ಶ್ರೀಶಾಂತ್ ಮನವಿ ತಿರಸ್ಕೃತ; ಕಮರಿದ ಶ್ರೀಶಾಂತ್ ಕನಸು..!

By Suvarna Web DeskFirst Published Jan 24, 2017, 3:59 PM IST
Highlights

ಬಿಸಿಸಿಐನಿಂದ ಎನ್‌'ಒಸಿ ಪತ್ರ ದೊರೆತರೆ ಸ್ಕಾಟ್ಲೆಂಡ್‌ಗೆ ತೆರಳಿ ಅಲ್ಲಿನ ದೇಶಿಯ ಲೀಗ್‌'ನಲ್ಲಿ ಆಡುವ ಆಶಯವನ್ನು ಶ್ರೀಶಾಂತ್ ಹೊಂದಿದ್ದರು.

ನವದೆಹಲಿ(ಜ.24): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಆಜೀವ ನಿಷೇಧಕ್ಕೆ ಗುರಿಯಾಗಿರುವ ವಿವಾದಾತ್ಮಕ ವೇಗದ ಬೌಲರ್ ಎಸ್. ಶ್ರೀಶಾಂತ್, ಸ್ಕಾಟ್ಲೆಂಡ್ ಕ್ರಿಕೆಟ್ ಲೀಗ್‌ನಲ್ಲಿ ಸ್ಪರ್ಧೆಬಯಸಿ ಬಿಸಿಸಿಐನಿಂದ ಕೋರಿದ್ದ ನಿರಾಕ್ಷೇಪಣಾ ಪತ್ರ (ಎನ್‌'ಒಸಿ) ತಿರಸ್ಕೃತಗೊಂಡಿದೆ.

2013ರ ವೇಳೆ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟು ಸೆರೆವಾಸಕ್ಕೂ ಗುರಿಯಾಗಿದ್ದರು. ಬಳಿಕ ಸೆರೆಯಿಂದ ಬಿಡುಗಡೆಯಾಗಿರುವ ಶ್ರೀಶಾಂತ್ ಅವರನ್ನು ಶಾಶ್ವತವಾಗಿ ಕ್ರಿಕೆಟ್ ಚಟುವಟಿಕೆಯಿಂದ ಬಿಸಿಸಿಐ ದೂರ ಇಟ್ಟಿದೆ.

Latest Videos

ಆದರೆ, ಬಿಸಿಸಿಐನಿಂದ ಎನ್‌'ಒಸಿ ಪತ್ರ ದೊರೆತರೆ ಸ್ಕಾಟ್ಲೆಂಡ್‌ಗೆ ತೆರಳಿ ಅಲ್ಲಿನ ದೇಶಿಯ ಲೀಗ್‌'ನಲ್ಲಿ ಆಡುವ ಆಶಯವನ್ನು ಶ್ರೀಶಾಂತ್ ಹೊಂದಿದ್ದರು. ಅವರ ಕನಸೀಗ ಕಮರಿದಂತಾಗಿದೆ.

click me!