
ನವದೆಹಲಿ(ಜು.15): ಪ್ರೊ ಕಬಡ್ಡಿ ಆರಂಭವಾದಗಿನಿಂದಲೂ ಟೂರ್ನಿಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ಬಂದಿದೆ
ಇದೇ ಜುಲೈ 28 ರಿಂದ ಆರಂಭವಾಗಲಿರುವ 5ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿ ಮೊತ್ತ 8 ಕೋಟಿಗೆ ಏರಿಸಲಾಗಿದೆ.
ಇದು 2016 ರಲ್ಲಿ ನಡೆದಿದ್ದ 4ನೇ ಆವೃತ್ತಿಯ ಪ್ರಶಸ್ತಿ ಮೊತ್ತಕ್ಕಿಂತ 2 ಕೋಟಿ ಹೆಚ್ಚಾಗಿದೆ. ಮೊದಲ ಬಾರಿಗೆ 12 ತಂಡಗಳನ್ನು ಲೀಗ್'ನಲ್ಲಿ ಕಣಕ್ಕಿಳಿಯುತ್ತಿದ್ದು, 138 ಪಂದ್ಯಗಳು ನಡೆಯಲಿವೆ. ಹಾಗೆ ಚಾಂಪಿಯನ್ ಆಗುವ ತಂಡ 3 ಕೋಟಿ ಹಣವನ್ನು ಗಳಿಸಿದರೆ, ರನ್ನರ್ ಅಪ್ ತಂಡ 1.8 ಕೋಟಿ ಮತ್ತು ತೃತೀಯ ಸ್ಥಾನ ಪಡೆಯುವ ತಂಡ 1.2 ಕೋಟಿ ಹಣವನ್ನು ಪಡೆಯಲಿದೆ.
ಕಳೆದ 4 ಆವೃತ್ತಿಗಳಲ್ಲಿ 8 ತಂಡಗಳು ಮಾತ್ರ ಆಡಿದ್ದವು. ಈ ಲೀಗ್'ನಲ್ಲಿ 4ನೇ ಸ್ಥಾನ ಪಡೆಯುವ ತಂಡ 80 ಲಕ್ಷ, 5 ಹಾಗೂ 6ನೇ ಸ್ಥಾನ ಪಡೆಯುವ ತಂಡ ತಲಾ 35 ಲಕ್ಷ ರುಪಾಯಿಗಳನ್ನು ಪಡೆಯಲಿವೆ. ಇನ್ನು ಲೀಗ್'ನ ಅತ್ಯುತ್ತಮ ಆಟಗಾರ 15 ಲಕ್ಷ, ಉತ್ತಮ ರೈಡರ್ ಹಾಗೂ ಉತ್ತಮ ಡಿಫೆಂಡರ್ ತಲಾ 10 ಲಕ್ಷ, ಟೂರ್ನಿಯ ಯುವ ಆಟಗಾರ 8 ಲಕ್ಷ ಹಣವನ್ನು ಪಡೆಯಲಿದ್ದಾರೆ.
ಈ ಆವೃತ್ತಿಯ ಉದ್ಘಾಟನಾ ಪಂದ್ಯ 28 ರಂದು ಹೈದರಾಬಾದ್'ನಲ್ಲಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ತಮಿಳು ತಲೈವಾಸ್ ತಂಡಗಳು ಸೆಣಸಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.