ಫಿಫಾ ವಿಶ್ವಕಪ್; ಫ್ರಾನ್ಸ್ ವಿಶ್ವ ಫುಟ್ಬಾಲ್ ಚಾಂಪಿಯನ್

 |  First Published Jul 15, 2018, 10:38 PM IST

ಫ್ರಾನ್ಸ್ ಪರ ಮೊದಲಾರ್ಧದಲ್ಲಿ ಮರಿಯಾ ಮ್ಯಾಂಡ್’ಜೊವಿಕ್[18 ನಿ] ಹಾಗೂ ಆ್ಯಂಟಿಯೋನೆ ಗ್ರೀಜ್’ಮನ್ ತಲಾ ಒಂದೊಂದು ಗೋಲು ಬಾರಿಸಿದರೆ, ದ್ವಿತಿಯಾರ್ಧದಲ್ಲಿ ಪೌಲ್ ಪೋಗ್ಬಾ[59. ನಿ] ಹಾಗೂ ಎಂಬಾಪ್ಪೆ[65.ನಿ] ಗೋಲು ಬಾರಿಸುವ ಮೂಲಕ ಫ್ರಾನ್ಸ್ ಗೆಲುವನ್ನು ಖಚಿತ ಪಡಿಸಿದರು.

ಮಾಸ್ಕೋ[ಜು.15]: ಕ್ರೊವೇಷಿಯಾ ಎದುರು ಸಂಘಟಿತ ಪ್ರದರ್ಶನ ತೋರಿದ ಫ್ರಾನ್ಸ್ 2018ನೇ ಸಾಲಿನ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರೊವೇಷಿಯಾ ಎದುರು 4-2 ಗೋಲು ಜಯ ಸಾಧಿಸುವುದರೊಂದಿಗೆ ಎರಡನೇ ಬಾರಿಗೆ ಫ್ರಾನ್ಸ್ ಫಿಫಾ ವಿಶ್ವಕಪ್’ಗೆ ಮುತ್ತಿಕ್ಕಿದೆ. ಈ ಸೋಲು ಕ್ರೊವೇಷಿಯಾದ ಚೊಚ್ಚಲ ವಿಶ್ವಕಪ್ ಕನಸು ಭಗ್ನವಾಗಿದೆ.

ಫ್ರಾನ್ಸ್ ಪರ ಮೊದಲಾರ್ಧದಲ್ಲಿ ಮರಿಯಾ ಮ್ಯಾಂಡ್’ಜೊವಿಕ್[18 ನಿ] ಹಾಗೂ ಆ್ಯಂಟಿಯೋನೆ ಗ್ರೀಜ್’ಮನ್ ತಲಾ ಒಂದೊಂದು ಗೋಲು ಬಾರಿಸಿದರೆ, ದ್ವಿತಿಯಾರ್ಧದಲ್ಲಿ ಪೌಲ್ ಪೋಗ್ಬಾ[59. ನಿ] ಹಾಗೂ ಎಂಬಾಪ್ಪೆ[65.ನಿ] ಗೋಲು ಬಾರಿಸುವ ಮೂಲಕ ಫ್ರಾನ್ಸ್ ಗೆಲುವನ್ನು ಖಚಿತ ಪಡಿಸಿದರು.

Latest Videos

undefined

ಇನ್ನು ಕ್ರೊವೇಷಿಯಾ ಪರ ಇವಾನ್ ಪೆರಿಸಿಕ್[28 ನಿ] ಹಾಗೂ ಮರಿಯೋ ಮ್ಯಾಂಡ್’ಜೊವಿಕ್[69.ನಿ] ಗೋಲು ದಾಖಲಿಸಿದರು.

1998ರಲ್ಲಿ ಅಂದರೆ 20 ವರ್ಷಗಳ ಹಿಂದೆ ಫ್ರಾನ್ಸ್ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಜಯಿಸಿತ್ತು.

click me!