
ಮುಂಬೈ(ಡಿ.03): ಐಪಿಎಲ್'ಗೂ ಮುನ್ನಾ ನನ್ನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಒಂದೊಂದು ರುಪಾಯಿಗೂ ಕಷ್ಟಪಡುವ ಸ್ಥಿತಿಯಿತ್ತು. ಸಾಲದ ಕಂತು ಕಟ್ಟಲಾಗದೆ 2 ವರ್ಷ ನನ್ನ ಕಾರನ್ನು ಬಚ್ಚಿಟ್ಟಿದ್ದೆ ಎಂದು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಪಾಂಡ್ಯ, ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘3 ವರ್ಷ ಸಾಕಷ್ಟು ಕಷ್ಟ ಪಟ್ಟಿದ್ದೆ. 2015ರ ಐಪಿಎಲ್ ಬಳಿಕ ಜೀವನವೇ ಬದಲಾಯಿತು. ಮುಂಬೈ ತಂಡ ಆ ಬಾರಿ ಚಾಂಪಿಯನ್ ಆಗುತ್ತಿದ್ದಂತೆ ₹50 ಲಕ್ಷ ದೊರೆಯಿತು’ ಎಂದಿದ್ದಾರೆ.
ಮೊದಲು ಜೀವನ ನಿರ್ವಹಣೆ ಅಷ್ಟು ಸುಲಭವಾಗಿರಲಿಲ್ಲ. ಆದರೆ ದೇವರ ದಯೆಯಿಂದ ನನ್ನ ಬದುಕು ಬದಲಾಯಿತು. ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಗಳಿಸಿತು. ಇದರ ಬೆನ್ನಲ್ಲೇ ನನಗೆ ಸಿಕ್ಕ 50 ಲಕ್ಷ ಹಣದಲ್ಲಿ ಹಳೆ ಕಾರಿನ ಇಎಂಐ ಕಂತು ಕಟ್ಟಿದೆ. ಜೊತೆಗೆ ಹೊಸ ಕಾರನ್ನೂ ಖರೀಧಿಸಿದೆ ಎಂದು ಪಾಂಡ್ಯ ಆ ದಿನಗಳನ್ನು ಮೆಲುಕು ಹಾಕಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.