Union Budget 2024: ಒಲಿಂಪಿಕ್ ವರ್ಷದಲ್ಲಿ ಮೋದಿ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು?

By Kannadaprabha News  |  First Published Feb 2, 2024, 6:21 AM IST

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದ ಬಜೆಟ್‌ನಲ್ಲಿ ಕ್ರೀಡೆಗೆ ₹3,396.96 ಕೋಟಿ ಅನುದಾನ ಮೀಸಲಿರಿಸಿದ್ದರು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಅನುದಾನ ಹೆಚ್ಚಿಸಲಾಗಿದೆ.


ನವದೆಹಲಿ(ಫೆ.02): ಕೇಂದ್ರ ಸರ್ಕಾರ ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಕ್ರೀಡೆಗೆ 3442.32 ಕೋಟಿ ರುಪಾಯಿ ಅನುದಾನ ಮೀಸಲಿರಿಸಲಾಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ 45.36 ಕೋಟಿ ರುಪಾಯಿ ಹೆಚ್ಚು.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದ ಬಜೆಟ್‌ನಲ್ಲಿ ಕ್ರೀಡೆಗೆ ₹3,396.96 ಕೋಟಿ ಅನುದಾನ ಮೀಸಲಿರಿಸಿದ್ದರು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಅನುದಾನ ಹೆಚ್ಚಿಸಲಾಗಿದೆ. ಖೇಲೋ ಇಂಡಿಯಾಗೆ ₹900 ಕೋಟಿ, ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ(ಸಾಯ್) ₹795.77 ಕೋಟಿ, ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಲ್ಯಾಬ್(ಎನ್‌ಡಿಟಿಎಲ್‌)ಗೆ ₹22 ಕೋಟಿ ರುಪಾಯಿ ಅನುದಾನ ಒದಗಿಸಲಾಗಿದೆ.

Latest Videos

undefined

ಬಜೆಟ್ ಮಂಡನೆ ವೇಳೆ ಚೆಸ್ ತಾರೆ ಆರ್ ಪ್ರಜ್ಞಾನಂದನ್‌ ನೆನಪಿಸಿಕೊಂಡಿದ್ದೇಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್?

ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಕ್ಕೆ ₹91.90 ಕೋಟಿ, ಕ್ರೀಡಾಪಟುಗಳ ಪ್ರೋತ್ಸಾಹ ಧನಕ್ಕೆ ₹39 ಕೋಟಿ ರುಪಾಯಿ ಮೀಸಲಿರಿಸಲಾಗಿದೆ. ಕಳೆದ ಬಾರಿ ₹84 ಕೋಟಿ ನೀಡಲಾಗಿತ್ತು. ಇನ್ನು ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಕಳೆದ ಬಾರಿ ₹ 15 ಕೋಟಿ ರುಪಾಯಿ ಅನುದಾನ ನೀಡಿದ್ದರೆ, ಈ ಬಾರಿ ಅದನ್ನು ಕೇವಲ ₹1 ಲಕ್ಷಕ್ಕೆ ಇಳಿಸಲಾಗಿದೆ.  

ಪ್ರಚಾರವಿಲ್ಲದೆ ಸಪ್ಪೆಯಾದ ಭಾರತ vs ಪಾಕ್‌ ನಡುವಿನ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ

ಇಸ್ಲಾಮಾಬಾದ್‌: ಸ್ಥಳಾಂತರದ ಕೂಗಿನ ನಡುವೆಯೂ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಆಯೋಜನೆಗೊಳ್ಳಲಿರುವ ಭಾರತ-ಪಾಕಿಸ್ತಾನ ನಡುವಿನ ಡೇವಿಸ್‌ ಕಪ್‌ ಪಂದ್ಯ ಪ್ರಚಾರ, ಸಂಭ್ರಮವಿಲ್ಲದೆ ಸಪ್ಪೆಯಾಗಿದೆ.

