ಹಾಲಿ ಚಾಂಪಿಯನ್‌ ಕಾರ್ಲೋಸ್‌ ಆಲ್ಕರಜ್‌, ಅರೈನಾ ಸಬಲೆಂಕಾ ಅಬ್ಬರ; US Open 3ನೇ ಸುತ್ತಿಗೆ ಲಗ್ಗೆ

Kannadaprabha News   | Kannada Prabha
Published : Sep 04, 2026, 09:11 AM IST
Aryna Sabalenka

ಸಾರಾಂಶ

ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕಾರ್ಲೋಸ್‌ ಆಲ್ಕರಜ್‌ ಮತ್ತು ಅರೈನಾ ಸಬಲೆಂಕಾ 3ನೇ ಸುತ್ತು ಪ್ರವೇಶಿಸಿದ್ದಾರೆ. ಡ್ಯಾನಿಲ್‌ ಮೆಡ್ವೆಡೆವ್‌ ಸಹ ಗೆಲುವು ಸಾಧಿಸಿದರೆ, ಪುರುಷರ ಡಬಲ್ಸ್‌ನಲ್ಲಿ ಭಾರತದ ಶ್ರೀರಾಮ್ ಬಾಲಾಜಿ ಮತ್ತು ಯೂಕಿ ಭಾಂಬ್ರಿ ಸ್ಪರ್ಧಿಸಲಿದ್ದಾರೆ.

ನ್ಯೂಯಾರ್ಕ್‌: ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕಾರ್ಲೋಸ್‌ ಆಲ್ಕರಜ್‌ ಹಾಗೂ ಅರೈನಾ ಸಬಲೆಂಕಾ ಅವರು ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ.

ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದ ಸ್ಪೇನ್‌ನ ಯುವ ಸೂಪರ್‌ಸ್ಟಾರ್‌ ಆಲ್ಕರಜ್ ಅವರು 2ನೇ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್‌ನ ಜೈಮೀ ಫಾರಿಯಾ ವಿರುದ್ಧ 4-6, 6-0, 6-3, 6-2 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದೇ ವೇಳೆ 2021ರ ಚಾಂಪಿಯನ್‌, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರು ಅಮೆರಿಕದ ಸೆಬಾಸ್ಟಿಯನ್‌ ಗೊರ್ನಿ ವಿರುದ್ಧ ಗೆದ್ದು 3ನೇ ಸುತ್ತು ತಲುಪಿದರು. ಅಮೆರಿಕದ 8ನೇ ಶ್ರೇಯಾಂಕಿತ ಬೆನ್‌ ಶೆಲ್ಟನ್‌, ಆಸ್ಟ್ರೇಲಿಯಾದ 6ನೇ ಶ್ರೇಯಾಂಕಿತ ಅಲೆಕ್ಸ್ ಡೆ ಮಿನೌರ್‌ ಕೂಡಾ 3ನೇ ಸುತ್ತಿಗೇರಿದರು. ಆದರೆ ಯುವ ಆಟಗಾರ ಆ್ಯಂಡ್ರೆ ರುಬ್ಲೆವ್‌ ಸೋತು ಹೊರಬಿದ್ದರು.

ಸಬಲೆಂಕಾ ಜಯಭೇರಿ:

ಮಹಿಳೆಯರ ವಿಶ್ವ ನಂ.1 ಆಟಗಾರ್ತಿ, ಬೆಲಾರಸ್‌ನ ಸಬಲೆಂಕಾ ಅವರು ರಷ್ಯಾದ ಪೋಲಿನಾ ಲಾಟ್ಚೆಂಕೊ ವಿರುದ್ಧ ಕೇವಲ 53 ನಿಮಿಷಗಳಲ್ಲೇ 6-1, 6-1 ಸೆಟ್‌ಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿದರು. ಇತ್ತೀಚೆಗೆ ವಿಂಬಲ್ಡನ್‌ ಟೆನಿಸ್‌ನಲ್ಲಿ ಫೈನಲ್‌ ತಲುಪಿದ್ದ ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಅವರು ಬ್ರಿಟನ್‌ನ ಕ್ಯಾಟೀ ಬೌಲ್ಟರ್ ವಿರುದ್ಧ 6-1, 6-0 ಸೆಟ್‌ಗಳಲ್ಲಿ ಗೆದ್ದರು. ಉಕ್ರೇನ್‌ 9ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ, 2024ರಲ್ಲಿ ಫ್ರೆಂಚ್ ಓಪನ್‌ ಹಾಗೂ ವಿಂಬಲ್ಡನ್‌ ಫೈನಲ್‌ಗೇರಿದ್ದ ಇಟಲಿಯ ಜಾಸ್ಮೀನ್‌ ಪೌಲಿನಿ ಕೂಡಾ 3ನೇ ಸುತ್ತು ತಲುಪಿದರು.

