ಯುಎಸ್ ಓಪನ್: ಕ್ವಾರ್ಟರ್‌ ಫೈನಲ್‌ಗೇರಿದ ಕಾರ್ಲೊಸ್‌ ಆಲ್ಕರಜ್‌, ಅರೈನಾ ಸಬಲೆಂಕಾ

Kannadaprabha News   | Kannada Prabha
Published : Sep 08, 2026, 11:06 AM IST
Carlos Alcaraz

ಸಾರಾಂಶ

ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ಗಳಾದ ಕಾರ್ಲೊಸ್‌ ಆಲ್ಕರಜ್‌ ಮತ್ತು ಅರೈನಾ ಸಬಲೆಂಕಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ವಿಭಾಗದಲ್ಲಿ ಮಾಜಿ ಚಾಂಪಿಯನ್ ಡ್ಯಾನಿಲ್‌ ಮೆಡ್ವೆಡೆವ್‌ ಸೋತು ಹೊರಬಿದ್ದರೆ, ಭಾರತದ ಎಲ್ಲಾ ಆಟಗಾರರು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ನ್ಯೂಯಾರ್ಕ್‌: ಯುಎಸ್‌ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ಗಳಾದ ಕಾರ್ಲೊಸ್‌ ಆಲ್ಕರಜ್‌ ಹಾಗೂ ಅರೈನಾ ಸಬಲೆಂಕಾ ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ ವಿಭಾಗಗಳಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಟೂರ್ನಿಯಲ್ಲಿ 3ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಇವರಿಬ್ಬರಿಗೂ ಇನ್ನು ಕೇವಲ 3 ಗೆಲುವು ಅಗತ್ಯವಿದೆ.

ಪುರುಷರ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ನ ಆಲ್ಕರಜ್‌ಗೆ ಅಮೆರಿಕದ ಟಾಮಿ ಪೌಲ್‌ ವಿರುದ್ಧ 6-4, 6-3, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಲಭಿಸಿತು. ಕ್ವಾರ್ಟರ್‌ನಲ್ಲಿ ಅವರಿಗೆ ಯಾರ ಸವಾಲು ಎದುರಾಗಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಇದೇ ವೇಳೆ ಮಾಜಿ ಚಾಂಪಿಯನ್‌, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಫ್ರಾನ್ಸೆಸ್‌ ಟಿಯಾಫೋ ವಿರುದ್ಧ ಸೋತು ಹೊರಬಿದ್ದರು. ಗ್ರೀನ್‌ಕ ಸ್ಟೆಫಾನೊಸ್‌ ಸಿಟ್ಸಿಪಾಸ್‌ ಸವಾಲು ಕೂಡಾ ಮುಕ್ತಾಯಗೊಂಡಿತು.

ಸಬಲೆಂಕಾಗೆ ಜಯ:

ಮಹಿಳಾ ವಿಭಾಗದಲ್ಲಿ ವಿಶ್ವ ನಂ.1 ಆಟಗಾರ್ತಿ, ಬೆಲಾರಸ್‌ನ ಸಬಲೆಂಕಾ ಅವರು ಅಮೆರಿಕದ ಟೇಲರ್‌ ಟೌನ್‌ಸೆಂಡ್‌ ವಿರುದ್ಧ 6-4, 6-3 ಸೆಟ್‌ಗಳಲ್ಲಿ ಸುಲಭವಾಗಿ ಗೆದ್ದರು. 5ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಸಬಲೆಂಕಾಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಜೆಕ್‌ ಗಣರಾಜ್ಯದ ಲಿಂಡಾ ನೊಸ್ಕೋವಾ ಸವಾಲು ಎದುರಾಗಲಿದೆ. 3ನೇ ಶ್ರೇಯಾಂಕಿತೆ, ಅಮೆರಿಕದ ಜೆಸ್ಸಿಕಾ ಪೆಗುಲಾ, 26ನೇ ಶ್ರೇಯಾಂಕಿತೆ ಎಮ್ಮಾ ನವಾರೊ ಕೂಡಾ ಕ್ವಾರ್ಟರ್‌ ಫೈನಲ್‌ ತಲುಪಿದರು.

