ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಬಾಲ್ಯದ ಕನಸು ನನಸು!

Published : Oct 11, 2018, 06:08 PM IST
ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಬಾಲ್ಯದ ಕನಸು ನನಸು!

ಸಾರಾಂಶ

ವಿಶ್ವದ ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ಬಾಲ್ಯದ  ಕನಸು ನನಸಾಗುತ್ತಿದೆ. ಒಲಿಂಪಿಕ್ ಸೇರಿದಂತೆ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡು ದಾಖಲೆ ಬರೆದಿರುವ ಬೋಲ್ಟ್ ವಿದಾಯದ ಬಳಿಕ ತಮ್ಮ ಬಾಲ್ಯದ ಕನಸು ನನಸು ಮಾಡಿಕೊಳ್ಳೋ ಸಂಭ್ರಮದಲ್ಲಿದ್ದಾರೆ.

ಸಿಡ್ನಿ(ಅ.11) : ವಿಶ್ವದ ವೇಗದ ಓಟಗಾರ ಖ್ಯಾತಿಯ ಜಮೈಕಾದ ಉಸೇನ್ ಬೋಲ್ಟ್, ತಮ್ಮ ಬಾಲ್ಯದ ವೃತ್ತಿಪರ  ಫುಟ್ಬಾಲರ್ ಆಗುವ ಕನಸನ್ನು ನನಸಾಗಿಸಿಕೊಳ್ಳುವ
ಹಾದಿಯಲ್ಲಿದ್ದಾರೆ. ಬೋಲ್ಟ್ ಶುಕ್ರವಾರ ಸೆಂಟ್ರಲ್ ಕೋಸ್ಟ್ ಮರೈನರ್ ತಂಡದ ಪರ, ಮ್ಯಾಕ್‌ಆರ್ಥರ್ ಸೌತ್‌ವೆಸ್ಟ್ ಯುನೈಟೆಡ್ ವಿರುದ್ಧದ ಸೌಹಾರ್ದಯುತ ಫುಟ್ಬಾಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. 

‘ಇದು ನನ್ನ ಜೀವನದ ಮಹತ್ವದ ಹೆಜ್ಜೆಯಾಗಿದೆ. ನನಗೆ ಬಹಳಷ್ಟು ಸಂತಸವಾಗಿದ್ದು, ಈಗ ಮೊದಲಿಗಿಂತಲೂ ಸುಧಾರಿಸಿದ್ದೇನೆ. ಪಂದ್ಯದ ವೇಳೆ ನನ್ನ ದೇಹ ಮತ್ತು ಚೆಂಡನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಕಲಿತಿದ್ದೇನೆ’ ಎಂದು ಬೋಲ್ಟ್ ಹೇಳಿದ್ದಾರೆ. 

8 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಬೋಲ್ಟ್, ಆಗಸ್ಟ್ ತಿಂಗಳ ಕೊನೆಯಲ್ಲಿ ಚೊಚ್ಚಲ ಬಾರಿಗೆ ಫುಟ್ಬಾಲ್ ಆಡಿದ್ದರು. ವಿಶ್ವದ ಅತೀ ವೇಗದ ಓಟಗಾರನೆಂದೇ ಖ್ಯಾತಿ ಗಳಿಸಿರುವ ಬೋಲ್ಟ್ ಒಲಿಂಪಿಕ್ ಕ್ರೀಡೆಯಲ್ಲಿ ಐತಿಹಾಸಿಕ ದಾಖಲೆ ಬರೆದ ಕ್ರೀಡಾಪಟುವಾಗಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?
ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡದ ಪ್ರತಿ ಸದಸ್ಯರಿಗೆ ಸಿಯೆರಾ ಕಾರು ಗಿಫ್ಟ್ ಕೊಟ್ಟ ಟಾಟಾ