ಟಿ-20 ಟಾಪ್ ಸ್ಕೋರರ್ ಲಿಸ್ಟ್‌ನಲ್ಲಿರುವ ಭಾರತೀಯನ್ಯಾರು?

First Published Jul 3, 2018, 5:43 PM IST
Highlights

ಟಿ-20ಯಲ್ಲಿ ಫಿಂಚ್ ದಾಖಲೆಯ ಶತಕ ಬಾರಿಸಿದ್ದಾರೆ. ಇದರೊಂದಿಗೆ ಹಲವಾರು ಮೈಲಿಗಲ್ಲುಗಳಿಗೂ ಪಾತ್ರವಾಗಿದ್ದಾರೆ. ಟಿ-20 ಟಾಪ್ 10 ಪಟ್ಟಿಯಲ್ಲಿ ಇದೀಗ ಒಬ್ಬ ಭಾರತೀಯ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಆ ಭಾರತೀಯ ಬ್ಯಾಟ್ಸ್ ಮನ್ ಯಾರು? ಇದಲ್ಲಿದೆ ಉತ್ತರ

ಐಪಿಎಲ್ ನಲ್ಲಿ ಬೌಲರ್ ಗಳನ್ನು ಚೆಂಡಾಡುವ ಭಾರತೀಯ ದಾಂಡಿಗರು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ವಿಚಾರಕ್ಕೆ ಬಂದರೆ ವೈಯಕ್ತಿಕ ಸ್ಟೋರ್ ಪಟ್ಟಿಯಲ್ಲಿ ಕೊಛ ಹಿಂದೆಯೇ ಇದ್ದಾರೆ. ಟಾಪ್ -10 ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕೇಲವಲ ಒಬ್ಬರಿಗೆ ಮಾತ್ರ ಸ್ಥಾನ ಇದೆ.

ಜಿಂಬಾಬ್ವೆ ವಿರುದ್ಧದ ಟಿ-20 ಯಲ್ಲಿ ಕೇವಲ 72 ಚೆಂಡುಗಳಲ್ಲಿ 172 ರನ್ ಬಾರಿಸಿದ  ಆಸ್ಟ್ರೇಲಿಯಾ ನಾಯಕ ಅರೋನ್ ಫಿಂಚ್ ಪಟ್ಟಿಯಲ್ಲಿ ಅಗ್ರಗಣ್ಯರಾಗಿದ್ದರೆ ಎರಡನೇ ಸ್ಥಾನದಲ್ಲಿಯೂ ಇಂಗ್ಲೆಂಡ್ ವಿರುದ್ಧ ಅವರೇ ಬಾರಿಸಿದ್ದ 156 ರನ್ ಇದೆ. ಭಾರತದ  ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಪಟ್ಟಿಯಲ್ಲಿ 10ನೇ ಯವರಾಗಿ ಸ್ಥಾನವಿರಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ 2017ರಲ್ಲಿ ಸಿಡಿಸಿದ್ದ 118 ರನ್ ಅವರನ್ನು10 ನೇ ಸ್ಥಾನದಲ್ಲಿರುವಂತೆ ನೋಡಿಕೊಂಡಿದೆ.

ಫಿಂಚ್ ಪಂಚ್.. ಪುಡಿ ಪುಡಿ ಮಾಡಿದ ದಾಖಲೆಗಳೆಷ್ಟು?

ಟಿ-20 ಅತ್ಯಧಿಕ ಟಾಪ್-10 ರನ್ ಗಳಿಕೆದಾರರು

1. ಅರೋನ್ ಫಿಂಚ್ -172[72]-ಜಿಂಬಾಬ್ವೆ ವಿರುದ್ಧ

2. ಅರೋನ್ ಫಿಂಚ್ -156[63]-ಇಂಗ್ಲೆಂಡ್ ವಿರುದ್ಧ

3. ಮಾಕ್ಸ್ ವೆಲ್ -145* [65]-ಶ್ರೀಲಂಕಾ ವಿರುದ್ಧ

4. ಇವಿನ್ ಲಿವೀಸ್ - 125*[62] ಭಾರತದ ವಿರುದ್ಧ

5. ಶೇನ್ ವಾಟ್ಸನ್-124* [71] ಭಾರತದ ವಿರುದ್ಧ

6.ಬ್ರೆಂಡನ್ ಮೆಕ್ ಲಮ್-123[58] ಬಾಂಗ್ಲಾ ವಿರುದ್ಧ

7  ಬಾಬರ್ ಹಯಾತ್-122[60] ಓಮೆನ್ ವಿರುದ್ಧ

8. ಡುಪ್ಲೆಸಿಸ್-119[56] ವೆಸ್ಟ್ ಇಂಡೀಸ್ ವಿರುದ್ಧ

9. ಮೊಹಮದ್ ಶಾಜಾದ್ -118* [67] ಜಿಂಬಾಬ್ವೆ ವಿರುದ್ಧ

10. ರೋಹಿತ್ ಶರ್ಮಾ-118[43] ಶ್ರೀಲಂಕಾ ವಿರುದ್ಧ

click me!