
ಮಿಯಾಮಿ(ಡಿ.31): ವಿಶ್ವ ಗಾಲ್ಫ್ ಜಗತ್ತಿನ ಸ್ಟಾರ್ ಅಮೆರಿಕದ ಟೈಗರ್ ವುಡ್ಸ್ 41ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಆಪ್ತೇಷ್ಟರ ಸಮ್ಮುಖದಲ್ಲಿ ವುಡ್ಸ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 14 ಬಾರಿ ಪ್ರಮುಖ ಟ್ರೋಫಿ ಜಯಿಸಿರುವ ಸಾಧನೆ ಮಾಡಿರುವ ವುಡ್ಸ್ ಇತ್ತೀಚೇಗಷ್ಟೇ ವೃತ್ತಿಪರ ಗಾಲ್ಫ್‌ಗೆ ಮರಳಿದ್ದರು.
ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವುಡ್ಸ್ 466 ದಿನಗಳ ವಿಶ್ರಾಂತಿ ಬಳಿಕ ಗಾಲ್ಫ್‌ಗೆ ಮರಳಿ ಬಂದಿದ್ದಾರೆ.
ಡಿಸೆಂಬರ್ ವೇಳೆ ಬಹಮಾಸ್‌ನಲ್ಲಿ 18 ಮಂದಿ ಗಾಲ್ಫರ್‌ಗಳನ್ನೊಳಗೊಂಡಿದ್ದ ಹಿರೋ ವಿಶ್ವ ಚಾಲೆಂಜ್ ಗಾಲ್ಫ್ ಟೂರ್ನಿಯ 72 ಹೋಲ್ಸ್ ಗೇಮ್ಸ್'ನಲ್ಲಿ ವುಡ್ಸ್ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಗಮನಸೆಳೆದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.