
ಧರ್ಮಶಾಲಾ(ಮಾ. 25): ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಆಟದ ಮೈದಾನದಿಂದ ಮಾತ್ರ ದೂರ ಉಳಿಯುತ್ತಿಲ್ಲ..! ಇಂದು ಆರಂಭಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿರುವ ಭಾರತೀಯ ಆಟಗಾರರಿಗೆ ವಿರಾಟ್ ಕೊಹ್ಲಿಯೇ ಡ್ರಿಂಕ್ಸ್ ತಂದುಕೊಡುತ್ತಿದ್ದಾರೆ. ಸರಣಿಯ ನಿರ್ಣಾಯಕವಾಗಿರುವ ಈ ಮಹತ್ವದ ಪಂದ್ಯದಲ್ಲಿ ಆಡದೇ ಹೋದರೂ ಡ್ರಿಂಕ್ಸ್ ಕೊಡುವ ನೆವದಲ್ಲಿ ಮೈದಾನದೊಳಗೆ ಹೋಗಿ ಆಟಗಾರರಿಗೆ ಸ್ಫೂರ್ತಿ ತುಂಬುವ ಕಾಯಕವನ್ನು ಕೊಹ್ಲಿ ಮಾಡುತ್ತಿರುವಂತೆ ಕಾಣುತ್ತಿದೆ. ಲವಲವಿಕೆಯಿಂದ ಮೈದಾನದಲ್ಲಿ ಡ್ರಿಂಕ್ಸ್ ಹಿಡಿದು ಕೊಹ್ಲಿ ಓಡಾಡುವ ದೃಶ್ಯ ಎಲ್ಲರ ಮನ ತಟ್ಟಿದೆ.
ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಅವರು ಭಾರತದ ತಂಡದ ನಾಯಕತ್ವ ವಹಿಸಿದ್ದಾರೆ. ಅದೃಷ್ಟದ ರೇಖೆ ಹೊಂದಿರುವ ಆಸ್ಟ್ರೇಲಿಯಾ ತಂಡ ಈ ಸರಣಿಯಲ್ಲಿ ಮೂರನೇ ಬಾರಿ ಟಾಸ್ ವಿನ್ ಮಾಡಿ ಬ್ಯಾಟಿಂಗ್ ಆಯ್ದುಕೊಂಡಿದೆ. ಭರ್ಜರಿ ಶತಕ ಭಾರಿಸಿರುವ ಸ್ಟೀವನ್ ಸ್ಮಿತ್ ಯಥಾಪ್ರಕಾರ ಭಾರತೀಯ ಬೌಲರ್'ಗಳಿಗೆ ಮಗ್ಗುಲಮುಳ್ಳಾಗುವುದನ್ನು ಮುಂದುವರಿಸಿದ್ದಾರೆ.
ಇದೇ ವೇಳೆ, ವಿರಾಟ್ ಕೊಹ್ಲಿ ಬದಲಿಗೆ ಕರ್ನಾಟಕದ ಹುಡುಗ ಕರುಣ್ ನಾಯರ್ ಅವರಿಗೆ ಅವಕಾಶ ನೀಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.