
ಬೆಂಗಳೂರು(ನ.01): ಭಾನುವಾರ ಮುಕ್ತಾಯ ಕಂಡ ನಾಲ್ಕನೇ ಏಷ್ಯಾ ಚಾಂಪಿಯನ್ಸ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಗೆಲುವು ಸಾಧಿಸಲು ತಂಡದಲ್ಲಿನ ಐಕ್ಯತೆಯ ಪ್ರದರ್ಶನವೇ ಪ್ರಮುಖ ಕಾರಣ ಎಂದು ಡ್ರ್ಯಾಗ್‌ಫ್ಲಿಕರ್ ರೂಪೀಂದರ್ ಸಿಂಗ್ ಅಭಿಪ್ರಾಯಿಸಿದರು.
ಹಾಕಿ ಟೀಂ ಇಂಡಿಯಾ ಚಾಂಪಿಯನ್ ಆಗಲು ತಂಡದ ಪರ 11 ಗೋಲುಗಳನ್ನು ಬಾರಿಸಿ ಟೂರ್ನಿಯಲ್ಲಿ ತಂಡ ಅಜೇಯವಾಗುಳಿಯಲು ನೆರವಾದ ರೂಪೀಂದರ್ ಸೋಮವಾರ ತಡರಾತ್ರಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದರು.
‘‘ತಂಡದಲ್ಲಿನ ಕೆಲ ಯುವ ಆಟಗಾರರಿಗೆ ಈ ಪಂದ್ಯಾವಳಿ ಹೊಸ ಅನುಭವ ನೀಡಿತು. ಎಲ್ಲಕ್ಕಿಂತ ಮಿಗಿಲಾಗಿ ಕಿರಿಯರು ಹಾಗೂ ಹಿರಿಯರೆಂಬ ಭೇದವಿಲ್ಲದೆ ಐಕ್ಯತೆಯ ಆಟವಾಡಿದ್ದು ಈ ಅಪೂರ್ವ ಗೆಲುವಿಗೆ ಕಾರಣ’’ ಎಂದು ರೂಪೀಂದರ್ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.