ವಿಶ್ವ ಪ್ಯಾರಾ ಅಥ್ಲೇಟಿಕ್ಸ್'ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಸುಂದರ್ ಸಿಂಗ್

By Suvarna Web DeskFirst Published Jul 15, 2017, 5:45 PM IST
Highlights

ರಾಜಸ್ಥಾನ ಮೂಲದ 21 ವರ್ಷದ ಸುಂದರ್ 60.36 ಮೀಟರ್ ದೂರ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

ಲಂಡನ್(ಜು.15): ವಿಶ್ವ ಪ್ಯಾರಾ ಅಥ್ಲೇಟಿಕ್ಸ್ ಚಾಂಪಿಯನ್ಸ್'ಶಿಪ್'ನ ಜಾವಲಿನ್ ಎಸೆತ ವಿಭಾಗದಲ್ಲಿ ಸುಂದರ್ ಸಿಂಗ್ ಗುರ್ಜಾರ್ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವ ಮೂಲಕ ದಾಖಲೆ ಭಾರತದ ಪದಕಗಳ ಬೇಟೆಗೆ ಆರಂಭ ಒದಗಿಸಿದ್ದಾರೆ.

ರಾಜಸ್ಥಾನ ಮೂಲದ 21 ವರ್ಷದ ಸುಂದರ್ 60.36 ಮೀಟರ್ ದೂರ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

ರಿಯೋ ಪ್ಯಾರಾ ಒಲಿಂಪಿಕ್ಸ್'ನಲ್ಲಿ ತಡವಾಗಿ ಸ್ಪರ್ದೆಗೆ ಹಾಜರಾದ ಹಿನ್ನೆಲೆಯಲ್ಲಿ ಸುಂದರ್ ಸ್ಪರ್ದೆಯನ್ನು ಅಮಾನ್ಯ ಮಾಡಲಾಗಿತ್ತು. ರಾಷ್ಟೀಯ ದಾಖಲೆ ನಿರ್ಮಿಸಿರುವ ಸುಂದರ್ ರಿಯೋ ಕೂಟದಲ್ಲಿ ಇಂಗ್ಲೀಷ್ ಉಚ್ಚಾರಣೆಯನ್ನು ಸರಿಯಾಗಿ ಗ್ರಹಿಸದ ಹಿನ್ನೆಲೆಯಲ್ಲಿ ಅವರು ಸ್ಪರ್ದೆಯಲ್ಲಿ ಸರಿಯಾಗಿ ಹಾಜರಾಗಲು ಸಾಧ್ಯವಾಗಿರಲಿಲ್ಲ.

ಆದರೆ ಆರು ತಿಂಗಳು ಹಿಂದೆ ಫಾಜ್ ಐಪಿಸಿ ಅಥ್ಲೇಟಿಕ್ಸ್ ಗ್ರ್ಯಾಂಡ್ ಪಿಕ್ಸ್ ಟೂರ್ನಿಯಲ್ಲಿ ಮೂರು ಪದಕ ಗೆದ್ದಿದ್ದರು. ಇದೀಗ ಲಂಡನ್'ನಲ್ಲಿ ನಡೆಯುತ್ತಿರುವ ಪ್ಯಾರಾ ಅಥ್ಲೇಟಿಕ್ಸ್ ಟೂರ್ನಿಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

click me!