ಕ್ರೀಡಾಂಗಣದಲ್ಲಿ ಆಹ್ವಾನಿತ ಅತಿಥಿಗಳೂ ಸೇರಿದಂತೆ ಕೇವಲ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯರು ಕೂಡಾ ಪಂದ್ಯ ವೀಕ್ಷಣೆಗೆ ಆಸಕ್ತಿ ತೋರಿಸುತ್ತಿಲ್ಲ. ಇಸ್ಲಾಮಾಬಾದ್‌ನ ಬೀದಿಗಳಲ್ಲಿ ಪಂದ್ಯಾವಳಿ ಕುರಿತು ಒಂದೂ ಪೋಸ್ಟರ್‌ ಕೂಡಾ ಕಾಣಸಿಗುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

9 ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗರು ಬಂದಷ್ಟೇ ಬೇಗ ಮರೆಯಾಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇನ್ನು ಭದ್ರತೆಯ ಕಾರಣಕ್ಕೆ ಆಟಗಾರರನ್ನು ಹೋಟೆಲ್‌ ಮತ್ತು ಕ್ರೀಡಾಂಗಣಕ್ಕೆ ಸೀಮಿತಗೊಳಿಸಿಲಾಗಿದೆ. ಹೊರಗಡೆ ಎಲ್ಲೂ ಹೋಗದಂತೆ ನಿರ್ಬಂಧ ಹೇರಲಾಗಿದ್ದು, ಶಾಪಿಂಗ್‌ ಮಾಲ್‌, ಪ್ರವಾಸಿ ತಾಣಗಳಿಗೂ ಹೋಗುವಂತಿಲ್ಲ. ಭಾರತ ಹಾಗೂ ಪಾಕ್‌ ತಂಡಗಳು 2019ರಲ್ಲಿ ಕಜಕಸ್ತಾನದಲ್ಲಿ ಕೊನೆ ಬಾರಿ ಡೇವಿಸ್‌ ಕಪ್‌ನಲ್ಲಿ ಮುಖಾಮುಖಿಯಾಗಿವೆ. ಪಾಕ್ ತಂಡ ಕೊನೆ ಬಾರಿ ಭಾರತದಲ್ಲಿ ಆಡಿದ್ದು 2006ರಲ್ಲಿ.

ಹೈದರಾಬಾದ್‌ನಲ್ಲಿ ಮಾ.1ರಂದು ಪ್ರೊ ಕಬಡ್ಡಿ ಲೀಗ್‌ ಫೈನಲ್‌

ಮುಂಬೈ: 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಗಳು ಫೆ.26ರಿಂದ ಮಾರ್ಚ್ 1ರವರೆಗೆ ಹೈದ್ರಾಬಾದ್‌ನಲ್ಲಿ ನಡೆಯಲಿದೆ ಎಂದು ಟೂರ್ನಿ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ಗುರುವಾರ ಪ್ರಕಟಿಸಿದೆ.

ಲೀಗ್ ಹಂತದ ಅಂತ್ಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ ಪ್ರವೇಶಿಸಲಿವೆ. ಅಂಕಪಟ್ಟಿಯಲ್ಲಿ 3ರಿಂದ 6ನೇ ಸ್ಥಾನದಲ್ಲಿರುವ ತಂಡಗಳು ಫೆ.6ರಂದು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಎಲಿಮಿನೇಟರ್‌ನಲ್ಲಿ ಗೆಲ್ಲುವ 2 ತಂಡಗಳು ಸೆಮೀಸ್‌ಗೇರಲಿವೆ. ಎಲಿಮಿನೇಟರ್ 1ರ ವಿಜೇತರು ಸೆಮಿಫೈನಲ್ 1ರಲ್ಲಿ ಟೇಬಲ್ ಟಾಪರ್ ವಿರುದ್ಧ ಮತ್ತು ಎಲಿಮಿನೇಟರ್ 2ರ ವಿಜೇತರು ಫೆ.28ರಂದು ಅಂಕಪಟ್ಟಿಯ 2ನೇ ಸ್ಥಾನಿ ತಂಡದ ವಿರುದ್ಧ ಆಡಲಿದೆ. ಮಾರ್ಚ್ 1ರಂದು ಫೈನಲ್‌ ನಡೆಯಲಿದೆ.
 

click me!