಟಕ್ಕೂ ರಿಂಕು ಮಾಡಿದ್ದೇನು..? ನೀವೇ ನೋಡಿ...
ನವದೆಹಲಿ[ಮೇ.31]: ಅಬುಧಾಬಿಯಲ್ಲಿ ಮಾನ್ಯತೆ ಇಲ್ಲದ ಟಿ20 ಲೀಗ್‌ನಲ್ಲಿ ಆಡಿದ ಉತ್ತರ ಪ್ರದೇಶ, ಕೆಕೆಆರ್ ತಂಡದ ಆಲ್ರೌಂಡರ್ ರಿಂಕು ಸಿಂಗ್‌ಗೆ ಬಿಸಿಸಿಐ 3 ತಿಂಗಳ ನಿಷೇಧ ಹೇರಿದೆ. ಭಾರತ ‘ಎ’ ತಂಡದಿಂದಲೂ ಅವರನ್ನು ಹೊರಹಾಕಲಾಗಿದೆ. ಜೂ.1ರಿಂದ ಅವರ ನಿಷೇಧ ಅವಧಿ ಆರಂಭಗೊಳ್ಳಲಿದೆ.
ಮುಂದಿನ IPLನಲ್ಲಿ ನಾಲ್ವರು ನಾಯಕರಿಗೆ ಗೇಟ್ ಪಾಸ್?
undefined
ಅಬುದಾಬಿಯಲ್ಲಿ ರಂಜಾನ್ ಟಿ20 ಲೀಗ್ ನಲ್ಲಿ ಡೆಕನ್ ಗ್ಲಾಡಿಯೇಟರ್ ತಂಡವನ್ನು ಪ್ರತಿನಿಧಿಸಿದ್ದ ರಿಂಕು 58 ಎಸೆತಗಳಲ್ಲಿ 104 ರನ್ ಬಾರಿಸಿದ್ದರು. ಇನ್ನು ಬೌಲಿಂಗ್’ನಲ್ಲಿ ನ್ಯೂ ಮೆಡಿಕಲ್ ಸೆಂಟರ್ ತಂಡದ ವಿರುದ್ಧ 2 ವಿಕೆಟ್ ಪಡೆದು ಗಮನ ಸೆಳೆದಿದ್ದರು.
IPLನಲ್ಲಿ ಸಿಗಲಿಲ್ಲ ಚಾನ್ಸ್; ವಿದೇಶದತ್ತ ಮುಖ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ..!
ಇದೇ ವೇಳೆ ಕೆರಿಬಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡ ಇರ್ಫಾನ್ ಪಠಾಣ್, ಮಾರಿಷಸ್‌ನಲ್ಲಿ ಟಿ20 ಲೀಗ್ ಆಡಿದ ಅಂಡರ್-19 ಆಟಗಾರ ಅನುಜ್ ರಾವತ್‌ಗೆ ಬಿಸಿಸಿಐ ಎಚ್ಚರಿಕೆ ನೀಡಿದ್ದು ಈ ಇಬ್ಬರು ನಿಷೇಧದಿಂದ ಪಾರಾಗಿದ್ದಾರೆ.