
ಮುಂಬೈ(ಆ.31): ಸ್ಟಾರ್ ರೈಡರ್ ಕಾಶಿಲಿಂಗ ಅಡಕೆ ಅವರ ಆಕರ್ಷಕ ಆಟದ ನೆರವಿನಿಂದ ಯು ಮುಂಬಾ ತಂಡ, ಜೈಪುರ ಪಿಂಕ್ ಫ್ಯಾಂಥರ್ಸ್ ವಿರುದ್ಧ 36-32 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಗೆಲುವಿನಿಂದ ತವರಿನ ಚರಣಕ್ಕೆ ಮುಂಬಾ ವಿದಾಯ ಹೇಳಿದೆ.
ಮೊದಲಾರ್ಧ ಮುಕ್ತಾಯದ ವೇಳೆಗೆ 15-16 ಅಂಕಗಳ ಹಿನ್ನಡೆಯಲ್ಲಿದ್ದ ಅನೂಪ್ ಕುಮಾರ್ ನೇತೃತ್ವದ ಯು ಮುಂಬಾ ಆ ನಂತರ ಪುಟಿದೆದ್ದಿತು.
ಕೊನೆ ಕ್ಷಣದವರೆಗೂ ರೋಚಕ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಕೊನೆಯ 2 ನಿಮಿಷ ಬಾಕಿ ಇದ್ದಾಗ ಅಂಕಗಳು 32-32ರಿಂದ ಸಮಗೊಂಡಿತ್ತು. ಈ ವೇಳೆ ರೈಡಿಂಗ್'ಗೆ ತೆರಳಿದ ಅಡಕೆ ಎರಡು ಅಂಕ ಗಳಿಸುವ ಪಂದ್ಯ ಗತಿಯನ್ನು ಬದಲಿಸಿದರು.
ಕೊನೆಗೆ ಜೈಪುರ ಜಸ್ವೀರ್ ಸಿಂಗ್'ರನ್ನು ಟ್ಯಾಕಲ್ ಮಾಡುವ ಮೂಲಕ ಮುಂಬಾ ಅಂತರವನ್ನು 35-32ಕ್ಕೇರಿಸಿಕೊಂಡಿತು. ಈ ವೇಳೆ ಮುಂಬಾಗೆ ತಾಂತ್ರಿಕವಾಗಿ ಮತ್ತೊಂದು ಅಂಕ ಲಭಿಸಿ, ಅಂತಿಮವಾಗಿ ಗೆಲುವಿನ ನಗೆ ಬೀರಿತು.
ಈ ಗೆಲುವಿನೊಂದಿಗೆ ಎ ವಲಯದಲ್ಲಿ ಯು ಮುಂಬಾ ಎರಡನೇ ಸ್ಥಾನಕ್ಕೆ ಏರಿತು. ಯು ಮುಂಬಾ ತಾನಾಡಿದ 11 ಪಂದ್ಯಗಳಲ್ಲಿ 5 ಗೆಲುವು 6 ಸೋಲಿನೊಂದಿಗೆ 29 ಅಂಕ ಕಲೆ ಹಾಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.