ನೆಕ್ ಟು ನೆಕ್ ಫೈಟ್: ಆಫ್ಘನ್ ಸೋಲಿಸಿದ ಬಾಂಗ್ಲಾ!

By Web DeskFirst Published Sep 24, 2018, 8:48 AM IST
Highlights

ಏಶಿಯಾ ಕಪ್ ಟೂರ್ನಿ 2018! ಸೂಪರ್ 4 ಹಂತದ ಪಂದ್ಯ! ಆಫ್ಘನ್ ವಿರುದ್ಧ ಗೆಲುವು ಕಂಡ ಬಾಂಗ್ಲಾದೇಶ! ಗೆಲ್ಲುವ ಪಂದ್ಯ ಕೈ ಚೆಲ್ಲಿನ ಆಫ್ಘನ್ ಆಟಗಾರರು

ಅಬುಧಾಬಿ(ಸೆ.24): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ, ಆಫ್ಘಾನಿಸ್ತಾನ ವಿರುದ್ದ  50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾ, 18 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಲಿಟನ್
ದಾಸ್(41)ರೊಂದಿಗೆ 3ನೇ ವಿಕೆಟ್‌ಗೆ ಕೂಡಿದ ಮುಷ್ಫಿಕರ್ ರಹೀಮ್(33), 63 ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. 

ಉತ್ತಮ ಪ್ರದರ್ಶನ ನೀಡುತ್ತಿದ್ದ ಲಿಟನ್ ದಾಸ್ ರನ್ನು ರಶೀದ್ ಖಾನ್ ಪೆವಿಲಿಯನ್‌ಗೆ ಅಟ್ಟಿದರೆ, ಅನಗತ್ಯ ರನ್ ಕದಿಯಲು ಪ್ರಯತ್ನಿಸಿದ ಮುಷ್ಫಿಕರ್ ರನೌಟ್ ಆದರು. ಬಳಿಕ ಆಲ್ರೌಂಡರ್ ಶಕೀಬ್ ಕೂಡ ರನೌಟ್ ಬಲೆಗೆ ಬಿದ್ದರು.

ಬಾಂಗ್ಲಾ 6 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಇಮ್ರುಲ್
ಕಯಾಸ್(ಅಜೇಯ 72) ಮತ್ತು ಮಹಮದುಲ್ಲಾ(74) ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವುದರಿಂದ ಪಾರು ಮಾಡಿದರು. 

ಆಫ್ಘನ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಇಬ್ಬರೂ, 1228 ರನ್‌ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಮಹಮದುಲ್ಲಾ ವಿಕೆಟ್ ಕೀಳುವ ಮೂಲಕ ಆಲಂ, ೬ನೇ ವಿಕೆಟ್ ಜೊತೆಯಾಟವನ್ನು ಮುರಿದರು. ಆಫ್ಘನ್‌ನ ಶಿಸ್ತುಬದ್ದ ಬೌಲಿಂಗ್ ಪ್ರದರ್ಶನದ ನಡುವೆಯೂ ಬಾಂಗ್ಲಾ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಇನ್ನು ನಂತರ ಬ್ಯಾಟ್ ಮಾಡಿದ ಆಫ್ಘನ್, ನಿಗದಿತ ೫೦ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್ ಸೇರಿಸಿ ಕೇವಲ 3 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು.

ಆಫ್ಘನ್ ಪರ ಮೊಹಮ್ಮದ್ ಶಾಜಾದ್ ಅತ್ಯಧಿಕ 53 ರನ್ ಸಿಡಿಸಿ ಮಿಂಚಿದರೆ, ಬಾಂಗ್ಲಾ ಪರ ಮುಶ್ರಫೆ ಮೊರ್ತೊಜಾ ಮತ್ತು ಮುಸ್ತಫಿಜುರ್ ರೆಹಮಾನ್ ತಲಾ ಎರಡು ವಿಕೆಟ್ ಪಡೆದರು.

click me!