
ನಟಿ ಕರೀನಾ ಕಪೂರ್ ಪುತ್ರ ‘ತೈಮೂರ್' ಹೆಸರು ವಿವಾದಕ್ಕೀಡಾದ ಬೆನ್ನಲ್ಲೇ ಈಗ ಅಂಥದ್ದೇ ಸುಳಿಗೆ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಿಲುಕಿದ್ದಾರೆ. ವೇಗದ ಬೌಲರ್ ಇರ್ಫಾನ್ ಪಠಾಣ್ ತಮ್ಮ ಮಗನಿಗೆ ‘ಇಮ್ರಾನ್ ಖಾನ್' ಎಂದು ಹೆಸರಿಟ್ಟಿರೋದು ಟ್ವಿಟ್ಟರಿಗರ ಆಕ್ರೋಶಕ್ಕೆ ಕಾರಣವಾಗಿದೆ. ‘ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್‌ಖಾನ್ ಹೆಸರನ್ನೇ ಮಾದರಿಯಾಗಿಟ್ಟುಕೊಂಡು ಇರ್ಫಾನ್ ತಮ್ಮ ಮಗನಿಗೆ ಈ ಹೆಸರನ್ನಿಟ್ಟಿದ್ದಾರೆ' ಎನ್ನುವುದು ಕೆಲವರ ಆರೋಪ. ಆದರೆ, ಇರ್ಫಾನ್ ಇದನ್ನು ಬಲವಾಗಿ ತಳ್ಳಿಹಾಕಿದ್ದು, ‘ಟ್ರಾಲ್ ಮಾಡುವವರಿಗೆ ಬಹಳ ಫ್ರೀ ಟೈಮ್ ಇದೆ. ಆದರೆ, ನನಗಿಲ್ಲ. ಇಮ್ರಾನ್‌ಖಾನ್ ಎಂಬ ಹೆಸರು ನಮ್ಮ ಕುಟುಂಬಕ್ಕೆ ತೀರಾ ಹತ್ತಿರವಾದುದು. ಇಮ್ರಾನ್ ಎನ್ನುವವನು ನನ್ನ ಸಹೋದರ. ನನ್ನ ತಾಯಿಗೆ ಮೊದಲು ಹುಟ್ಟಿದ ಮಗು. ಅಕಾಲಿಕವಾಗಿ ಸಾವನ್ನಪ್ಪಿ, ಆತ ನಮ್ಮೊಂದಿಗಿಲ್ಲ. ಅವನ ಹೆಸರನ್ನೇ ನಾವಿಟ್ಟಿದ್ದೇವೆ. ನನ್ನ ಮಗನ ಹೆಸರು ಏನೇ ಇರಬಹುದು, ಆದರೆ ಮುಂದೊಂದು ದಿನ ಅವನು ದೇಶಕ್ಕೆ ಹೆಮ್ಮೆ ತಂದೇ ತರುತ್ತಾನೆ ಎನ್ನುವ ವಿಶ್ವಾಸವಂತೂ ನಮಗಿದೆ' ಎಂದಿದ್ದಾರೆ. ಇರ್ಫಾನ್ ಪಠಾಣ್ ಹೀಗೆಲ್ಲ ಹೇಳಿದ ಮೇಲೂ ಟ್ವಿಟ್ಟರಿನ ಕೆಲವು ಮನಸ್ಸುಗಳಿಗೆ ಸಂಶಯ ದೂರವಾಗಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.