ಕೀಪಿಂಗ್ ವೇಳೆ ತಾಯಿಯ ಹೆಸರಿದ್ದ ಜರ್ಸಿಯನ್ನು ನಾಯಕ ಧೋನಿ ಧರಿಸಿಲ್ಲವೇಕೆ?

Published : Oct 31, 2016, 05:55 PM ISTUpdated : Apr 11, 2018, 01:06 PM IST
ಕೀಪಿಂಗ್ ವೇಳೆ ತಾಯಿಯ ಹೆಸರಿದ್ದ ಜರ್ಸಿಯನ್ನು ನಾಯಕ ಧೋನಿ ಧರಿಸಿಲ್ಲವೇಕೆ?

ಸಾರಾಂಶ

ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾದ ಆಟಗಾರರು ತಮ್ಮ ಜರ್ಸಿಯ ಹಿಂದೆ ತಾಯಿಯ ಹೆಸರನ್ನು ಹಾಕಿಸಿಕೊಂಡು ಮೈದಾನಕ್ಕಿಳಿದಿದ್ದರು. ತಮ್ಮ ಅಮ್ಮಂದಿರಿಗೆ ಸಲ್ಲಿಸಿದ ಈ ಗೌರವಕ್ಕೆ ಟೀಂ ಇಂಡಿಯಾದ ಆಟಗಾರರನ್ನು ಪ್ರತಿಯೊಬ್ಬರೂ ಪ್ರಶಂಸಿಸಿದ್ದರು. ಆದರೆ ಇವೆಲ್ಲದರ ನಡುವೆ ನಾಯಕ ಧೋನಿ ಮಾತ್ರ ಬ್ಯಾಟಿಂಗ್ ವೇಳೆ ತಾಯಿಯ ಹೆಸರಿರುವ ಜರ್ಸಿ ತೊಟ್ಟು, ಕೀಪಿಂಗ್ ಮಾಡುವ ವೇಳೆ ಮಾತ್ರ ತನ್ನ ಹೆಸರಿನ ಜರ್ಸಿ ತೊಟ್ಟಿದ್ದು ಬಹುತೇಕರಲ್ಲಿ ಗೊಂದಲ ಮೂಡಿಸಿತ್ತು. ಕೂಲ್ ಕ್ಯಾಪ್ಟನ್ ಹೀಗ್ಯಾಕೆ ಮಾಡಿದರೆಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಆದರೆ ಇದೀಗ ಮಹಿ ಕೀಪಿಂಗ್ ಮಾಡುವ ಸಂದರ್ಭದಲ್ಲಿ ತನ್ನ ತಾಯಿ 'ದೇವಕಿ' ಹೆಸರಿನ ಜರ್ಸಿ ಯಾಕೆ ಧರಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಲಭಿಸಿದೆ.

ವಿಶಾಖಪಟ್ಟಣ(ನ.01): ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾದ ಆಟಗಾರರು ತಮ್ಮ ಜರ್ಸಿಯ ಹಿಂದೆ ತಾಯಿಯ ಹೆಸರನ್ನು ಹಾಕಿಸಿಕೊಂಡು ಮೈದಾನಕ್ಕಿಳಿದಿದ್ದರು. ತಮ್ಮ ಅಮ್ಮಂದಿರಿಗೆ ಸಲ್ಲಿಸಿದ ಈ ಗೌರವಕ್ಕೆ ಟೀಂ ಇಂಡಿಯಾದ ಆಟಗಾರರನ್ನು ಪ್ರತಿಯೊಬ್ಬರೂ ಪ್ರಶಂಸಿಸಿದ್ದರು. ಆದರೆ ಇವೆಲ್ಲದರ ನಡುವೆ ನಾಯಕ ಧೋನಿ ಮಾತ್ರ ಬ್ಯಾಟಿಂಗ್ ವೇಳೆ ತಾಯಿಯ ಹೆಸರಿರುವ ಜರ್ಸಿ ತೊಟ್ಟು, ಕೀಪಿಂಗ್ ಮಾಡುವ ವೇಳೆ ಮಾತ್ರ ತನ್ನ ಹೆಸರಿನ ಜರ್ಸಿ ತೊಟ್ಟಿದ್ದು ಬಹುತೇಕರಲ್ಲಿ ಗೊಂದಲ ಮೂಡಿಸಿತ್ತು. ಕೂಲ್ ಕ್ಯಾಪ್ಟನ್ ಹೀಗ್ಯಾಕೆ ಮಾಡಿದರೆಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.

