ಫಿಫಾ 2018: ಫ್ರಾನ್ಸ್ ಅಧ್ಯಕ್ಷನ ಸಂಭ್ರಮ ಸೋಷಿಯಲ್ ಮೀಡಿಯಾದಲ್ಲಿ ವೈರಲ್

Published : Jul 16, 2018, 12:37 PM IST
ಫಿಫಾ 2018: ಫ್ರಾನ್ಸ್ ಅಧ್ಯಕ್ಷನ ಸಂಭ್ರಮ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಸಾರಾಂಶ

2018ನೇ ಸಾಲಿನ ಫಿಫಾ ವಿಶ್ವಕಪ್ ಫೈನಲ್’ನಲ್ಲಿ ಕ್ರೊವೇಷಿಯಾವನ್ನು 4-2 ಗೋಲುಗಳಿಂದ ಮಣಿಸಿದ ಫ್ರಾನ್ಸ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. 20 ವರ್ಷಗಳ ಬಳಿಕ ಅಂದರೆ 1998ರ ನಂತರ ಎರಡನೇ ಬಾರಿಗೆ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.   

ಮಾಸ್ಕೋ[ಜು.16]: 2018ನೇ ಸಾಲಿನ ಫಿಫಾ ವಿಶ್ವಕಪ್ ಫೈನಲ್’ನಲ್ಲಿ ಕ್ರೊವೇಷಿಯಾವನ್ನು 4-2 ಗೋಲುಗಳಿಂದ ಮಣಿಸಿದ ಫ್ರಾನ್ಸ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. 20 ವರ್ಷಗಳ ಬಳಿಕ ಅಂದರೆ 1998ರ ನಂತರ ಎರಡನೇ ಬಾರಿಗೆ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.   

ವಿಶ್ವಕಪ್’ನ ಫೈನಲ್’ನಲ್ಲಿ ಈ ಬಾರಿ ಫ್ರಾನ್ಸ್ ಆಟಗಾರರಿಗಿಂತ ಹೆಚ್ಚು ಗಮನ ಸೆಳೆದದ್ದು, ಫ್ರಾನ್ಸ್ ಅಧ್ಯಕ್ಷ  ಎಮಾನುಯಲ್ ಮ್ಯಾಕ್ರೋನ್. ಫ್ರಾನ್ಸ್ ಆಟಗಾರರು ಪ್ರತಿ ಬಾರಿ ಗೋಲು ಬಾರಿಸಿದಾಗಲೂ ಗ್ಯಾಲರಿಯಲ್ಲಿ ಕುಳಿತಿದ್ದ 40 ವರ್ಷದ ಎಮಾನುಯಲ್ ಮ್ಯಾಕ್ರೋನ್ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು.

ಪಂದ್ಯದ ಬಳಿಕ ಶಿಷ್ಟಾಚಾರವನ್ನು ಬದಿಗೊತ್ತಿ ಆಟಗಾರರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಫ್ರಾನ್ಸ್ ಅಧ್ಯಕ್ಷರ ಈ ಕ್ರೀಡಾಸ್ಪೂರ್ತಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರಿಗರ ಮೆಚ್ಚುಗೆಗೆ ಪಾತ್ರವಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Virat Kohliಯಿಂದ ಪಾಂಡ್ಯವರೆಗೆ ಟೀಂ ಇಂಡಿಯಾದ ಯಾವೆಲ್ಲ ಆಟಗಾರರು ರೊನಾಲ್ಡೊ ಫ್ಯಾನ್ಸ್ ಗೊತ್ತಾ?
FIFA World Cup 2026: 0-2ರಿಂದ 3-2ಕ್ಕೆ! ಸೆನೆಗಲ್‌ಗೆ ಶಾಕ್ ನೀಡಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟ ಬೆಲ್ಜಿಯಂ