
ದುಬೈ(ಸೆ.24): 1996ರ ಐಸಿಸಿ ಏಕದಿನ ವಿಶ್ವಕಪ್‌ನ ಭಾರತ-ಪಾಕಿಸ್ತಾನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ.
ಭಾರತ-ಪಾಕ್ ವೈರತ್ವವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದ ಪಂದ್ಯವದು.
ಪಾಕ್‌ನ ಅಮೀರ್ ಸೊಹೈಲ್ ಹಾಗೂ ಭಾರತದ ವೆಂಕಟೇಶ್ ಪ್ರಸಾದ್ ನಡುವಿನ ಚಕಮಕಿ ಎಲ್ಲರ ಗಮನ ಸೆಳೆದಿತ್ತು. 22 ವರ್ಷಗಳ ಬಳಿಕ ಸೊಹೈಲ್ ಹಾಗೂ ಪ್ರಸಾದ್ ಭೇಟಿಯಾಗಿ, ತಮ್ಮ ನಡುವೆ ನಡೆದ ಚಕಮಕಿಯ ಕುರಿತು ಮೆಲುಕು ಹಾಕಿದ್ದಾರೆ.
ಏಷ್ಯಾಕಪ್ ಪ್ರಸಾರ ಹಕ್ಕು ಹೊಂದಿರುವ ‘ಸ್ಟಾರ್ ಸ್ಪೋರ್ಟ್ಸ್’ವಾಹಿನಿ ನಡೆಸಿದ ವಿಶೇಷ ಕಾರ್ಯಕ್ರಮದಲ್ಲಿ ಈ ಇಬ್ಬರು ಮಾಜಿ ಕ್ರಿಕೆಟಿಗರು ಭೇಟಿಯಾಗಿದ್ದರು. ಇವರಿಬ್ಬರ ಮಾತುಕತೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಭಾರತದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಸೇರಿ ಅನೇಕರು ಪ್ರತಿಕ್ರಿಯಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.