ಅಜ್ಲಾನ್ ಶಾ ಟೂರ್ನಿ: ಜಪಾನ್ ಮಣಿಸಿದ ಟೀಂ ಇಂಡಿಯಾ

By Suvarna Web DeskFirst Published May 3, 2017, 1:42 PM IST
Highlights

ಪಂದ್ಯ ಕೊನೆಯ ಕ್ಷಣದಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಿದರು. ಪಂದ್ಯದ 51ನೇ ಮನ್ದೀಪ್ ಮತ್ತೊಂದು ಗೋಲು ಸಿಡಿಸಿ 3-3 ಅಂಕಗಳ ಸಮಬಲ ಸಾಧಿಸಿದರು.

ಇಫೊ(ಮೇ.03)ಮನ್‌ದೀಪ್ ಸಿಂಗ್ ಬಾರಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದಾಗಿ ಭಾರತ ತಂಡ ಅಜ್ಲಾನ್ ಶಾ ಹಾಕಿ ಪಂದ್ಯಾವಳಿಯ ತನ್ನ ನಾಲ್ಕನೇ ಪಂದ್ಯದಲ್ಲಿ ಜಪಾನ್ ವಿರುದ್ಧ 4-3 ಗೋಲುಗಳ ಅಂತರದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್ ಪ್ರವೇಶಿಸುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಪಂದ್ಯದ ಆರಂಭದಲ್ಲೇ ಪೆನಾಲ್ಟಿ ಕಾರ್ನರ್ ಮೂಲಕ ರೂಪಿಂದರ್ ಪಾಲ್ ಸಿಂಗ್ ಭಾರತಕ್ಕೆ ಮೊದಲ ಗೋಲು ದಾಖಲಿಸಿಕೊಟ್ಟರು. ಇದಾದ ಬಳಿಕ 10ನೇ ನಿಮಿಷದಲ್ಲಿ ಜಪಾನ್'ನ ಕಝುಮಾ ಮುರಾಟ ಆಕರ್ಷಕ ಗೋಲು ಸಿಡಿಸುವ ಮೂಲಕ ಇತ್ತಂಡಗಳು ಸಮಬಲ ಸಾಧಿಸುವಂತೆ ಮಾಡಿದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 1-1 ಗೋಲುಗಳ ಅಂತರದ ಸಮಬಲ ಸಾಧಿಸಿದ್ದವು.

ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಜಪಾನ್ 42ನೇ ನಿಮಿಷದಲ್ಲಿ ಜಪಾನ್'ನ ಹೆಯ್ಟಾ ಯೊಶಿಯಾರಾ, 45ನೇ ನಿಮಿಷದಲ್ಲಿ ಗೆಂಕಿ ಮಿತಾನಿ ಗೋಲು ಸಿಡಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಮನ್ದೀಪ್ ಸಿಂಗ್ ಗೋಲು ಬಾರಿಸು ಮೂಲಕ ಜಪಾನ್ 3-2 ಗೋಲುಗಳ ಮುನ್ನೆಡೆ ಸಾಧಿಸಿತು.

ಪಂದ್ಯ ಕೊನೆಯ ಕ್ಷಣದಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಿದರು. ಪಂದ್ಯದ 51ನೇ ಮನ್ದೀಪ್ ಮತ್ತೊಂದು ಗೋಲು ಸಿಡಿಸಿ 3-3 ಅಂಕಗಳ ಸಮಬಲ ಸಾಧಿಸಿದರು. ಇದಾದ ಬಳಿಕ ಪಂದ್ಯದ ಕಡೆ ಘಳಿಗೆಯಲ್ಲಿ ಅಂದರೆ 58ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಮತ್ತೊಂದು ಗೋಲು ದಾಖಲಿಸುವ ಮೂಲಕ ಟೀಂ ಇಂಡಿಯಾ ಜಯದ ನಗೆ ಬೀರುವಂತೆ ಮಾಡಲು ಯಶಸ್ವಿಯಾದರು.

ಪಂದ್ಯದ ಕೊನೆ 15 ನಿಮಿಷಗಳಲ್ಲಿ ಸತತ ಮೂರು ಗೋಲು ಬಾರಿಸಿದ ಮನ್‌'ದೀಪ್ ಭಾರತ ತಂಡದ ಗೆಲುವಿನ ರೂವಾರಿ ಎನಿಸಿದರು.

click me!