ಸುಪ್ರೀಂ ತೀರ್ಪಿಗೆ ನ್ಯಾ. ಲೋಧಾ ಬೇಸರ

By Web DeskFirst Published Aug 11, 2018, 11:29 AM IST
Highlights

ಸುಪ್ರೀಂಕೋರ್ಟ್ ಗುರುವಾರ ನ್ಯಾ.ಲೋಧಾ ಶಿಫಾರಸಿನ ಒಂದು ರಾಜ್ಯ, ಒಂದು ಮತ ನೀತಿಯನ್ನು 3 ವರ್ಷಗಳ ಬಳಿಕ ಇದ್ದ ಕೂಲಿಂಗ್ ಆಫ್ ನಿಯಮವನ್ನು 6 ವರ್ಷಗಳಿಗೆ ಏರಿಕೆ ಮಾಡಿತ್ತು. ಜತೆಗೆ ಕೆಲ ಸಂಸ್ಥೆಗಳಿಗೆ ಮತದಾನದ ಹಕ್ಕು ಹಾಗೂ ಪೂರ್ಣಾವಧಿ ಸದಸ್ಯತ್ವದ ತೀರ್ಪು ಘೋಷಿಸಿತ್ತು. 

ನವದೆಹಲಿ[ಆ.11]: ಬಿಸಿಸಿಐ ನೂತನ ಸಂವಿಧಾನ ಕುರಿತ ಸುಪ್ರೀಂ ತೀರ್ಪಿನಲ್ಲಿ ಹಿನ್ನಡೆಯಾಗಿದ್ದಕ್ಕೆ ನ್ಯಾ.ಆರ್.ಎಂ.ಲೋಧಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸುಪ್ರೀಂಕೋರ್ಟ್ ಗುರುವಾರ ನ್ಯಾ.ಲೋಧಾ ಶಿಫಾರಸಿನ ಒಂದು ರಾಜ್ಯ, ಒಂದು ಮತ ನೀತಿಯನ್ನು 3 ವರ್ಷಗಳ ಬಳಿಕ ಇದ್ದ ಕೂಲಿಂಗ್ ಆಫ್ ನಿಯಮವನ್ನು 6 ವರ್ಷಗಳಿಗೆ ಏರಿಕೆ ಮಾಡಿತ್ತು. ಜತೆಗೆ ಕೆಲ ಸಂಸ್ಥೆಗಳಿಗೆ ಮತದಾನದ ಹಕ್ಕು ಹಾಗೂ ಪೂರ್ಣಾವಧಿ ಸದಸ್ಯತ್ವದ ತೀರ್ಪು ಘೋಷಿಸಿತ್ತು. 

‘ನಮ್ಮ ಸಮಿತಿ ಶಿಫಾರಸು ಮಾಡಿದ್ದ ನಿಯಮಗಳು ಪಾರದರ್ಶಕ ಆಡಳಿತಕ್ಕೆ ನೆರವಾಗುವ ರೀತಿಯಲ್ಲಿತ್ತು. ಆದರೆ ಶಿಫಾರಸನ್ನು ತಿರಸ್ಕಾರ ಮಾಡುವ ಮೂಲಕ, ಬಿಸಿಸಿಐನಲ್ಲಿ ಮತ್ತೊಮ್ಮೆ ಸಮಸ್ಯೆಗಳು ಉದ್ಭವವಾಗಲು ದಾರಿ ಮಾಡಿಕೊಟ್ಟಂತಾಗಿದೆ’ ಎಂದು ನ್ಯಾ.ಲೋಧಾ ಬೇಸರ ವ್ಯಕ್ತಪಡಿಸಿದ್ದಾರೆ.

click me!