ಆದರೆ ಇದೀಗ ಮಹಿ ಕೀಪಿಂಗ್ ಮಾಡುವ ಸಂದರ್ಭದಲ್ಲಿ ತನ್ನ ತಾಯಿ 'ದೇವಕಿ' ಹೆಸರಿನ ಜರ್ಸಿ ಯಾಕೆ ಧರಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಲಭಿಸಿದೆ. ಈ ಹಿಂದೆ ಧೋನಿ ಮೈದಾಕ್ಕಿಳಿಯುವಾಗ ಯಾವ ರೀತಿಯ ಜರ್ಸಿ ಧರಿಸುತ್ತಿದ್ದರು ಎಂಬುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದೇ ಕ್ಷಣದಲ್ಲಿ ಇದಕ್ಕೆ ಉತ್ತರ ಸಿಗುತ್ತದೆ. ಮೊದಲಿನಿಂದಲೂ ಮಹಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ  ಶಾರ್ಟ್ ಸ್ಲೀವ್ ಇರುವ ಜರ್ಸಿಯನ್ನು ಧರಿಸಿದರೆ, ಕೀಪಿಂಗ್ ಮಾಡುವಾಗ ಫುಲ್ ಸ್ಲೀವ್ ಜರ್ಸಿಯನ್ನು ಧರಿಸಿ ಮೈದಾನಕ್ಕಿಳಿಯುತ್ತಾರೆ.

ಈ ಪಂದ್ಯದ ವೇಳೆ ಅವರ ಫುಲ್ ಸ್ಲೀವ್ ಜರ್ಸಿಯಲ್ಲಿ ತಾಯಿಯ ಹೆಸರಿರಲಿಲ್ಲ. ಹೀಗಾಗಿ ಬೇರೆ ವಿಧಿ ಇಲ್ಲದೆ ತನ್ನದೇ ಹೆಸರಿರುವ ಜರ್ಸಿ ತೊಡಬೇಕಾದ ಅನಿವಾರ್ಯತೆ ಬಂದೊದಗಿದೆ. ಹೀಗಾಗಿ ಮಹಿ 'ಧೋನಿ' ಹೆಸರಿರುವ ಜರ್ಸಿ ಧರಿಸಿದ್ದರು.

ತಾಯಿಯ ಹೆಸರಿರುವ ಜರ್ಸಿ ಧರಿಸಿದ್ದು, ಕ್ರೀಡಾ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಿತ್ತು. ಟೀಂ ಇಂಡಿಯಾದ ಆಟಗಾರರು ತಾಯಿಯ ಮಹತ್ವ ಸಾರುವ ಸಲುವಾಗಿ ತಮ್ಮ ಬೆನ್ನ ಹಿಂದೆ ತಾಯಿಯ ಹೆಸರನ್ನು ಹಾಕಿಸಿಕೊಂಡಿದ್ದರು.  ಈ ಹೊಸ ಬದಲಾವಣೆಯ ಕುರಿತು ಮಾತನಾಡಿದ್ದ ನಾಯಕ ಧೋನಿ, ದೇಶ ಕಾಯುವ ಸೈನಿಕರಿಗೆ ಗೌರವ ನೀಡುವಷ್ಟೆ ಗೌರವವನ್ನು ತಾಯಿಗೂ ನೀಡಬೇಕು ಆಕೆಯಿಂದಲೇ ನಾವೆಲ್ಲರು ಎಂದಿದ್ದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎರಡು ವರ್ಷಗಳ ಬಳಿಕ ದಿಟ್ಟ ನಿರ್ಧಾರ ಮಾಡಿದ ವಿರಾಟ್ ಕೊಹ್ಲಿ; ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿದ ಈ ಪೋಸ್ಟ್‌!
ರೋಹಿತ್ ಗುಂಗಿನಿಂದ ಹೊರಬರದ ಜಯ್ ಶಾ! ಹಿಟ್‌ಮ್ಯಾನ್‌ಗೆ ಕ್ಯಾಪ್ಟನ್ ಎಂದು ಕರೆದ ಬಗ್ಗೆ ಅಚ್ಚರಿ ಮಾಹಿತಿ ಬಿಚ್ಚಿಟ್ಟ ಐಸಿಸಿ ಚೇರ್‌ಮನ್