ಅಭಿಮಾನಿಗಳಿಗೆ ನಿರಾಸೆ- ಬೆಂಗಳೂರು ಪಂದ್ಯಗಳು ಕೋಲ್ಕತ್ತಾಗೆ ಶಿಫ್ಟ್!

By Web Desk  |  First Published Oct 11, 2018, 5:57 PM IST

ಬೆಂಗಳೂರು ಕ್ರೀಡಾ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಐಎಸ್ಎಲ್ ಟೂರ್ನಿಯ ಬೆಂಗಳೂರು ಎಫ್‌ಸಿ ಪಂದ್ಯಗಳು ಇದೀಗ ಕಂಠೀರವ ಕ್ರೀಡಾಂಗಣದಿಂದ ಸ್ಥಳಾಂತರಗೊಂಡಿದೆ. ಅಷ್ಕಕ್ಕೂ ಈ ಪಂದ್ಯಗಳು ಬೆಂಗಳೂರಿನಿಂದ ಕೋಲ್ಕತ್ತಾಗೆ ಶಿಫ್ಟ್ ಆಗಿದ್ದು ಯಾಕೆ?
 


ಬೆಂಗಳೂರು(ಅ.11): ಭಾರತ ಹಾಗೂ ವೆಸ್ಟ್ಇಂಡೀಸ್ ಪಂದ್ಯಗಳು ಸ್ಥಳಾಂತರಗೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಶಿಫ್ಟ್ ಶಾಕ್ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಫುಟ್ಬಾಲ್‌ಗೂ ತಟ್ಟಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಎಸ್ಎಲ್ ನ ಬಿಎಫ್‌ಸಿ ಪಂದ್ಯಗಳು ಕೋಲ್ಕತಾಗೆ ಸ್ಥಳಾಂತರಗೊಂಡಿವೆ.   

ಕಂಠೀರವ ಕ್ರೀಡಾಂಗಣದಲ್ಲಿ ನವೆಂಬರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವುದರಿಂದ ಪಂದ್ಯಗಳನ್ನು ಅಟ್ಲೆಟಿಕೊ ಡಿ ಕೋಲ್ಕತಾ ತಂಡದ ತವರು ಕೋಲ್ಕತಾಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಬಿಎಫ್‌ಸಿ ತಂಡ ಅ.31ರ ಆತಿಥ್ಯದ ಪಂದ್ಯ ಮತ್ತು ಡಿ.13ರ ಪಂದ್ಯವನ್ನು ಕೋಲ್ಕತಾದಲ್ಲಿಯೇ ಆಡಲಿದೆ.

Latest Videos

ಕಳೆದ ಆವೃತ್ತಿಯಲ್ಲಿ ಐಎಸ್ಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಬೆಂಗಳೂರು ಎಫ್‌ಸಿ ರನ್ನರ್ ಆಪ್ ಸ್ಥಾನ ಪಡೆದುಕೊಂಡಿತು. ಈ ಬಾರಿ ಆಡಿರೋ 2 ಪಂದ್ಯದಲ್ಲಿ 1 ಗೆಲುವು ಹಾಗೂ 1 ಡ್ರಾದೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.
 

click me!