ಯುಎಸ್ ಓಪನ್ 2024: ಇಗಾ, ಆಲ್ಕರಜ್‌, ಸಿನ್ನರ್‌ ಶುಭಾರಂಭ

By Kannadaprabha News  |  First Published Aug 29, 2024, 9:16 AM IST

ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ನರಾದ ಇಗಾ ಸ್ವಿಯಾಟೆಕ್ ಹಾಗೂ ಕಾರ್ಲೋಸ್ ಆಲ್ಕರಜ್ ಶುಭಾರಂಭ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನ್ಯೂಯಾರ್ಕ್‌: 2022ರ ಚಾಂಪಿಯನ್‌ಗಳಾದ ಇಗಾ ಸ್ವಿಯಾಟೆಕ್‌ ಹಾಗೂ ಆಲ್ಕರಜ್‌ ಈ ಬಾರಿ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. 2 ಬಾರಿ ಚಾಂಪಿಯನ್‌ ನವೊಮಿ ಒಸಾಕ, ವಿಶ್ವ ನಂ.1 ಯಾನಿಕ್‌ ಸಿನ್ನರ್‌ ಕೂಡಾ 2ನೇ ಸುತ್ತು ಪ್ರವೇಶಿಸಿದ್ದಾರೆ.

ಮಂಗಳವಾರ ಮಧ್ಯರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ 2ನೇ ಶ್ರೇಯಾಂಕಿತ ಆಲ್ಕರಜ್‌, ಆಸ್ಟ್ರೇಲಿಯಾದ ಲಿ ಟು ವಿರುದ್ಧ 6-2, 4-6, 6-3, 6-1 ಸೆಟ್‌ಗಳಲ್ಲಿ ಜಯಗಳಿಸಿದರು. ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌, ಇಟಲಿಯ 23ರ ಸಿನ್ನರ್‌ ಮೊದಲ ಸುತ್ತಿನಲ್ಲಿ ಅಮೆರಿಕದ ಮೆಕೆನ್ಜೀ ಮೆಕ್‌ಡೊನಾಲ್ಡ್‌ ವಿರುದ್ಧ 2-6, 6-2, 6-1, 6-2 ಸೆಟ್‌ಗಳಲ್ಲಿ ಗೆದ್ದರು. 2021ರ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೆವ್‌ ಕೂಡಾ ಶುಭಾರಂಭ ಮಾಡಿದರು. ಆದರೆ ಸ್ಟಾನ್‌ ವಾಂವ್ರಿಕಾ, 11ನೇ ಶ್ರೇಯಾಂಕಿತ ಸ್ಟೆಫಾನೊಸ್‌ ಸಿಟ್ಸಿಪಾಸ್‌ ಮೊದಲ ಸುತ್ತಲ್ಲೇ ಸೋತು ಹೊರಬಿದ್ದರು.

Latest Videos

undefined

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌: ಮೊದಲ ದಿನವೇ ಭಾರತಕ್ಕೆ ಸಿಗುತ್ತಾ ಪದಕ?

ಇಗಾ ಮುನ್ನಡೆ: ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ವಿಶ್ವ ನಂ.1, ಪೋಲೆಂಡ್‌ನ ರಷ್ಯಾದ ಕಾಮಿಲ್ಲಾ ರಖಿಮೋವಾ 6-4, 7-6(8/6) ಅಂತರದಲ್ಲಿ ಗೆದ್ದರು. ಮಾಜಿ ವಿಶ್ವ ನಂ.1, ಜಪಾನ್‌ನ ಒಸಾಕ ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ವಿರುದ್ಧ 6-3, 6-2ರಲ್ಲಿ ಗೆದ್ದರು. 2022ರ ವಿಂಬಲ್ಡನ್‌ ಚಾಂಪಿಯನ್‌ ಎಲೆನಾ ರಬೈಕೆನಾ, ಕಳೆದೆರಡು ಬಾರಿಯ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಅರೈನಾ ಸಬಲೆಂಕಾ ಕೂಡಾ 2ನೇ ಸುತ್ತು ತಲುಪಿದರು. ಆದರೆ 2021ರ ಚಾಂಪಿಯನ್‌ ಎಮ್ಮಾ ರಾಡುಕಾನು ಸೋಲನುಭವಿಸಿದರು.

ವಿಶಿಷ್ಟ ಬಟ್ಟೆ ಧರಿಸಿ ಗಮನಸೆಳೆದ ಒಸಾಕ

ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ನವೊಮಿ ಒಸಾಕ ವಿಶೇಷ ವಸ್ತ್ರ ಧರಿಸಿ ಗಮನಸೆಳೆದರು. ಬಿಳಿ ಹಾಗೂ ಹಸಿರು ಬಣ್ಣದ ವಸ್ತ್ರ ಧರಿಸಿ ಅಂಕಣಕ್ಕೆ ಬಂದ ಒಸಾಕ, ಪಂದ್ಯದ ವೇಳೆಯೂ ತಾವು ಧರಿಸಿದ ವಿಶೇಷ ಧಿರಿಸು, ಶೂನಲ್ಲಿ ಮಿಂಚಿದರು.

ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಲೆಕ್ಕಾಚಾರ ಉಲ್ಟಾ-ಪಲ್ಟಾ..! ಬೆಂಗಳೂರು ಫ್ಯಾನ್ಸ್‌ಗೆ ಶಾಕ್..?

5 ಗಂಟೆ, 3 ನಿಮಿಷಗಳ ಪಂದ್ಯ: ಹೊಸ ದಾಖಲೆ

ಮಂಗಳವಾರ ಮಧ್ಯರಾತ್ರಿ ಡೇನಿಲ್‌ ಎವಾನ್ಸ್‌-ಕರೇನ್‌ ಕಚನೋವ್‌ ನಡುವಿನ ಪುರುಷರ ಸಿಂಗಲ್ಸ್ ಪಂದ್ಯ 5 ಗಂಟೆ, 35 ನಿಮಿಷಗಳ ಕಾಲ ನಡೆಯಿತು. ಇದು ಯುಎಸ್‌ ಓಪನ್‌ನಲ್ಲೇ ದೀರ್ಘ ಅವಧಿಯ ಪಂದ್ಯ ಎನಿಸಿಕೊಂಡಿತು. ಪ್ರತಿ ಸೆಟ್‌ ಕೂಡಾ ಕನಿಷ್ಠ 1 ಗಂಟೆಗಳ ಕಾಲ ನಡೆಯಿತು. ಪಂದ್ಯದಲ್ಲಿ ಎವಾನ್ಸ್‌ 6-7(6), 7-6(2), 7-6(4), 4-6, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ 2ನೇ ಸುತ್ತು ಪ್ರವೇಶಿಸಿದರು. ಈ ಮೊದಲು 1992ರ ಸ್ಟೀಫನ್‌ ಎಡ್ಬರ್ಗ್‌-ಮೈಕಲ್‌ ಚಾಂಗ್‌ ನಡುವಿನ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯ 5 ಗಂಟೆ, 2 ನಿಮಿಷಗಳ ಕಾಲ ನಡೆದಿತ್ತು.
 

click me!