ಅಡಿಲೇಡ್ ದಿಗ್ವಿಜಯ: ಟ್ವಿಟರಿಗರ ಹೃದಯ ಗೆದ್ದ ಮೊದಲ ಟೆಸ್ಟ್

Published : Dec 10, 2018, 12:02 PM IST
ಅಡಿಲೇಡ್ ದಿಗ್ವಿಜಯ: ಟ್ವಿಟರಿಗರ ಹೃದಯ ಗೆದ್ದ ಮೊದಲ ಟೆಸ್ಟ್

ಸಾರಾಂಶ

ಮೊದಲ ಇನ್ನಿಂಗ್ಸ್’ನಲ್ಲಿ 15 ರನ್’ಗಳ ಮುನ್ನಡೆ, ಎರಡನೇ ಇನ್ನಿಂಗ್ಸ್’ನಲ್ಲಿ ಪೂಜಾರ-ರಹಾನೆ ಜತೆಯಾಟ ಹಾಗೆಯೇ ಬೌಲರ್’ಗಳ ಸಂಘಟಿತ ಪ್ರದರ್ಶನ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಸುಮಾರು 10 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ.

ಬೆಂಗಳೂರು[ಡಿ.10]: ಟೀಂ ಇಂಡಿಯಾ ಕರಾರುವಕ್ಕಾದ ಬೌಲಿಂಗ್, ಆಸಿಸ್ ಶಿಸ್ತುಬದ್ಧ ಬ್ಯಾಟಿಂಗ್ ಅಡಿಲೇಡ್ ಟೆಸ್ಟ್’ನ ಅಂತಿಮ ದಿನದ ಹೈಲೈಟ್ಸ್. ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಅಡಿಲೇಡ್ ಟೆಸ್ಟ್ ಪಂದ್ಯವನ್ನು ಭಾರತ 31 ರನ್’ಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿದೆ. ಈ ಪಂದ್ಯ ಮಾಜಿ ದಿಗ್ಗಜ ಕ್ರಿಕೆಟಿಗರ ಹಾಗೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಟೀಂ ಇಂಡಿಯಾ ನೀಡಿದ್ದ 323 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಆಸಿಸ್’ಗೆ ಅಂತಿಮ ದಿನ ಗೆಲ್ಲಲು 219 ರನ್’ಗಳ ಅವಶ್ಯಕತೆಯಿತ್ತು. ಒಂದು ಹಂತದಲ್ಲಿ ರಕ್ಷಣಾತ್ಮಕ ಆಟ ಪ್ರದರ್ಶಿಸುತ್ತಲೇ ಗೆಲುವಿನ ಸಮೀಪ ಸಾಗಿದ್ದ ಆಸ್ಟ್ರೇಲಿಯಾ ಗೆಲುವಿಗೆ ಕೆಲವೇ ಕೆಲವು ರನ್’ಗಳಿದ್ದಾಗ ವಿಕೆಟ್ ಕಳೆದುಕೊಂಡು ಪಂದ್ಯ ಕೈಚೆಲ್ಲಿತು. ಮೊದಲ ಇನ್ನಿಂಗ್ಸ್’ನಲ್ಲಿ 15 ರನ್’ಗಳ ಮುನ್ನಡೆ, ಎರಡನೇ ಇನ್ನಿಂಗ್ಸ್’ನಲ್ಲಿ ಪೂಜಾರ-ರಹಾನೆ ಜತೆಯಾಟ ಹಾಗೆಯೇ ಬೌಲರ್’ಗಳ ಸಂಘಟಿತ ಪ್ರದರ್ಶನ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಸುಮಾರು 10 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ.

ಅಡಿಲೇಡ್ ಟೆಸ್ಟ್ ನೋಡಿದ ಕ್ರಿಕೆಟ್ ದಿಗ್ಗಜರು ಏನಂದ್ರು ನೀವೇ ನೋಡಿ..

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!