
ಬೆಂಗಳೂರು(ಅ.20): ವಿಜಯ್ ಹಜಾರೆ ಟೂರ್ನಿ ರೋಚಕ ಪಂದ್ಯದೊಂದಿಗೆ ಅಂತ್ಯಗೊಂಡಿದೆ. ದೆಹಲಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಮುಂಬೈ 4 ವಿಕೆಟ್ ಗೆಲುವು ದಾಖಲಿಸಿತು. ಈ ಮೂಲಕ 2018ರ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಗೌತಮ್ ಗಂಭೀರ್ ನಾಯಕತ್ವದ ದೆಹಲಿ ತಂಡ 45.4 ಓವರ್‌ಗಳಲ್ಲಿ 177 ರನ್ ಸಿಡಿಸಿತು. ಧವಳ್ ಕುಲಕರ್ಣಿ ಹಾಗೂ ಶಿವಂ ದುಬೆ ಮಾರಕ ದಾಳಿಯಿಂದ ದೆಹಲಿ ತತ್ತರಿಸಿತು. ಗಂಭೀರ್ ಕೇವಲ 1 ರನ್ ಸಿಡಿಸಿ ಔಟಾದರೆ, ಉನ್ಮುಕ್ತ್ ಚಾಂದ್ 13 ರನ್‌ಗೆ ಸುಸ್ತಾದರು.
ಹಿಮ್ಮತ್ ಸಿಂಗ್ ಸಿಡಿಸಿದ 41 ರನ್ ಹಾಗೂ ಧ್ರುವ್ ಶೊರೆಯ್ ಸಿಡಿಸಿದ 31 ರನ್ ಕಾಣಿಕೆಯಿಂದ 177ರನ್ ಸಿಡಿಸಿ ಆಲೌಟ್ ಆಯಿತು. ಈ ಗುರಿ ಬೆನ್ಟಟ್ಟಿದ ಮುಂಬೈ ಕೂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಪೃಥ್ವಿ ಶಾ 8, ಅಜಿಂಕ್ಯ ರಹಾನೆ 10, ಶ್ರೇಯಸ್ ಅಯ್ಯರ್ 7, ಸೂರ್ಯಕುಮಾರ್ ಯಾದವ್ 4 ರನ್ ಸಿಡಿಸಿ ಔಟಾದರು.
ಸಿದ್ದೇಶ್ ಲಾಡ್ 48 ರನ್, ಆದಿತ್ಯ ತಾರೆ 78 ರನ್ ಸಿಡಿಸೋ ಮೂಲಕ ಮುಂಬೈ 35 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.