ತ್ರಿಪಾಠಿ ಅಬ್ಬರಕ್ಕೆ ಶರಣಾದ ನೈಟ್'ರೈಡರ್ಸ್

By Suvarna Web DeskFirst Published May 3, 2017, 6:03 PM IST
Highlights

ಗೆಲುವಿಗೆ 156 ರನ್ಗುರಿಬೆನ್ನತ್ತಿದಪುಣೆಗೆಆರಂಭಿಕಬ್ಯಾಟ್ಸ್ಮನ್ರಾಹುಲ್ತ್ರಿಪಾಠಿ(93: 52 ಎಸೆತ, 9 ಬೌಂಡರಿ, 7 ಸಿಕ್ಸರ್) ಅವರಅಮೋಘಆಟದನೆರವಾಯಿತು.

ಕೋಲ್ಕತಾ(ಮೇ.03): 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್‌ರೈಡರ್ಸ್‌ ಪ್ಲೇ-ಆಫ್ ಸ್ಥಾನ ಖಚಿತ ಪಡಿಸಿಕೊಳ್ಳಲು ಮತ್ತೊಂದು ಪಂದ್ಯವರೆಗೂ ಕಾಯಬೇಕಿದೆ. ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ಬುಧವಾರ ಪುಣೆ ಸೂಪರ್‌ಜೈಂಟ್ ವಿರುದ್ಧ ಕೆಕೆಆರ್ 4 ವಿಕೆಟ್‌ಗಳ ಸೋಲು ಅನುಭವಿಸಿತು. ಗೆಲುವಿಗೆ 156 ರನ್ ಗುರಿ ಬೆನ್ನತ್ತಿದ ಪುಣೆಗೆ ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ(93: 52 ಎಸೆತ, 9 ಬೌಂಡರಿ, 7 ಸಿಕ್ಸರ್) ಅವರ ಅಮೋಘ ಆಟದ ನೆರವಾಯಿತು. ಏಕಾಂಗಿ ಹೋರಾಟ ನಡೆಸಿದ ಅವರು ಕೇವಲ 7 ರನ್‌ಗಳಿಂದ ಶತಕ ವಂಚಿತರಾದರು.

ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆದ ಈ ಆವೃತ್ತಿಯ 41ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸ್ಪಲ್ಪಟ್ಟ ಕೆಕೆಆರ್ ಮೊದಲ ಓವರ್‌ನಲ್ಲೇ ಆಘಾತ ಅನುಭವಿಸಿತು. ಸುನಿಲ್ ನರೇನ್ ಶೂನ್ಯಕ್ಕೆ ಔಟಾದರು. ರಾಬಿನ್ ಉತ್ತಪ್ಪ ಗಾಯಗೊಂಡು ಪಂದ್ಯದಿಂದ ಹೊರಗುಳಿದ ಕಾರಣ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶೆಲ್ಡನ್ ಜಾಕ್ಸನ್ 10 ರನ್ ಗಳಿಸಿದ್ದಾಗ ಹಿಟ್ ವಿಕೆಟ್ ಆದರು. ಕೆಲ ತಿಂಗಳುಗಳ ಹಿಂದೆ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಜಾಕ್ಸನ್, ಬ್ಯಾಟಿಂಗ್ ವೇಳೆ ನಿಯಮ ಉಲ್ಲಂಘಿಸಿ ಔಟಾಗಿದ್ದರು. ಪಂದ್ಯಾವಳಿಯಲ್ಲಿ ಉತ್ತಮ ರನ್ ಬೇಟೆ ನಡೆಸುತ್ತಿರುವ ಗೌತಮ್ ಗಂಭೀರ್ 24 ರನ್ ಗಳಿಸಿದ್ದಾಗ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಅಪಾಯಕಾರಿ ಬ್ಯಾಟ್ಸ್‌ಮನ್ ಯೂಸು'ಫ್ ಪಠಾಣ್ ಕೇವಲ 4 ರನ್ ಗಳಿಸಿ ಔಟಾಗಿದ್ದು ಕೆಕೆಆರ್‌ಗೆ ಹಿನ್ನಡೆ ಉಂಟು ಮಾಡಿತು. 5ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಮನೀಶ್ ಪಾಂಡೆ(37) ಹಾಗೂ ಕಾಲಿನ್ ಡಿ ಗ್ರಾಂಡ್‌ಹೋಮ್ (36) ತಂಡವನ್ನು 100ರ ಗಡಿ ದಾಟಿಸಿದರು. ಸೂರ್ಯಕುಮಾರ್ 30 ರನ್ ಸಿಡಿಸಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲು ನೆರವಾದರು.

ಸ್ಕೋರ್

ಕೋಲ್ಕತಾ ನೈಟ್‌ರೈಡರ್ಸ್‌: 155/8 (20/20 )

ಪುಣೆ ಸೂಪರ್ ಜೈಂಟ್: 158/6 (19.2/20 )

ಪಂದ್ಯಶ್ರೇಷ್ಠ: ರಾಹುಲ್ ತ್ರಿಪಾಠಿ

click me!