ಫಿಫಾ ವಿಶ್ವಕಪ್: ಇದು ಗೋಲ್ಡನ್ ಬಾಲ್ ಗೆದ್ದವರ ಬ್ಯಾಡ್’ಲಕ್..!

Published : Jul 16, 2018, 05:33 PM IST
ಫಿಫಾ ವಿಶ್ವಕಪ್: ಇದು ಗೋಲ್ಡನ್ ಬಾಲ್ ಗೆದ್ದವರ ಬ್ಯಾಡ್’ಲಕ್..!

ಸಾರಾಂಶ

ಕಳೆದೊಂದು ತಿಂಗಳಿನಿಂದ ಫುಟ್ಬಾಲ್ ಅಭಿಮಾನಿಗಳ ಮನಗೆದ್ದಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್’ನಲ್ಲಿ ಕ್ರೊವೇಷಿಯಾವನ್ನು 4-2 ಗೋಲುಗಳಿಂದ ಮಣಿಸಿ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಂಗ್ಲೆಂಡ್’ನ ಹ್ಯಾರಿ ಕೇನ್ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದರೆ, ಕ್ರೊವೇಷಿಯಾದ ಲೂಕಾ ಮಾಡ್ರಿಚ್ ಗೋಲ್ಡನ್ ಬಾಲ್ ಪ್ರಶಸ್ತಿ ಪಡೆದರು. ಆದರೆ ಕಳೆದ ಆರು ಆವೃತ್ತಿಗಳಲ್ಲೂ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದವರು ಒಂದು ಬ್ಯಾಡ್’ಲಕ್ ಎದುರಿಸಿರುವುದು ಮಾತ್ರ ಕಾಕತಾಳೀಯ.

ಬೆಂಗಳೂರು[ಜು.16]: ಕಳೆದೊಂದು ತಿಂಗಳಿನಿಂದ ಫುಟ್ಬಾಲ್ ಅಭಿಮಾನಿಗಳ ಮನಗೆದ್ದಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್’ನಲ್ಲಿ ಕ್ರೊವೇಷಿಯಾವನ್ನು 4-2 ಗೋಲುಗಳಿಂದ ಮಣಿಸಿ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಂಗ್ಲೆಂಡ್’ನ ಹ್ಯಾರಿ ಕೇನ್ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದರೆ, ಕ್ರೊವೇಷಿಯಾದ ಲೂಕಾ ಮಾಡ್ರಿಚ್ ಗೋಲ್ಡನ್ ಬಾಲ್ ಪ್ರಶಸ್ತಿ ಪಡೆದರು. ಆದರೆ ಕಳೆದ ಆರು ಆವೃತ್ತಿಗಳಲ್ಲೂ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದವರು ಒಂದು ಬ್ಯಾಡ್’ಲಕ್ ಎದುರಿಸಿರುವುದು ಮಾತ್ರ ಕಾಕತಾಳೀಯ.

ಹೌದು 1998ರಿಂದೀಚೆಗೆ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದವರ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಲ್ಲ. ಫಿಫಾ ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದವರಿಗೆ ಗೋಲ್ಡನ್ ಬಾಲ್ ನೀಡಲಾಗುತ್ತೆ. ಆದರೆ ಕಳೆದ ಆರು ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಗೋಲ್ಡನ್ ಬಾಲ್ ಗೆದ್ದವರ ತಂಡ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದೆ.

ವಿಚಿತ್ರವಾದರೂ ಇದು ಸತ್ಯ. 1994ರಲ್ಲಿ ರೊಮೇರಿಯಾ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದಾಗ ಬ್ರೆಜಿಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆ ಬಳಿಕ 1998ರಿಂದೀಚೆಗೆ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದವರು ತಮ್ಮ ತಂಡವನ್ನು ಚಾಂಪಿಯನ್ ಮಾಡುವಲ್ಲಿ ವಿಫಲವಾಗಿದ್ದಾರೆ.

ಇಲ್ಲಿದೆ ಆ ಪಟ್ಟಿ: 

2018 - ಲೂಕಾ ಮಾಡ್ರಿಚ್ - ಕ್ರೊವೇಷಿಯಾ

2014 - ಲಿಯೋನೆಲ್ ಮೆಸ್ಸಿ - ಅರ್ಜೆಂಟೀನಾ

2010 - ಡಿಯಾಗೋ ಪ್ಲೋರೆನ್ - ಉರುಗ್ವೆ

2008 - ಜಿನೆದಿನ್ ಜಿದಾನ್ - ಫ್ರಾನ್ಸ್

2002 - ಓಲಿವರ್ ಖಾನ್ - ಜರ್ಮನ್

1998 - ರೊನಾಲ್ಡೊ - ಬ್ರೆಜಿಲ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ ₹10 ಲಕ್ಷ ಕೊಡಿ, ಮೆಸ್ಸಿ ಜತೆಗೆ ಒಂದು ಫೋಟೋ ತೆಗೆಸಿಕೊಳ್ಳಿ! ಕೇವಲ 100 ಮಂದಿಗಷ್ಟೇ ಈ ಚಾನ್ಸ್!
ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಸ್ವಾಗತಕ್ಕೆ ಕೋಲ್ಕತಾ ಸಜ್ಜು! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್