
ಕ್ರಿಕೆಟ್ ನಲ್ಲಿ ಪ್ರತಿ ದಿನ ಹೊಸ ದಾಖಲೆಗಳು ನಿರ್ಮಾಣವಾಗುತ್ತಲೆ ಇರುತ್ತವೆ. ಜಿಂಬಾಬ್ವೆ ವಿರುದ್ಧದ ಟಿ-20 ಯಲ್ಲಿ ಕೇವಲ 72 ಚೆಂಡುಗಳಲ್ಲಿ 172 ರನ್ ಬಾರಿಸಿದ ಆಸ್ಟ್ರೇಲಿಯಾ ನಾಯಕ ಅರೋನ್ ಫಿಂಚ್ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ತಮ್ಮದೇ ಹೆಸರಿನಲ್ಲಿದ್ದ ಟಿ-20ಯಲ್ಲಿ ಅತ್ಯಧಿಕ ಸ್ಕೋರ್ ದಾಖಲೆಯನ್ನು(156] ಮತ್ತಷ್ಟು ಉತ್ತಮ ಮಾಡಿಕೊಂಡಿದ್ದಾರೆ. 16 ಬೌಂಡರಿ ಮತ್ತು 10 ಸಿಕ್ಸರ್ ನೆರವಿನ ಪಿಂಚ್ ಸ್ಪೋಟಕ ಇನಿಂಗ್ಸ್ ಹೈಲೈಟ್ಸ್ ಇಲ್ಲಿದೆ.
1. ಅರೋನ್ ಫಿಂಚ್ ಮತ್ತು ಡಿಕ್ರಿ ಶಾರ್ಟ್ ಟಿ-20 ಕ್ರಿಕೆಟ್ ನಲ್ಲಿ 200 ರನ್ ಗೂ ಅಧಿಕ ಜತೆಯಾಟದಲ್ಲಿ ಭಾಗಿಯಾದರು.
2. ತಮ್ಮದೇ ದಾಖಲೆ ಮುರಿದುಕೊಂಡ ಟಿ-20 ಕ್ರಿಕೆಟ್ ನ ಮೊದಲನೇ ಆಟಗಾರ ಅರೋನ್ ಫಿಂಚ್.
3. ಟಿ-20ಯಲ್ಲಿ ಎರಡು ಸಾರಿ 150ಕ್ಕೂ ಅಧಿಕ ರನ್ ಬಾರಿಸಿದ್ದು ಅರೋನ್ ಪಿಂಚ್.
4 . ಇನಿಂಗ್ಸ್ ವೊಂದರಲ್ಲಿ 10 ಮತ್ತು ಅದಕ್ಕಿಂತ ಜಾಸ್ತಿ ಸಿಕ್ಸರ್ ಬಾರಿಸಿದ ಪಿಂಚ್ ಎರಡು ಸಾರಿ ಈ ಸಾಧನೆ ಮಾಡಿದ ಶ್ರೇಯ ಪಡೆದುಕೊಂಡರು.
5. ಟಿ-20 ಇತಿಹಾಸದಲ್ಲಿ ಕ್ರಿಸ್ ಗೇಲ್ 175 ರನ್ (ಆರ್ ಸಿಬಿ] ಗಿಂತ ಕೇವಲ ಮೂರು ರನ್ ಕಡಿಮೆ ದಾಖಲಿಸಿದರು.
6. ಅರೋನ್ ಪಿಂಚ್ ಮತ್ತು ಡಿಕ್ರಿ ಶಾರ್ಟ್ ಟಿ-20 ಕ್ರಿಕೆಟ್ ನಲ್ಲಿ ಅತಿಹೆಚ್ಚಿನ ರನ್ ದಾಖಲಿಸಿದ ಜತೆಯಾಟದಲ್ಲಿ ಪಾಲ್ಗೊಂಡರು.
7. ಟಿ-20 ಯಲ್ಲಿ ನಿರಂತರವಾಗಿ ಮೂರು ಸಾರಿ 50 ಮತ್ತು ಅದಲ್ಲಿಂತ ಹೆಚ್ಚಿನ ರನ್ ಸಾಧನೆ ಮಾಡಿದ 18 ನೇ ಬ್ಯಾಟ್ಸ್ ಮನ್ ಫಿಂಚ್.
8. ಆಸ್ಟ್ರೇಲಿಯಾದ ಒಟ್ಟು ಮೊತ್ತ 229ಕ್ಕೆ ಫಿಂಚ್ ಕೊಡುಗೆ ಶೇ. 75.11. ಇದು ದಾಖಲೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.