ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರಿ ಮುಖಭಂಗ-107 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್

By Web DeskFirst Published Aug 10, 2018, 11:57 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಅಭಿಮಾನಿಗಳ ನಿರೀಕ್ಷೆಗಳನ್ನ ಬುಡಮೇಲು ಮಾಡಿದೆ. ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನ ಹೇಗಿತ್ತು? ಇಲ್ಲಿದೆ ಅಪ್‌ಡೇಟ್ಸ್.

ಲಾರ್ಡ್ಸ್(ಆ.10): ಇಂಗ್ಲೆಂಡ್ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ರನ್‌ಗಳಿಗೆ 107 ಆಲೌಟ್ ಆಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 35.2 ಓವರ್ ಆಡಿದ ಟೀಂ ಇಂಡಿಯಾ, ಅತ್ಯಲ್ವ ಮೊತ್ತಕ್ಕೆ ಆಲೌಟ್ ಆದ ಅಪಖ್ಯಾತಿಗೆ ಗುರಿಯಾಗಿದೆ. ದ್ವಿತೀಯ ದಿನದಲ್ಲಿ ಜೇಮ್ಸ್ ಆಂಡರ್ಸನ್ ಸ್ವಿಂಗ್ ದಾಳಿ ಹಾಗೂ ಮಳೆರಾಯನ ಆರ್ಭಟಕ್ಕೆ ಮಕಾಡೆ ಮಲಗಿದೆ.

ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ 2ನೇ ದಿನ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತಕ್ಕೆ ಮಳೆರಾಯನ ಜೊತೆ ಇಂಗ್ಲೆಂಡ್ ತಂಡ ಕೂಡ ಕಾಡಿತು. ರನ್ ಖಾತೆ ಆರಂಭಿಸೋ ಮೂದಲೇ ಮುರಳಿ ವಿಜಯ್ ಪೆವಿಲಿಯನ್ ಸೇರಿಕೊಂಡರು.

ಕೆಎಲ್ ರಾಹುಲ್ 2 ಬೌಂಡರಿ ಬಾರಿಸಿ ಔಟಾದರು. ಇನ್ನು 2ನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದ ಚೇತೇಶ್ವರ್ ಪೂಜಾರ 1 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಅಷ್ಟರಲ್ಲೇ 2 ಬಾರಿ ಮಳೆಗೆ ಸ್ಥಗಿತಗೊಂಡಿದ್ದ ಪಂದ್ಯ ಮತ್ತೆ ಸುದೀರ್ಘ ಅವಧಿಗೆ ಸ್ಥಗಿತಗೊಂಡಿತು. 

ಮಳೆ  ಬಳಿಕ ಪಂದ್ಯ ಆರಂಭಗೊಂಡಾಗ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಆಸರೆಯಾಗಿದ್ದರು. ಆದರೆ ಕೊಹ್ಲಿ 23 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ 11 ಹಾಗೂ ದಿನೇಶ್ ಕಾರ್ತಿಕ್ 1 ರನ್ ಸಿಡಿಸಿ ಔಟಾದರು. ಅಲ್ಪ ಹೋರಾಟ ನೀಡಿದ ಅಜಿಂಕ್ಯ ರಹಾನೆ 18 ರನ್ ಸಿಡಿಸಿ ನಿರ್ಗಮಿಸಿದರು. 

ಕುಲ್ದೀಪ್ ಯಾದವ್ ಶೂನ್ಯ ಸುತ್ತಿದರೆ, ಆರ್ ಅಶ್ವಿನ್ 29 ರನ್ ಸಿಡಿಸಿ ಔಟಾದರು. ಇದು ಟೀಂ ಇಂಡಿಯಾ ಪರ ವೈಯುಕ್ತಿ ಗರಿಷ್ಠ ಸ್ಕೋರ್. ಇಶಾಂತ್ ಶರ್ಮಾ ವಿಕೆಟ್ ಪತನದೊಂದಿಗೆ ಟೀಂ ಇಂಡಿಯಾ 107 ರನ್‌ಗಳಿಗೆ ಆಲೌಟ್ ಆಯಿತು.ಜೇಮ್ಸ್ ಆಂಡರ್ಸ್ 5 ವಿಕೆಟ್ ಕಬಳಿಸಿ ಮಿಂಚಿದರು.   ಭಾರತದ ವಿಕೆಟ್ ಪತನದೊಂದಿಗೆ 2ನೇ ದಿನದಾಟ ಅಂತ್ಯಗೊಂಡಿತು.
 

click me!