ಕುಲ್ದೀಪ್ ಯಾದವ್ ಬೌಲಿಂಗ್ ಕೊಂಡಾಡಿದ ಮಾಸ್ಟರ್ ಬ್ಲಾಸ್ಟರ್

Published : Mar 24, 2017, 05:58 PM ISTUpdated : Apr 11, 2018, 12:44 PM IST
ಕುಲ್ದೀಪ್ ಯಾದವ್ ಬೌಲಿಂಗ್ ಕೊಂಡಾಡಿದ ಮಾಸ್ಟರ್ ಬ್ಲಾಸ್ಟರ್

ಸಾರಾಂಶ

22 ವರ್ಷದ ಯುವ ಸ್ಪಿನ್ನರ್ ತಮ್ಮ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೆಚ್ಚುಗೆಗೆ ಪಾತ್ರರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಧರ್ಮಶಾಲಾ(ಮಾ.25): ಪಾದಾರ್ಪಣ ಪಂದ್ಯದಲ್ಲೇ ತಮ್ಮ ಪ್ರಚಂಡ ಬೌಲಿಂಗ್ ಮೂಲಕ ಆಸೀಸ್ ಬ್ಯಾಟ್ಸ್'ಮನ್'ಗಳನ್ನು ಕಂಗಾಲು ಮಾಡಿರುವ ಯುವ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಬಗ್ಗೆ ಪ್ರಶಂಸೆಯ ಸುರಿಮಳೆಗಳೇ ಹರಿದು ಬರುತ್ತಿವೆ.

ವಿರಾಟ್ ಕೊಹ್ಲಿ ಕೊನೆಯ ಟೆಸ್ಟ್'ಗೆ ಅಲಭ್ಯವಾದ ಹಿನ್ನೆಲೆ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದ ಕುಲ್ದೀಪ್ ತಮ್ಮ ಚೊಚ್ಚಲ ವಿಕೆಟ್ ರೂಪದಲ್ಲಿ ಡೇವಿಡ್ ವಾರ್ನರ್ ಅವರನ್ನು ಬಲಿ ಪಡೆದುಕೊಂಡರು. 22 ವರ್ಷದ ಯುವ ಸ್ಪಿನ್ನರ್ ತಮ್ಮ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೆಚ್ಚುಗೆಗೆ ಪಾತ್ರರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಡೇವಿಡ್ ವಾರ್ನರ್ ಬಳಿಕ ಪೀಟರ್ ಹ್ಯಾಂಡ್ಸ್ಕಂಬ್, ಗ್ಲೇನ್ ಮ್ಯಾಕ್ಸ್'ವೆಲ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಉತ್ತರಪ್ರದೇಶ ಮೂಲದ ಕುಲ್ದೀಪ್ ಯಶಸ್ವಿಯಾಗಿದ್ದಾರೆ.

ಕುಲ್ದೀಪ್ ಪ್ರದರ್ಶನದ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ಹೇಳಿದ್ದಿಷ್ಟು...

I am impressed with @imkuldeep18's variations and the way he has started. Keep going strong, this can be your match to shine.

— sachin tendulkar (@sachin_rt) 25 March 2017

ಧರ್ಮಶಾಲಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಪಾದಾರ್ಪಣೆ ಮಾಡುವ ಮೂಲಕ ಟೀಂ ಇಂಡಿಯಾ ಪ್ರತಿನಿಧಿಸಿದ 288ನೇ ಟೆಸ್ಟ್ ಆಟಗಾರ ಎನ್ನುವ ಕೀರ್ತಿಗೆ ಕುಲ್ದೀಪ್ ಯಾದವ್ ಭಾಜನರಾಗಿದ್ದಾರೆ.    

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಬಿಗ್ ಶಾಕ್; ಚಿನ್ನಸ್ವಾಮಿ ಸ್ಟೇಡಿಯಂನಿಂದ ಇಲ್ಲಿಗೆ ಮ್ಯಾಚ್ ಶಿಫ್ಟ್!
'ಈ ಕ್ರಿಕೆಟಿಗನ ವೃತ್ತಿ ಬದುಕು ಹಾಳು ಮಾಡಿದ್ರಾ ಧೋನಿ?' ನಿವೃತ್ತಿ ಬೆನ್ನಲ್ಲೇ ತುಟಿಬಿಚ್ಚಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!