
ಹೊಡಿಬಿಡಿ ಆಟಕ್ಕೆ ಹೆಸರಾಗಿರುವ ಟಿ20 ಕ್ರಿಕೆಟ್'ನಲ್ಲಿ ಯುವಕರೇ ಹೆಚ್ಚು ಮಿಂಚುವುದು ಸಾಮಾನ್ಯ. ಆದರೆ 2 ವರ್ಷಗಳ ನಿಷೇಧದ ಬಳಿಕ ಐಪಿಎಲ್'ಗೆ ಕಮ್'ಬ್ಯಾಕ್ ಮಾಡಿರುವ ಚೆನ್ನೈ ಸೂಪರ್'ಕಿಂಗ್ಸ್ ಬೇರೆಯದ್ದೇ ಐಡಿಯಾದೊಂದಿಗೆ ಕಣಕ್ಕಿಳಿಯುತ್ತಿದೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹೆಚ್ಚಾಗಿ 30 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೇ ಮಣೆ ಹಾಕಿದ್ದು ಅಚ್ಚರಿಗೆ ಕಾರಣವಾಗಿದೆ. ಸಿಎಸ್'ಕೆ ನಾಯಕ ಧೋನಿಗೆ (36), ತಾಹಿರ್ (38), ಹಭರ್ಜನ್ (37), ವಾಟ್ಸನ್ (36), ಬ್ರಾವೋ (34), ಡುಪ್ಲೆಸಿ (33), ಜಾಧವ್ (32), ರಾಯುಡು(32), ರೈನಾ (31), ಕರ್ಣ್ ಶರ್ಮಾ (30) ವಯಸ್ಸಾಗಿದೆ.
CSK ತಂಡದ 30+ ಆಟಗಾರರ ಆಯ್ಕೆಯನ್ನು ನೋಡಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಇದು ಐಪಿಎಲ್ ತಂಡವೋ ಇಲ್ಲಾ ವೃದ್ದಾಶ್ರಮವೋ ಎಂದು ಟ್ವೀಟ್'ನಲ್ಲೇ ತಮಾಶೆ ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.