RCB ತಂಡಕ್ಕೆ ಆಫ್ರಿಕಾ ವೇಗಿ ಡೇಲ್‌ ಸ್ಟೈನ್‌ ಎಂಟ್ರಿ?

By Web DeskFirst Published Apr 12, 2019, 4:27 PM IST
Highlights

ಡೇಲ್ ಸ್ಟೇನ್ 2008ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಕೂಡಿಕೊಂಡಿದ್ದರು. ತದನಂತರದಲ್ಲಿ ಸನ್’ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಮತ್ತೆ ಸ್ಟೇನ್ RCB ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 

ಬೆಂಗಳೂರು(ಏ.12): ಉತ್ತಮ ಬೌಲರ್‌ಗಳಿಲ್ಲದೆ ಐಪಿಎಲ್‌ 12ನೇ ಆವೃತ್ತಿಯಲ್ಲಿ ಸೋಲಿನ ಮೇಲೆ ಸೋಲು ಕಾಣುತ್ತಿರುವ ಆರ್‌ಸಿಬಿ ತಂಡಕ್ಕೆ ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್‌ ಸ್ಟೈನ್‌ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹಬ್ಬಿದೆ. 

ಸೋತರೂ ಡೆಲ್ಲಿ ಜತೆಗೆ ನಂ.1 ಸ್ಥಾನ ಹಂಚಿಕೊಂಡ RCB..!

ಸ್ಟೇನ್‌ ಭಾರತಕ್ಕೆ ಆಗಮಿಸುತ್ತಿರುವುದಾಗಿ ಟ್ವೀಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಅವರು ಯಾವುದಾದರೂ ಒಂದು ಐಪಿಎಲ್‌ ತಂಡ ಸೇರಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದ್ದು, ಅದು ಆರ್‌ಸಿಬಿಯೇ ಆಗಿರಲಿದೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಆಸ್ಪ್ರೇಲಿಯಾದ ವೇಗದ ಬೌಲರ್‌ ನೇಥನ್‌ ಕೌಲ್ಟರ್‌ ನೈಲ್‌ ಇನ್ನೂ ಆರ್‌ಸಿಬಿ ತಂಡ ಸೇರಿಕೊಂಡಿಲ್ಲ. ಬಹುಶಃ ಅವರು ಗಾಯಗೊಂಡಿದ್ದು, ಅವರ ಬದಲಿಗೆ ಸ್ಟೈನ್‌ರನ್ನು ಆರ್‌ಸಿಬಿ ಸೇರಿಸಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Ends with 'E', Dale Steyn joining Royal Challengers Bangalor'E' ??? 🤔🤔🤔 pic.twitter.com/GGbTi4810b

— Sachin Be Villiers (@AnonymusSachinB)

whats with all the Dale Steyn rumours to ? Is there some truth in this?

— ShashiKumar V (@SashV21)

Dale Steyn coming to India...hopefully he'll replace NCN....

— JSK (@imjsk27)

RCB fans are sticking to whatever little ray of hope they can stick to.
Right now, it is Dale Steyn's IG story!

— Romsha 🇮🇳 (@kohlischarms)

ಈ ಮೊದಲು ಡೇಲ್ ಸ್ಟೇನ್ 2008ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಕೂಡಿಕೊಂಡಿದ್ದರು. ತದನಂತರದಲ್ಲಿ ಸನ್’ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಸತತ 6 ಸೋಲು ಕಾಣುವ ಮೂಲಕ ಹೀನಾಯ ಸ್ಥಿತಿಗೆ ತಲುಪಿರುವ RCB ಇನ್ನುಳಿದ 8 ಪಂದ್ಯಗಳನ್ನು ಜಯಿಸಿದರೆ ಮಾತ್ರ ಪ್ಲೇ ಆಫ್ ಹಂತಕ್ಕೇರುವ ಅವಕಾಶವಿದೆ. ಇದೀಗ ವಿರಾಟ್ ಪಡೆ ಮೊಹಾಲಿಯಲ್ಲಿ ಶನಿವಾರ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಎದುರಿಸಲಿದೆ. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!