
ಕೊಲಂಬೊ(ನ.06): ನಾಯಕ ಆ್ಯಂಜಲೋ ಮ್ಯಾಥ್ಯೂಸ್, ಹಾಗೂ ಉಪನಾಯಕ ದಿನೇಶ್ ಚಾಂಡಿಮಲ್ ಅನುಪಸ್ಥಿತಿಯಲ್ಲಿ ಜಿಂಬಾಬ್ವೆ, ವೆಸ್ಟ್'ಇಂಡೀಸ್ ತಂಡಗಳನ್ನೊಳಗೊಂಡ ತ್ರಿಕೋನ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಉಪುಲ್ ತರಂಗ ಮನ್ನೆಡೆಸಲಿದ್ದಾರೆ.
ಇಂದು ನಡೆದ ರಾಷ್ಟ್ರೀಯ ಆಯ್ಕೆ ಸಮಿತಿಯು 15 ಆಟಗಾರರನ್ನೊಳಗೊಂಡ ಶ್ರೀಲಂಕಾ ತಂಡವನ್ನು ಪ್ರಕಟಿಸಿದ್ದು, 31 ವರ್ಷದ ಹಿರಿಯ ಅನುಭವಿ ಎಡಗೈ ಆಟಗಾರನಿಗೆ ತಂಡದ ನೇತೃತ್ವ ವಹಿಸಲು ಅವಕಾಶ ನೀಡಿದೆ. ಇದೇವೇಳೆ ಕುಶಾಲ್ ಪೆರೆರಾಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.
ತ್ರಿಕೋನ ಸರಣಿಯ ಉದ್ಘಾಟನಾ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ನವೆಂಬರ್ 14ರಂದು ಆಡಲಿದೆ.
ಶ್ರೀಲಂಕಾ ತಂಡ ಇಂತಿದೆ
ಧನಂಜಯ ಡಿ ಸಿಲ್ವ, ಕುಶಾಲ್ ಪೆರೆರಾ, ನಿರೋಶಾನ್ ಡಿಕ್'ವೇಲಾ, ಉಪುಲ್ ತರಂಗ(ನಾಯಕ), ಕುಶಾಲ್ ಮೆಂಡೀಸ್, ಶೇಹಾನ್ ಜಯಸೂರ್ಯ, ಆಸೆಲಾ ಗುಣರತ್ನೆ, ಸಚಿತ್ ಪತಿರಣ, ನುವಾನ್ ಕುಲಶೇಖರ, ದಶುನ್ ಶನಕ, ನುವಾನ್ ಪ್ರದೀಪ್, ಲಹೀರು ಕುಮಾರ, ಸುರಂಗ ಲಕ್ಮಲ್, ಲಕ್ಷ್ಮಣ್ ಸಂದಕನ್ ಹಾಗೂ ಜೆಫ್ರೀ ವಂದ್ರಸೇ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.