ಭಾರತದ ಶ್ರೀರಾಮ್‌, ಯೂಕಿ ಭಾಂಬ್ರಿ ಸ್ಪರ್ಧೆ

ಈ ಬಾರಿ ಸಿಂಗಲ್ಸ್‌ನಲ್ಲಿ ಭಾರತೀಯರು ಸ್ಪರ್ಧಿಸದಿದ್ದರೂ, ಪುರುಷರ ಡಬಲ್ಸ್‌ನಲ್ಲಿ ಭಾರತದ ಇಬ್ಬರು ಕಣಕ್ಕಿಳಿಯಲಿದ್ದಾರೆ. ತಮಿಳುನಾಡಿನ ಶ್ರೀರಾಮ್‌ ಬಾಲಾಜಿ ಅವರು ಅಮೆರಿಕದ ಎವಾನ್‌ ಕಿಂಗ್ ಜೊತೆಗೂಡಿ ಆಡಲಿದ್ದು, ಯೂಕಿ ಭಾಂಬ್ರಿ ನ್ಯೂಜಿಲೆಂಡ್‌ನ ಮೈಕಲ್‌ ವೆನಸ್‌ ಜೊತೆಗೂಡಿ ಸ್ಪರ್ಧಿಸಲಿದ್ದಾರೆ.

ಮೆಸ್ಸಿಗೆ ಗೌರವ ಸೂಚಿಸಲು ಅರ್ಜೆಂಟೀನಾ ದೇಶದೆಲ್ಲೆಡೆ ಫುಟ್ಬಾಲ್‌ ಪಂದ್ಯದ 10ನೇ ನಿಮಿಷ ವೇಳೆ ಪಂದ್ಯ ಸ್ಥಗಿತ!

ಬ್ಯೂನಸ್‌ ಐರಿಸ್‌: ದಿಗ್ಗಜ ಫುಟ್ಬಾಲ್‌ ಆಟಗಾರ, ಅರ್ಜೆಂಟೀನಾದ ಲಿಯೋನಲ್‌ ಮೆಸ್ಸಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಪ್ರಕಟಿಸಿದ್ದು, ಅವರಿಗೆ ಗೌರವ ಸಲ್ಲಿಸಲು ಅರ್ಜೆಂಟೀನಾ ಫುಟ್ಬಾಲ್‌ ಒಕ್ಕೂಟ(ಎಎಫ್‌ಎ) ವಿಶೇಷ ಹೆಜ್ಜೆ ಇಟ್ಟಿದೆ. ದೇಶದೆಲ್ಲೆಡೆ ಪುರುಷ, ಮಹಿಳೆಯರ ಡಿವಿಷನ್‌ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಪ್ರತಿ ತಂಡಗಳ ಮುಂಬರುವ ಪಂದ್ಯದಲ್ಲಿ 10ನೇ ನಿಮಿಷದಲ್ಲಿ ಪಂದ್ಯವನ್ನು 1 ನಿಮಿಷ ಕಾಲ ಸ್ಥಗಿತಗೊಳಿಸಿ, ಮೆಸ್ಸಿಯ ವೃತ್ತಿಜೀವನವನ್ನು ಗೌರವಿಸುವ ಸಲುವಾಗಿ ಚಪ್ಪಾಳೆ ತಟ್ಟಬೇಕು ಎಂದು ಎಎಫ್‌ಎ ನಿರ್ದೇಶಿಸಿದೆ. ಅಲ್ಲದೆ, ಕ್ರೀಡಾಂಗಣಗಳಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಮೆಸ್ಸಿಗೆ ಗೌರವ ಸಲ್ಲಿಸುವ ವಿಡಿಯೋ ಪ್ರದರ್ಶಿಸಬೇಕೆಂದು ತಿಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದ್ಯಕ್ಕೆ ರೋಹಿತ್‌ ಶರ್ಮಾ ನಿವೃತ್ತಿ ಆಗಲ್ಲ, ವಿವಿಎಸ್ ಲಕ್ಷ್ಮಣ್‌ಗೆ ಹೊಸ ಹುದ್ದೆಯೂ ಇಲ್ಲ!
64 ಬಾಲ್‌ನಲ್ಲಿ 124 ರನ್ ಚಚ್ಚಿದ ಮಂಧಾನ - ಒಂದೇ ಪಂದ್ಯದಲ್ಲಿ ಎರಡು ಬೃಹತ್ ವಿಶ್ವ ದಾಖಲೆ