
ಎರಡು ದಿನಗಳ ಕಾಲ ನಡೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದೆ. 8 ಪ್ರಾಂಚೈಸಿಗಳು ಹರಾಜಿನಲ್ಲಿ 169 ಆಟಗಾರರನ್ನು ಖರೀದಿಸಿದ್ದಾರೆ.
ಬೆನ್ ಸ್ಟೋಕ್ಸ್(12.5 ಕೋಟಿಯಿಂದ)ರಿಂದ ಹಿಡಿದು ಕೇವಲ 16 ವರ್ಷದ ಆಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಜರ್ದಾನ್(4 ಕೋಟಿ)ಗೆ ಹರಾಜಾಗುವ ಮೂಲಕ ಅಚ್ಚರಿಗೆ ಕಾರಣರಾದರು. ಆದರೆ ನಾವು ಪಟ್ಟಿ ಮಾಡಿದ ಈ ಆಟಗಾರರು 613 ಐಪಿಎಲ್ ಪಂದ್ಯವನ್ನಾಡಿದರೂ ಇವರನ್ನು ಯಾವೊಬ್ಬ ಪ್ರಾಂಚೈಸಿಯೂ ಖರೀದಿಸಲು ಮನಸ್ಸು ಮಾಡಲಿಲ್ಲ.
ಕಳೆದ IPL ಆವೃತ್ತಿಯಲ್ಲಿ 2 ಶತಕ ಸಿಡಿಸಿದ ಹಾಶೀಂ ಆಮ್ಲಾ, ಶಾನ್ ಮಾರ್ಶ್, ಮಾರ್ಗನ್, ಗಪ್ಟಿಲ್ ಅವರನ್ನು ಖರೀದಿಸಲು ಯಾವೊಬ್ಬ ಪ್ರಾಂಚೈಸಿಯೂ ಖರೀದಿಸಲು ಮನಸ್ಸು ಮಾಡದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಅನ್'ಸೋಲ್ಡ್ XI ತಂಡ ಹೀಗಿದೆ ನೋಡಿ:
ಮಾರ್ಟಿನ್ ಗುಪ್ಟಿಲ್, ಲಿಂಡ್ಲೆ ಸಿಮೊನ್ಸ್, ಹಾಶೀಂ ಆಮ್ಲಾ, ಶಾನ್ ಮಾರ್ಷ್, ಇಯಾನ್ ಮಾರ್ಗಲ್, ಇರ್ಫಾನ್ ಪಠಾಣ್, ರಜತ್ ಭಾಟಿಯಾ, ಮೆಕ್'ಗ್ಲಾರನ್, ಆ್ಯಡಂ ಜಂಪಾ, ಲಸಿತ್ ಮಾಲಿಂಗ, ಇಶಾಂತ್ ಶರ್ಮಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.