ಎಲ್ಲಾ ಭಾರತೀಯರು ಟೂರ್ನಿಯಿಂದ ಔಟ್‌

ಈ ಬಾರಿ ಟೂರ್ನಿಯಲ್ಲಿ ಭಾರತದ ನಾಲ್ವರು ಆಟಗಾರರು ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದರು. ಆದರೆ ಎಲ್ಲರೂ ಸೋತು ಹೊರಬಿದ್ದಿದ್ದಾರೆ. ನಿಕಿ ಪೂಣಚ್ಚ, ಅನಿರುದ್ಧ್‌ ಚಂದ್ರಶೇಖರ್‌, ಯೂಕಿ ಭಾಂಬ್ರಿ ಜೋಡಿಗಳು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರೆ, ಅಮೆರಿಕದ ಎವಾನ್‌ ಕಿಂಗ್ ಜೊತೆಗೂಡಿ ಕಣಕ್ಕಿಳಿದಿದ್ದ ಶ್ರೀರಾಮ್‌ ಬಾಲಾಜಿ 2ನೇ ಸುತ್ತಿನಲ್ಲಿ ಸೋಲನುಭವಿಸಿದರು.

ವಿಶ್ವನಾಥನ್‌ ಆನಂದ್‌ ಎದುರು ವಿಶ್ವ ನಂ.1 ಕಾರ್ಲ್‌ಸನ್‌ಗೆ ಜಯ

ಬೆಂಗಳೂರು: 4ನೇ ಆವೃತ್ತಿಯ ಗ್ಲೋಬಲ್‌ ಚೆಸ್‌ ಲೀಗ್‌ನಲ್ಲಿ ಹಾಲಿ ಚಾಂಪಿಯನ್‌ ಅಲ್ಫೈನ್‌ ಎಪಿಎಲ್ ಪೈಪರ್ಸ್‌ ತಂಡ 3ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಅಲ್ಫೈನ್‌ ತಂಡ ಸೋಮವಾರ 2 ಪಂದ್ಯಗಳನ್ನಾಡಿತು. ದಿನದ ಆರಂಭಿಕ ಪಂದ್ಯದಲ್ಲಿ ಅಲ್ಫೈನ್ಸ್‌ಗೆ ಅಲಸ್ಕನ್‌ ನೈಟ್ಸ್‌ ಸವಾಲು ಎದುರಾಯಿತು. ಅಲಸ್ಕನ್‌ ತಂಡದ ವಿಶ್ವನಾಥನ್‌ ಆನಂದ್ ವಿರುದ್ಧ ವಿಶ್ವ ನಂ.1 ಆಟಗಾರ, ನಾರ್ವೆಯ ಮ್ಯಾಗ್ಸನ್‌ ಕಾರ್ಲ್‌ಸನ್‌ ಗೆಲುವು ಸಾಧಿಸಿದರು. ಆದರೆ ಈ ಗೆಲುವು ಅಲಸ್ಕನ್‌ ವಿರುದ್ಧ ಅಲ್ಫೈನ್‌ಗೆ ಸೋಲು ತಪ್ಪಿಸಲು ನೆರವಾಗಲಿಲ್ಲ. ಅಲಸ್ಕನ್‌ಗೆ 9-7 ಅಂತರದಲ್ಲಿ ಗೆಲುವು ಲಭಿಸಿತು. ಬಳಿಕ ಅಲ್ಫೈನ್‌ ತಂಡ ಅಮೆರಿಕನ್‌ ಗ್ಯಾಂಬಿಟ್ಸ್‌ ವಿರುದ್ಧ 15-3 ಅಂತರದಲ್ಲಿ ಗೆದ್ದು, ಅಗ್ರಸ್ಥಾನಕ್ಕೇರಿತು. ತ್ರಿವೇಣಿ ಕಾಂಟಿನೆಂಟಲ್‌ ಕಿಂಗ್ಸ್‌ ಆಡಿರುವ 4 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದುಲೀಪ್ ಟ್ರೋಫಿ: ಇಶಾನ್ ಕಿಶನ್ ಸ್ಪೋಟಕ 270, ಪೂರ್ವ ವಲಯ 708 ರನ್!
Sachin: ₹70,00,00,000 ಕೋಟಿ ಕೊಟ್ಟು ಭರ್ಜರಿ ಜಮೀನು ಖರೀದಿಸಿದ ಸಚಿನ್ ತೆಂಡೂಲ್ಕರ್; ಈ ಹಿಲ್‌ಸ್ಟೇಷನ್‌ನಲ್ಲಿ ಏನು ತಯಾರಾಗುತ್ತೆ?