
ಸಂಕಟ ಬಂದಾಗ ವೆಂಕಟರಮಣ, ಬಂದ ಕಷ್ಟಗಳನ್ನ ದೂರ ಮಾಡಪ್ಪ ಅಂತಾ ದೇವರ ಮೋರೆ ಹೋಗುವುದು ಸಾಮಾನ್ಯ. ಇನ್ನೂ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳಬೇಕೆಂದರೆ ಮುಕ್ಕೋಟಿ ದೇವರಗಳನ್ನೂ ಸುತ್ತು ಹೊಡೆಯುತ್ತಾರೆ. ಅದಕ್ಕೆ ಕ್ರಿಕೆಟರ್'ಗಳು ಹೊರತಾಗಿಲ್ಲ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿವಿಧ ದೇವರುಗಳನ್ನು ಹರಸಿ ಹೋಗುತ್ತಾರೆ.
ಟೀಂ ಇಂಡಿಯಾದಲ್ಲಿ ಸ್ಥಾನ ಕೊಡಿಸಪ್ಪ ದೇವರೇ ಅಂತ ಸಾಷ್ಟಾಂಗ ನಮಸ್ಕಾರ ಹಾಕುವ ಯುವ ಕ್ರಿಕೆಟರ್ಗಳು ಒಂದು ಕಡೆಯಾದರೆ, ಫಾರ್ಮ್ ಕಳೆದುಕೊಂಡು ಟೀಂನಿಂದ ಕಿಕೌಟ್ ಆದ ಕೆಲವರು ಮತ್ತೆ ಕಮ್ಬ್ಯಾಕ್ ಮಾಡಿಸಪ್ಪ ಅಂತ ದೇವರಿಗೆ ಬಕೀಟ್ ಹಿಡಿಯುವುದು ಸರ್ವೇ ಸಾಮಾನ್ಯ.
ಹಾಗೋ ಹೀಗೋ ದೇವರು ಇವರ ಪ್ರಾರ್ಥನೆಗೆ ಕರಗಿ ಟೀಂ ಇಂಡಿಯಾದಲ್ಲಿ ಅವಕಾಶ ಕೊಡಿಸಿದರೂ ಆಡುವ ಹನ್ನೊಂದರಲ್ಲಿ ಆಡಬೇಕಾದರೆ ನಾಯಕನನ್ನು ಒಲಸಿಕೊಳ್ಳಲು ಅತ್ಯವಶ್ಯಕ. ಅದಕ್ಕಾಗಿ ತಮ್ಮ ಪ್ರದರ್ಶನವಲ್ಲದೇ ಇನ್ನು ಹೆಚ್ಚಿನದ್ದನ್ನು ಮಾಡಲೇಬೇಕು.
ಆದರೆ ಸದ್ಯ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗಾಗಿ ನಾಗ್ಪುರ್'ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಆಟಗಾರರು, ನಿನ್ನೆ ಅಭ್ಯಾಸ ನಡೆಸಿದರು. ಆದರೆ ಅಭ್ಯಾಸದ ವೇಳೆ ನಡೆದ ಒಂದು ಘಟನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಇದು ನಿನ್ನೆ ಕಾನ್ಪುರದಲ್ಲಿ ಅಭ್ಯಾಸದ ವೇಳೆ ಕಂಡ ದೃಶ್ಯ. ಟೀಂ ಇಂಡಿಯಾ ಕಾನ್ಪುರದ ಗ್ರೀನ್ ಪಾರ್ಕ್'ನಲ್ಲಿ ಅಭ್ಯಾಸ ನಡೆಯುತ್ತಿದ್ದಾಗ ಅಲ್ಲಿಗೆ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಭೇಟಿ ನೀಡಿದರು. ಈ ವೇಳೆ ಶುಕ್ಲಾ ಬಳಿಬಂದ ಟೀಂ ಇಂಡಿಯಾದ ಯುವ ಕ್ರಿಕೆಟರ್ ಮಂದೀಪ್ ಸಿಂಗ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಹಿರಿಯರು ಅಂತ ಕಾಲಿಗೆ ಬಿದ್ದರೋ..?: ಚಾನ್ಸ್ ಕೊಡಿಸಲಿ ಅಂತ ಕಾಲಿಗೆ ಬಿದ್ದರೋ..?
ಸಾಮಾನ್ಯವಾಗಿ ಯಾರೇ ಬಿಸಿಸಿಐ ಅಧಿಕಾರಿಗಳನ್ನು ಆಟಗಾರರು ಕಂಡರೆ ಅವರನ್ನ ತಬ್ಬಿ ವಿಶ್ ಮಾಡುವುದು ಸಾಮಾನ್ಯ. ಆದರೆ ಈ ಯುವ ಕ್ರಿಕೆಟರ್ ಶುಕ್ಲಾ ಕಾಲಿಗೆ ಬಿದ್ದಿರುವುದು ಸದ್ಯ ಹಲವರಲ್ಲಿ ಅನುಮಾನ ಮೂಡಿಸಿದೆ. ತಂಡದಲ್ಲಿನ ಸ್ಥಾನಕ್ಕಾಗಿ ಬಕೇಟ್ ಹಿಡಿಯುತ್ತಿದ್ದಾರೆ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.